ಬೆಂಗಳೂರು: ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಸಚಿವ ಮುನಿರತ್ನ ಪೊಲೀಸರನ್ನು ಬಳಸಿಕೊಂಡು ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಸುಳ್ಳು ಪ್ರಕರಣ ದಾಖಲು ಮಾಡಿಸುತ್ತಿದ್ದಾರೆ. ಕಾಂಗ್ರೆಸ್ ಪರ ಕೆಲಸ ಮಾಡೋ ಕಾರ್ಯಕರ್ತರನ್ನು ಟಾರ್ಗೆಟ್ ಮಾಡಲಾಗ್ತಿದೆ. ಅಲ್ಲಿ ಪೊಲೀಸರು ಕೂಡ ಮುನಿರತ್ನ ಮಾತನ್ನು ಮೀರ್ತಿಲ್ಲ ಎಂದು ಕಾಂಗ್ರೆಸ್ ಮುಖಂಡೆ ಕುಸುಮ ಹನುಮಂತರಾಯಪ್ಪ ಆರೋಪಿಸಿದ್ದಾರೆ.
ಮುನಿರತ್ನ ಪೊಲೀಸ್ ಬಳಸಿಕೊಂಡು ದಬ್ಬಾಳಿಕೆ ಮಾಡ್ತಿದ್ದಾರೆ: ಕಮಿಷನರ್ಗೆ ಕೈ ಮುಖಂಡೆ ದೂರು - ಮುನಿರತ್ನ ವಿರುದ್ಧ ದೂರು ದಾಖಲು ಮಾಡಿದ ಕುಸುಮ
ಸಚಿವ ಮುನಿರತ್ನ ನಾಯ್ಡು ವಿರುದ್ಧ ಗಂಭೀರ ಆರೋಪ ಮಾಡಿರುವ ಕುಸುಮ, ಆರ್. ಆರ್. ನಗರ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ನಿರಂತರ ದೌರ್ಜನ್ಯ ಆಗುತ್ತಿದೆ. ಪೋಲಿಸರನ್ನು ದುರುಪಯೋಗಪಡಿಸಿಕೊಂಡು ಭಯದ ವಾತಾವರಣ ನಿರ್ಮಾಣ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಮುನಿರತ್ನ ಪೊಲೀಸರನ್ನು ಬಳಸಿಕೊಂಡು ದಬ್ಬಾಳಿಕೆ ಮಾಡ್ತಿದ್ದಾರೆ ಎಂದು ಆರೋಪ
ಇದೇ ವಿಚಾರವಗಿ ಇಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ಗೆ ಕುಸುಮ ಹನುಮಂತರಾಯಪ್ಪ ದೂರು ನೀಡಿದ್ದಾರೆ. ಆರ್. ಆರ್. ನಗರ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ನಿರಂತರ ದೌರ್ಜನ್ಯ ಆಗುತ್ತಿದೆ. ಪೋಲಿಸರನ್ನು ದುರುಪಯೋಗಪಡಿಸಿಕೊಂಡು ಮುನಿರತ್ನ ಭಯದ ವಾತಾವರಣ ನಿರ್ಮಾಣ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಸುಳ್ಳು ಕೇಸ್‌ಗಳನ್ನ ಹಾಕಿಸಿ ವಿನಾಃಕಾರಣ ತೊಂದರೆ ಕೊಡ್ತಿದ್ದಾರೆ. ಒಂದೇ ಡಿವಿಷನಲ್‌ನಲ್ಲೇ ಪೊಲೀಸ್ ಸಿಬ್ಬಂದಿ ವರ್ಗಾವಣೆಗೊಂಡು ಅಲ್ಲೇ ಉಳಿದಿದ್ದಾರೆ ಎಂದು ಕುಸುಮಾ ಹರಿಹಾಯ್ದರು.
Last Updated : Apr 8, 2022, 7:15 PM IST