ಕರ್ನಾಟಕ

karnataka

ETV Bharat / state

ಜಾಗಟೆ ಬಾರಿಸಿ ಕೊರೊನಾ ಓಡಿಸಿದ ಪ್ರಧಾನಿಯಿಂದ ಕೊರೊನಾ ಕರ್ಫ್ಯೂ ಘೋಷಣೆ: ರಮೇಶ್ ಬಾಬು ವ್ಯಂಗ್ಯ - ಕೊರೊನಾ ಕರ್ಫ್ಯೂ ಟೀಕಿಸಿದ ರಮೇಶ್ ಬಾಬು

ಪ್ರಧಾನಿ ಮೋದಿ ಭಕ್ತರಿಗೆ ನಿರಾಸೆ ಉಂಟು ಮಾಡಿದ್ದಾರೆ! ಶಂಖ ಊದಿ ಜಾಗಟೆ ಬಾರಿಸಿ ಕೊರೊನಾ ಓಡಿಸಿದ್ದ ಪ್ರಧಾನಿಯಿಂದ ಹೊಸ ಘೋಷಣೆ ಕೊರೊನಾ ಕರ್ಫ್ಯೂ !! ಯಾರದ್ದೋ ತಲೆಗೆ ಕಟ್ಟಿ ತಪ್ಪಿಸಿಕೊಳ್ಳಲು ಈ ಸಲ ಪ್ರಧಾನಿಗಳಿಗೆ ಸಾಧ್ಯವಾಗಿಲ್ಲ. ಕೊರೊನಾ ತೆರಿಗೆ ಹಾಕಿ ಕೊರೊನಾ ಓಡಿಸುವ ಸಲಹೆ ಖಾಸು ಮಂತ್ರಿ ಸೀತಕ್ಕನೂ ನೀಡಿಲ್ಲ! ಅಷ್ಟರ ಮಟ್ಟಿಗೆ ಜನ ಬಚಾವ್ ಎಂದು ರಮೇಶ್ ಬಾಬು ವ್ಯಂಗ್ಯವಾಡಿದ್ದಾರೆ.

ರಮೇಶ್ ಬಾಬು
ರಮೇಶ್ ಬಾಬು

By

Published : Apr 9, 2021, 5:21 AM IST

ಬೆಂಗಳೂರು:ನೈಟ್ ಕರ್ಫ್ಯೂ ಅನ್ನು ಕೊರೊನಾ ಕರ್ಫ್ಯೂ ಎಂದು ಪರಿಗಣಿಸುವಂತೆ ಸೂಚಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರ ನಿಲುವನ್ನು ಕಾಂಗ್ರೆಸ್ ಮುಖಂಡ ರಮೇಶ್ ಬಾಬು ತೀವ್ರವಾಗಿ ಖಂಡಿಸಿದ್ದಾರೆ.

ಟ್ವೀಟ್ ಮೂಲಕ ತಮ್ಮ ಅಸಮಾಧಾನ ವ್ಯಕ್ತಪಡಿಸಿರುವ ಬಾಬು, ಪ್ರಧಾನಿ ಮೋದಿ ಭಕ್ತರಿಗೆ ನಿರಾಸೆ ಉಂಟು ಮಾಡಿದ್ದಾರೆ! ಶಂಖ ಊದಿ ಜಾಗಟೆ ಬಾರಿಸಿ ಕೊರೊನಾ ಓಡಿಸಿದ್ದ ಪ್ರಧಾನಿಯಿಂದ ಹೊಸ ಘೋಷಣೆ ಕೊರೊನಾ ಕರ್ಫ್ಯೂ !! ಯಾರದ್ದೋ ತಲೆಗೆ ಕಟ್ಟಿ ತಪ್ಪಿಸಿಕೊಳ್ಳಲು ಈ ಸಲ ಪ್ರಧಾನಿಗಳಿಗೆ ಸಾಧ್ಯವಾಗಿಲ್ಲ. ಕೊರೊನಾ ತೆರಿಗೆ ಹಾಕಿ ಕೊರೊನಾ ಓಡಿಸುವ ಸಲಹೆ ಖಾಸು ಮಂತ್ರಿ ಸೀತಕ್ಕನೂ ನೀಡಿಲ್ಲ! ಅಷ್ಟರ ಮಟ್ಟಿಗೆ ಜನ ಬಚಾವ್ ಎಂದು ಲೇವಡಿ ಮಾಡಿದ್ದಾರೆ.

ರಮೇಶ್ ಬಾಬು ಟ್ವೀಟ್

ಇದನ್ನೂ ಓದಿ: ಕೊರೊನಾ 2ನೇ ಅಲೆ ಅಪಾಯ: ನೈಟ್ ಕರ್ಫ್ಯೂ ಅಲ್ಲ,​ ಕೊರೊನಾ ಕರ್ಪ್ಯೂ ಅನ್ನಿ: ಮೋದಿ ಕರೆ

ಕೋವಿಡ್ ಮಹಾಮಾರಿ ಹೆಚ್ಚುತ್ತಿರುವ 11 ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಪ್ರಧಾನಿ ಮೋದಿ ವಿಡಿಯೋ ಮೂಲಕ ವರ್ಚುವಲ್​ ಸಭೆ ನಡೆಸಿದರು.

ಬಳಿಕ ಮಾತನಾಡಿ ಪ್ರಧಾನಿ, 'ನೈಟ್ ಕರ್ಪ್ಯೂ ಅನ್ನು ಇನ್ನು ಮುಂದೆ ಕೊರೊನಾ ಕರ್ಪ್ಯೂ ಎಂದು ಪರಿಗಣಿಸಿ' ಎಂದು ಕರೆಕೊಟ್ಟರು. ನೈಟ್ ಕರ್ಪ್ಯೂ ಸಮಯವನ್ನು ರಾತ್ರಿ 9 ಅಥವಾ 10ರಿಂದ ಬೆಳಗ್ಗೆ 5ರಿಂದ 6 ಗಂಟೆಯವರೆಗೆ ಜಾರಿಗೊಳಿಸುವುದು ಉತ್ತಮ ಎಂದು ಸಲಹೆ ನೀಡಿದ್ದಾರೆ‌.

ಪ್ರತಿಪಕ್ಷ ಕಾಂಗ್ರೆಸ್ ಪ್ರಧಾನಮಂತ್ರಿಗಳ ನಿಲುವನ್ನು ತೀವ್ರವಾಗಿ ಖಂಡಿಸಿದ್ದು, ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ.

ABOUT THE AUTHOR

...view details