ಬೆಂಗಳೂರು: ಕಾಂಗ್ರೆಸ್ ನಾಯಕರು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಸಚಿವ ಆರ್. ಅಶೋಕ್ ಟೀಕಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಕೃಷಿ ಕಾಯ್ದೆ ಬಂದ ಮೇಲೆ ಬಿಹಾರ, ಹೈದರಾಬಾದ್ ನಲ್ಲಿ ಬಿಜೆಪಿ ಗೆದ್ದಿರುವುದು. ಒಂದು ವರ್ಷದಲ್ಲಿ ಕಾಂಗ್ರೆಸ್ ಅಸ್ತಿತ್ವ ಕಳೆದುಕೊಂಡು ದಿಕ್ಕು ದೆಸೆ ಇಲ್ಲದ ಹಾಗಾಗುತ್ತದೆ ಎಂದು ಕಿಡಿಕಾರಿದರು.
ಓದಿ :ರಾಜಕೀಯ ಕಾರಣಕ್ಕೆ ಬಂದ್ ಮಾಡುವುದು ಸರಿಯಲ್ಲ; ಕಾಂಗ್ರೆಸ್ ಮುಳುಗುತ್ತಿರೋ ಹಡಗು ಎಂದ ಸಿಎಂ
ಕೇಂದ್ರ ಸರ್ಕಾರ ತಂದಿರುವ ಕಾಯ್ದೆಗಳು ರೈತರ ಪರವಾಗಿವೆ. ಬ್ರೋಕರ್ ಗಳ ಕಾಟದಿಂದ ರೈತರಿಗೆ ತೊಂದರೆ ಆಗುತ್ತಿತ್ತು. ರೈತರ ಒಳಿತಿಗಾಗಿಯೇ ಈ ಕಾಯ್ದೆ ತಂದಿರೋದು. ಬೆಂಗಳೂರಿನಲ್ಲಿ ಯಾವುದೇ ಬಂದ್ ನ ವಾತಾವರಣ ಕಾಣುತ್ತಿಲ್ಲ. ಪದೇ ಪದೆ ಬಂದ್ ಗೆ ಬೆಂಬಲ ರಾಜ್ಯದಲ್ಲಿ ಇಲ್ಲ. ವಾಟಾಳ್ ನಾಗರಾಜ್ ಅವರ ದಿನನಿತ್ಯದ ಬಂದ್ ಗೆ ಬೆಲೆ ಇಲ್ಲವೆಂದು ಸಚಿವ ಅಶೋಕ್ ಹೇಳಿದರು.