ಬೆಂಗಳೂರು:ನೇತಾಜಿ ಸುಭಾಶ್ ಚಂದ್ರ ಬೋಸ್ ಆಟದ ಮೈದಾನದಲ್ಲಿ 2,000 ಸಾವಿರ ಭಕ್ತರ ಉಚಿತ ಪ್ರವಾಸ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಲಾಯಿತು. ಈ ಪ್ರವಾಸವು ಮಲೆ ಮಹದೇಶ್ವರ ಬೆಟ್ಟ, ನಿಮಿಷಾಂಬದೇವಿ ದೇವಸ್ಥಾನ, ಶ್ರೀರಂಗಪಟ್ಟಣ ರಂಗನಾಥ ದೇವಸ್ಥಾನ, ಮೈಸೂರು ಚಾಮುಂಡಿಬೆಟ್ಟ, ನಂಜನಗೂಡು ಶ್ರೀ ಕಂಠೇಶ್ವರ ದೇವಸ್ಥಾನಗಳನ್ನು ಒಳಗೊಂಡಿದೆ. ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡ ರಘುವೀರ್ ಎಸ್.ಗೌಡ ಅವರು ಗೋ ಪೂಜೆ ಸಲ್ಲಿಸಿ, ಆಗಮಿಸಿದ್ದ ಭಕ್ತ ಸಮುದಾಯಕ್ಕೆ ಶುಭ ಹಾರೈಸಿ, ಬೀಳ್ಕೊಟ್ಟರು.
ಬಳಿಕ ರಘುವೀರ್ ಎಸ್.ಗೌಡ ಮಾತನಾಡಿ, ಬಡವರ, ಹಿರಿಯ ನಾಗರಿಕರ ಸೇವೆ ಮಾಡುವುದು ಏಳು ಜನ್ಮದ ಪುಣ್ಯದ ಫಲ. ತಂದೆ, ತಾಯಿ ಮತ್ತು ಗುರುಹಿರಿಯರ ಆಶೀರ್ವಾದದಿಂದ ಕಳೆದ 20 ವರ್ಷಗಳಿಂದ ನಿರಂತರ ಜನಸೇವೆ ಮಾಡಿಕೊಂಡು ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಜನರಿಗೆ ಮನೆಯ ಮಗನಾಗಿ ಅವರ ನೋವು, ನಲಿವುಗಳಿಗೆ ಸದಾ ಸ್ಪಂದಿಸುತ್ತಿದ್ದೇನೆ ಎಂದು ಹೇಳಿದರು.