ಬೆಂಗಳೂರು: ಕಾಂಗ್ರೆಸ್ನ ಹಿರಿಯ ಮುಖಂಡರ ಸಮ್ಮುಖದಲ್ಲಿ ನಡೆದ ಸಿಎಲ್ಪಿ ಸಭೆ ಮುಕ್ತಾಯವಾಗಿದೆ. ರಾಜೀನಾಮೆ ನೀಡಿದ ಅತೃಪ್ತರನ್ನು ಅನರ್ಹಗೊಳಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಡಿಸಿಎಂ ಡಾ. ಜಿ. ಪರಮೇಶ್ವರ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಸೇರಿದಂತೆ ಮತ್ತಿತರ ನಾಯಕರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸದ ಅತೃಪ್ತ ಶಾಸಕರ ವಿರುದ್ಧ ಸ್ಪೀಕರ್ಗೆ ಪಕ್ಷಾಂತರ ಕಾಯ್ದೆ ಅನ್ವಯ ಅನರ್ಹಗೊಳಿಸುವಂತೆ ದೂರು ನೀಡಲು ನಿರ್ಧರಿಲಾಗಿದೆ.
ಸಭೆಗೆ ಹಾಜರಾದವರು:
ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್, ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್, ಸಚಿವ ಪ್ರಿಯಾಂಕ್ ಖರ್ಗೆ, ಸಚಿವ ಆರ್. ವಿ. ದೇಶಪಾಂಡೆ, ಕೆಜಿಎಫ್ ನ ರೂಪಾ ಶಶಿಧರ್, ಕುಷ್ಟಗಿ ಶಾಸಕ ಅಮರೇಗೌಡ ಭಯ್ಯಾಪೂರ, ಬೈಲಹೊಂಗಲ ಶಾಸಕ ಮಹಾಂತೇಶ್ ಕೌಜಲಗಿ, ವರುಣಾ ಶಾಸಕ ಯತೀಂದ್ರ ಸಿದ್ದರಾಮಯ್ಯ, ತನ್ವೀರ್ ಸೇಠ್, ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್, ಲಿಂಗಸುಗೂರು ಶಾಸಕ ಡಿ.ಎಸ್. ಹುಲಗೇರಿ, ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ, ಜಮಖಂಡಿ ಶಾಸಕ ಆನಂದ್ ನ್ಯಾಮಗೌಡ, ಬಾಗೇಪಲ್ಲಿ ಶಾಸಕ ಸುಬ್ಬಾರೆಡ್ಡಿ, ಶಿಡ್ಲಘಟ್ಟ ಶಾಸಕ ವಿ.ಮುನಿಯಪ್ಪ, ಸಚಿವ ಶಿವಶಂಕರ್ ರೆಡ್ಡಿ, ಹೆಚ್.ಡಿ. ಕೋಟೆ ಶಾಸಕ ಅನಿಲ್ ಚಿಕ್ಕಮಾದು, ಸಚಿವ ಶಿವಾನಂದ ಪಾಟೀಲ್, ಅಫ್ಜಲಪುರ ಶಾಸಕ ಎಂ.ವೈ. ಪಾಟೀಲ್, ಸಚಿವ ರಾಜಶೇಖರ್ ಪಾಟೀಲ್, ಮುಖ್ಯ ಸಚೇತಕ ಗಣೇಶ್ ಹುಕ್ಕೇರಿ, ಕಾಗವಾಡ ಶಾಸಕ ಶ್ರೀಮಂತ್ ಪಾಟೀಲ್, ಧಾರವಾಡದ ಪ್ರಸಾದ್ ಅಬ್ಬಯ್ಯ, ಸಚಿವ ವೆಂಕಟರಮಣಪ್ಪ, ಜಯನಗರ ಶಾಸಕಿ ಸೌಮ್ಯಾ ರಾಮಲಿಂಗಾರೆಡ್ಡಿ, ಬಸವಕಲ್ಯಾಣ ಶಾಸಕ ನಾರಾಯಣ್ ರಾವ್, ಬೆಳಗಾವಿ ಗ್ರಾಮೀಣ ಲಕ್ಷ್ಮಿ ಹೆಬ್ಬಾಳ್ಕರ್, ಶಾಂತಿನಗರ ಶಾಸಕ ಹ್ಯಾರೀಸ್, ವಿಜಯನಗರ ಶಾಸಕ ಎಂ. ಕೃಷ್ಣಪ್ಪ, ಸಚಿವ ಜಮೀರ್ ಅಹ್ಮದ್, ಮಾಲೂರು ಶಾಸಕ ನಂಜೇಗೌಡ, ಹಗರಿಬೊಮ್ಮನಹಳ್ಳಿ ಶಾಸಕ ಭೀಮಾ ನಾಯ್ಕ, ಜೆ.ಎನ್. ಗಣೇಶ್ ಮತ್ತಿತರರು ಆಗಮಿಸಿದ್ದರು.
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಸಭೆಗೆ ಗೈರು ಹಾಜರಾದವರು:
ಎಸ್.ಟಿ. ಸೋಮಶೇಖರ್- ಯಶವಂತಪುರ, ಭೈರತಿ ಬಸವರಾಜು- ಕೆ.ಆರ್. ಪುರಂ, ಮುನಿರತ್ನ- ರಾಜರಾಜೇಶ್ವರಿನಗರ, ರಾಮಲಿಂಗಾರೆಡ್ಡಿ- ಬಿಟಿಎಂ ಲೇಔಟ್, ಪ್ರತಾಪ್ ಗೌಡ ಪಾಟೀಲ್- ಮಸ್ಕಿ, ಮಹೇಶ್ ಕುಮಟಳ್ಳಿ- ಅಥಣಿ, ರಮೇಶ್ ಜಾರಕಿಹೊಳಿ- ಗೋಕಾಕ್, ನಾಗೇಂದ್ರ- ಬಳ್ಳಾರಿ ಗ್ರಾಮೀಣ, ಅಂಜಲಿ ನಿಂಬಾಳ್ಕರ್- ಖಾನಾಪೂರ, ಡಾ.ಸುಧಾಕರ್- ಚಿಕ್ಕಬಳ್ಳಾಪುರ, ರಾಜೇಗೌಡ- ಶೃಂಗೇರಿ, ಬಿ.ಸಿ.ಪಾಟೀಲ್- ಹಿರೇಕೆರೂರು, ಶಿವರಾಂ ಹೆಬ್ಬಾರ್- ಯಲ್ಲಾಪುರ, ರೋಷನ್ ಬೇಗ್- ಶಿವಾಜಿನಗರ, ಎಂಟಿಬಿ ನಾಗರಾಜು- ಹೊಸಕೋಟೆ ಇವರೆಲ್ಲ ಸಭೆಗೆ ಗೈರು ಹಾಜರಾಗಿದ್ದರು.