ಬೆಂಗಳೂರು: ಕಾಂಗ್ರೆಸ್ ಮುಖಂಡರೊಬ್ಬರು ನೇಣಿಗೆ ಶರಣಾಗಿರುವ ಘಟನೆ ಯಲಹಂಕ ನ್ಯೂಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಅನಾರೋಗ್ಯದಿಂದ ಬೇಸತ್ತು ನೇಣಿಗೆ ಕೊರಳೊಡ್ಡಿದ ಕಾಂಗ್ರೆಸ್ ಮುಖಂಡ! - ಕಾಂಗ್ರೆಸ್ ಮುಖಂಡ ಆತ್ಮಹತ್ಯೆ
ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತಿದ್ದ ಕಾಂಗ್ರೆಸ್ ಮುಖಂಡರೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ವೀರಣ್ಣ ಗೌಡ ಮೃತ ಕಾಂಗ್ರೆಸ್ ಮುಖಂಡ
ವೀರಣ್ಣ ಗೌಡ ಮೃತ ಕಾಂಗ್ರೆಸ್ ಮುಖಂಡ. ಮೂಲತಃ ಹೆಸರುಘಟ್ಟದವರಾಗಿದ್ದ ವೀರಣ್ಣ, ರಿಯಲ್ ಎಸ್ಟೇಟ್ ಹಾಗೂ ಹೋಟೆಲ್ ಬಿಜಿನೆಸ್ನಲ್ಲಿ ತೊಡಗಿಸಿಕೊಂಡಿದ್ರು. ಜೊತೆಗೆ ಕೆಲ ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ರು.
ಕಳೆದ ಕೆಲ ದಿನಗಳಿಂದ ಪ್ಯಾಂಕ್ರಿಯಾಟಿಟಿಸ್ ಕಾಯಿಲೆಗಳಿಂದ ಬಳಲುತಿದ್ದ ಅವರು ಅನಾರೋಗ್ಯದಿಂದ ಬೇಸತ್ತು ನಿನ್ನೆ ರಾತ್ರಿ ಯಲಹಂಕ ಉಪನಗರದ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಘಟನೆ ಸಂಬಂಧ ಯಲಹಂಕ ನ್ಯೂ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.