ಬೆಂಗಳೂರು: ಕೋವಿಡ್ ಸಾವಿನ ಸಂಖ್ಯೆಯನ್ನು ತಾಂತ್ರಿಕವಾಗಿ ಮುಚ್ಚಿ ಹಾಕುವ ಕಾರ್ಯವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವ್ಯವಸ್ಥಿತವಾಗಿ ಮಾಡಿವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಆರೋಪ ಮಾಡಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಕೋವಿಡ್‌ನಿಂದಾಗಿ ಕೇವಲ 7 ತಿಂಗಳಲ್ಲಿ ಇಷ್ಟು ಜನ ಸತ್ತಿದ್ದೇಕೆ? ಈ ವರ್ಷದಲ್ಲೇ 1.63 ಲಕ್ಷಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಕೇವಲ 7 ತಿಂಗಳಲ್ಲಿ ಇಷ್ಟು ಜನ ಸಾವು ಹೇಗೆ? ಬೇರೆ ಕಾಯಿಲೆಯಿಂದ ಬಳಲುತ್ತಿದ್ದ ಅವರು ನೋವಿನಿಂದಾಗಿ ಸಾವನ್ನಪ್ಪಿದ್ದಾರೆ. ಅದನ್ನು ಕೋವಿಡ್ ಸಾವು ಎಂದು ಪರಿಗಣಿಸುತ್ತಿಲ್ಲ. ಇನ್ನೆಲ್ಲ ವಿವಿಧ ರೋಗಗಳಿಂದ ಬಳಲುತ್ತಿದ್ದ ಅವರ ಸಾವನ್ನು ಮುಚ್ಚಿ ಹಾಕಲಾಗಿದೆ ಎಂದು ಆರೋಪಿಸಿದರು.
ಯಾವುದೇ ರೋಗ ಲಕ್ಷಣ ವಿಲ್ಲದೆ ಚಿಕಿತ್ಸೆ ಕೊರತೆಯಿಂದಾಗಿ ಸತ್ತವರನ್ನ ಮಾತ್ರ ಪರಿಗಣಿಸಲಾಗಿದೆ. ರಾಜ್ಯದಲ್ಲಿ ಸಾವು ಕೇವಲ 30 ಸಾವಿರ ಎಂದು ತಿಳಿಸಲಾಗಿದೆ. ಆದರೆ, ಅಸಲಿಯಾಗಿ ಸಾವನ್ನಪ್ಪಿದವರ ಸಂಖ್ಯೆ, ನಾವು ನೀಡಿದ ದಾಖಲೆಯಲ್ಲಿದೆ. ಲಕ್ಷಾಂತರ ಮಂದಿ ಸಾವನ್ನಪ್ಪಿದಾರೆ. ಆದರೆ, ಕಾರಣ ನೀಡಿ ಸರ್ಕಾರ ತಪ್ಪಿಸಿಕೊಳ್ಳುವ ಯತ್ನ ಮಾಡುತ್ತಿದೆ.
ಈ ಮೂಲಕ ಪರಿಹಾರ ನೀಡುವುದು ಉಳಿಸಿಕೊಳ್ಳುವ ಜೊತೆಗೆ ಸಾವಿನ ವಿಷಯದಲ್ಲಿ ತನಗೂ ಅಪಮಾನವನ್ನು ಮುಚ್ಚಿಡುವ ಪ್ರಯತ್ನವನ್ನು ರಾಜ್ಯ ಸರ್ಕಾರ ಮಾಡುತ್ತಿದೆ. ಇದೇ ಪ್ರಯತ್ನವನ್ನು ಕೇಂದ್ರ ಸರ್ಕಾರ ಸಹ ಮಾಡಿದೆ ಎಂದು ಆರೋಪಿಸಿದರು.