ಬೆಂಗಳೂರು :ನಿನ್ನೆ ನಡೆದ ಸಮಾರಂಭದಲ್ಲಿ ನನ್ನ ಭಾಷಣವನ್ನು ಮೊಟಕುಗೊಳಿಸುವ ಪ್ರಯತ್ನ ನಡೆದಿಲ್ಲ. ನಾನು ಕೇವಲ ಶುಭ ಕೋರಿ ತೆರಳುತ್ತೇನೆ ಎಂದು ಮೊದಲೇ ಹೇಳಿದ್ದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (Opposition leader Siddaramaiah) ತಿಳಿಸಿದ್ದಾರೆ.
ಬೆಂಗಳೂರಿನ ಶಿವಾನಂದ ವೃತ್ತ ಸಮೀಪ ಇರುವ ಸರ್ಕಾರಿ ನಿವಾಸದಲ್ಲಿ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ನಮ್ಮ ಭಾಷಣ ಅರ್ಧದಲ್ಲಿ ಮೊಟಕುಗೊಳಿಸಲಾಗಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ 'ಅಡ್ಡಿಯೂ ಇಲ್ಲ, ಪಡ್ಡಿಯೂ ಇಲ್ಲ. ನಾನು ಮೊದಲೇ ಭಾಷಣ ಮಾಡಲ್ಲ, ಶುಭ ಕೋರಿ ಹೋಗುತ್ತೇನೆ ಎಂದು ಹೇಳಿದ್ದೆ. ಹಾಗಾಗಿ, ಭಾಷಣ ಅರ್ಧಕ್ಕೆ ಮುಗಿಸಿದೆ' ಎಂದರು.