ಕರ್ನಾಟಕ

karnataka

ETV Bharat / state

ಬೇಡಿಕೆ ಈಡೇರದಿದ್ದರೆ ಹೋರಾಟ: ಸರ್ಕಾರಕ್ಕೆ‌ ಎಚ್ಚರಿಕೆ ನೀಡಿದ ಸಿದ್ದರಾಮಯ್ಯ...! - corona package

ಕೊರೊನಾ ಪ್ಯಾಕೇಜ್​ ಸಂಬಂಧ ಇಟ್ಟಿರುವ ಬೇಡಿಕೆ ಈಡೇರದಿದ್ದರೆ ಹೋರಾಟ ಮಾಡುವುದಕ್ಕಾಗಿ ಸರ್ಕಾರಕ್ಕೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.

congress, jds leaders meets yadiyurappa
ಬೇಡಿಕೆ ಈಡೇರದಿದ್ದರೆ ಹೋರಾಟ

By

Published : May 8, 2020, 3:50 PM IST

ಬೆಂಗಳೂರು:ಲಾಕ್​​ಡೌನ್ ನಿಂದ ಸಂಕಷ್ಟಕ್ಕೆ ಸಿಲುಕಿರುವವರ ನೆರವಿಗೆ ರಾಜ್ಯ ಸರ್ಕಾರ ಘೋಷಿಸಿರುವ ಪ್ಯಾಕೇಜ್​ನಲ್ಲಿ ಇನ್ನೂ ಸಾಕಷ್ಟು ವರ್ಗವನ್ನು ಸೇರಿಸಬೇಕು, ಪರಿಹಾರದ ಮೊತ್ತ ಹೆಚ್ಚಿಸಬೇಕು ಎಂದು ಪ್ರತಿಪಕ್ಷ ಬೇಡಿಕೆ ಇಟ್ಟಿದೆ.

ಬೇಡಿಕೆ ಈಡೇರದಿದ್ದರೆ ಹೋರಾಟ

ನಮ್ಮ ಬೇಡಿಕೆ ಈಡೇರಿಸದಿದ್ದರೆ ಹೋರಾಟ ಮಾಡುತ್ತೇವೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಭೇಟಿ ನಂತರ ಮಾತನಾಡಿದ ಅವರು, ಈಗ ಘೋಷಣೆ ಮಾಡಿರುವ ಪರಿಹಾರ ಧನ ಸಾಕಾಗಲ್ಲ. ಲಕ್ಷಾಂತರ ರೂ. ಖರ್ಚು ಮಾಡಿ ಹೂ ಬೆಳೆಯಬೇಕಾಗುತ್ತದೆ . ಹೂ ಬೆಳೆಗಾರರಿಗೆ ಕೊಟ್ಟ ಹಣ ಸಾಕಾಗಲ್ಲ, ಹೆಕ್ಟೇರ್​​​​​​ಗೆ 25 ಸಾವಿರ ರೂ ಸಾಕಾಗಲ್ಲ ಅಂದ್ರು. ಕೈಬಿಟ್ಟಿರುವ ಎಲ್ಲಾ ಸಮುದಾಯದ ಜನರಿಗೂ ಪರಿಹಾರ ಕೊಡಬೇಕು. ರೈತರಿಗೆ ಹೊಸದಾಗಿ ಬಡ್ಡಿ ರಹಿತವಾಗಿ ಸಾಲ ಕೊಡಬೇಕು. ರೈತರು ಈಗಾಗಲೇ ಪಡೆದಿರುವ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಿ ಎಂದು ಆಗ್ರಹಿಸಿದರು.

ಕೇರಳ ಮತ್ತು ತೆಲಂಗಾಣದಲ್ಲಿ ದೊಡ್ಡ ಮೊತ್ತದ ಪರಿಹಾರ ಕೊಟ್ಟಿದ್ದಾರೆ. ಕೇಂದ್ರ ಸರ್ಕಾರದಿಂದ ದೊಡ್ಡ ಪ್ಯಾಕೇಜ್ ತರಬೇಕು. ಅದಕ್ಕೆ ರಾಜ್ಯ ಸರ್ಕಾರ ಎಲ್ಲಾ ಪ್ರಯತ್ನ ಮಾಡಬೇಕು ಎಂದರು. ನಮ್ಮ ರಾಜ್ಯದ ಆರ್ಥಿಕ ಸ್ಥಿತಿಯಲ್ಲಿ ಪರಿಸ್ಥಿತಿ ಹೇಗೆ ನಿಭಾಯಿಸಬೇಕು ಅಂತ ಸಲಹೆ ಕೊಡಲು ಪ್ರತಿಪಕ್ಷ ಸಿದ್ಧವಿದೆ.
ತಕ್ಷಣವೇ ವಿಶೇಷ ಅಧಿವೇಶನ ಕರೆಯಬೇಕು. ಅಧಿವೇಶನ ಕರೆದರೆ ಸೂಕ್ತ ಸಲಹೆ ಕೊಡುತ್ತೇವೆ ಎಂದರು.ಇನ್ನು ಮುಂದಿನ ಜೂನ್, ಜುಲೈ ಆಗಸ್ಟ್ ನಮಗೆ ಕ್ರೂಷಿಯಲ್ ಟೈಂ, ಕೊರೊನಾ ಹೆಚ್ಚಾಗಲಿದೆ ಅಂತ ಸಿದ್ದರಾಮಯ್ಯ ಆತಂಕ ವ್ಯಕ್ತಪಡಿಸಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ,

ಸಿಎಂಗೆ ಎಲ್ಲಾ ಸಮುದಾಯದ ಅಭಿಪ್ರಾಯ ತಿಳಿಸಿದ್ದೇವೆ. ಎಲ್ಲಾ ಸಮುದಾಯಕ್ಕೂ ಹೆಚ್ಚಿನ ಆರ್ಥಿಕ ಸಹಾಯಧನ ನೀಡಬೇಕಾಗಿದೆ. ಕೊಟ್ಟ ಮನವಿಯಲ್ಲಿ ಎಲ್ಲವನ್ನೂ ಹೇಳಲಾಗಿದೆ. ಮೂರು ತಿಂಗಳು ಕೈಗಾರಿಕೆಗಳಿಗೆ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಬೇಕು. ಬಾಣಂತಿಯರ ಊಟ ದುರ್ಬಳಕೆ ಮಾಡಿದ್ದ ಬಗ್ಗೆ ಸಿಎಂ ಗೆ ತಿಳಿಸಿದ್ದೇವೆ. ರೆಡ್ ಝೋನ್​​ ನಲ್ಲಿ ನಿಯಮ ಉಲ್ಲಂಘನೆ ಮಾಡಿದ ಬಗ್ಗೆ ಸಹ ಹೇಳಿದ್ದೇವೆ. 50 ಸಾವಿರ ಕೋಟಿ ರೂ ಪ್ಯಾಕೇಜ್ ಗೆ ಕೇಂದ್ರಕ್ಕೆ ಒತ್ತಾಯ ಮಾಡಿ ಎಂದು ಒತ್ತಾಯ ಮಾಡಿದ್ದೇವೆ, ನಮ್ಮ ನಿಯೋಗ ಕೊಟ್ಟಿರುವ ಬೇಡಿಕೆಗಳನ್ನು ಸಿಎಂ ಈಡೇರಿಸಬೇಕು ಎಂದು ಒತ್ತಾಯಿಸಿದರು.

ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್. ಕೆ. ಕುಮಾರಸ್ವಾಮಿ ಮಾತನಾಡಿ,
ರೈತರ ಕೇರ್ ನಲ್ಲಿ ತುಂಬಾ ಹಣ ಇದೆ. ಅದನ್ನು ರೈತರಿಗೆ ನೀಡಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಕೊರೊನಾ ವಾರಿಯರ್ಸ್ ಗೆ ಯಾವುದೇ ತೊಂದರೆ ಆಗಬಾರದು. ಎಲ್ಲ ಸಮುದಾಯವನ್ನು ಪರಿಗಣಿಸಿ ಪರಿಹಾರ ಕೊಡಬೇಕು ಎಂದರು.

ABOUT THE AUTHOR

...view details