ಕರ್ನಾಟಕ

karnataka

ETV Bharat / state

ಕ್ರಿಮಿನಲ್​ಗಳ ಜೊತೆ ಶಾಮೀಲಾದವರನ್ನ ಕಾಂಗ್ರೆಸ್ ಸ್ಟಾರ್​​ ಪ್ರಚಾರಕ್ಕರನ್ನಾಗಿಸಿದೆ: ಶೋಭಾ ಕರಂದ್ಲಾಜೆ ಆರೋಪ

ಗ್ಯಾಂಗ್​ಸ್ಟರ್ ನಂಟಿರುವ ಇಮ್ರಾನ್ ಪ್ರತಾಪ್​ ಗಢಿ ಕಾಂಗ್ರೆಸ್ ಸ್ಟಾರ್ ಪ್ರಚಾರಕನನ್ನಾಗಿ ಮಾಡಲಾಗಿದೆ. ಇದನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದ್ದಾರೆ.

shobha karandlaje
ಶೋಭಾ ಕರಂದ್ಲಾಜೆ

By

Published : Apr 20, 2023, 12:30 PM IST

Updated : Apr 20, 2023, 1:43 PM IST

ಶೋಭಾ ಕರಂದ್ಲಾಜೆ ಸುದ್ದಿಗೋಷ್ಠಿ

ಬೆಂಗಳೂರು: ಅತೀಕ್ ಅಹ್ಮದ್ ಕೊಲೆ ಆರೋಪಿ, ಆತನ ಜೊತೆ ಇದ್ದವರನ್ನು ಕೂಡ ಬಂಧನ ಮಾಡಬೇಕು ಎಂದು ದಿಗ್ವಿಜಯ್​ ಸಿಂಗ್ ,ಯುಪಿ ಸಿಎಂ ಯೋಗಿ ಆದಿತ್ಯನಾಥ್​ಗೆ ಮನವಿ ಮಾಡಿದ್ದಾರೆ. ಆದರೆ, ಈಗ ಇಮ್ರಾನ್ ಪ್ರತಾಪ್ ಗಢಿಯನ್ನು ಸ್ಟಾರ್ ಪ್ರಚಾರಕ ಮಾಡಿದ್ದೀರಿ. ಹಾಗಾದರೆ ಇಮ್ರಾನ್ ಗಢಿಗೂ ಕಾಂಗ್ರೆಸ್​ಗೂ ಏನು ಸಂಬಂಧ?. ಕಾಂಗ್ರೆಸ್ ಅಪರಾಧಿಗಳ ಜೊತೆ ಕೈ ಜೋಡಿಸಿದೆ. ಹಿಂದೂ ಮುಸ್ಲಿಂ ಬಾಂಧವ್ಯ ಒಡೆಯಲು ಇಮ್ರಾನ್ ಬಳಸಿಕೊಳ್ಳುತ್ತಿದ್ದೀರಿ ಎಂದು ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದರು. ಇದೇ ವೇಳೆ, ಇಮ್ರಾನ್​​​​ ಮಾಡಿದ ಭಾಷಣದ ವಿಡಿಯೋ ಮತ್ತು ಫೋಟೋಗಳನ್ನ ಬಿಡುಗಡೆ ಮಾಡಿದರು.

ಮಲ್ಲೇಶ್ವರದಲ್ಲಿರುವ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಸ್ಟಾರ್ ಪ್ರಚಾರಕನಾಗಿ ಇಮ್ರಾನ್ ಪ್ರತಾಪ್ ಗಢಿ ಹೆಸರು ಇದೆ. ಆತ ಯುಪಿ ಗ್ಯಾಂಗ್‌ಸ್ಟರ್, ಅತೀಕ್ ಅಹ್ಮದ್ ಬೆಂಬಲಿಗ, ಅತೀಕ್ ಅಹಮದ್ ನನ್ನ ಗುರು ಅಂತ ಇಮ್ರಾನ್ ಪ್ರತಾಪ್ ಗಢಿ ಹೇಳಿಕೊಳ್ಳುತ್ತಿದ್ದ. ಇಂತಹವನನ್ನು ಕಾಂಗ್ರೆಸ್ ರಾಜ್ಯ ಚುನಾವಣೆಯಲ್ಲಿ ಸ್ಟಾರ್ ಪ್ರಚಾರಕನನ್ನಾಗಿ ಮಾಡಿದೆ. ಇದನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ ಎಂದು ಶೋಭಾ ಕರಂದ್ಲಾಜೆ ಗುಡುಗಿದರು.

ಇಮ್ರಾನ್ ಪ್ರತಾಪ್ ಗಢಿ ಶಾಯರಿ ಬರೆಯುವವನು, ಕವಿ. ಅವನ ಶಾಯರಿಗಳು ದೇಶದ ವಿರುದ್ಧ ಇವೆ. ದೇಶದ ವಿರುದ್ಧ, ಸಮಾಜದ ವಿರುದ್ಧ ಶಾಯರಿ‌ ಬರೆಯುವಾತ, ಇಮ್ರಾನ್​ನಂತಹ ದೇಶದ್ರೋಹಿ ಹಾಗೂ ಸಮಾಜ ದ್ರೋಹಿಗಳ ಮೇಲೆ ಕಾಂಗ್ರೆಸ್​ಗೆ ಬಹಳ ಪ್ರೀತಿ ಇದೆ. ಯುಪಿಯಿಂದ ಆಗಲ್ಲ ಎನ್ನುವ ಕಾರಣಕ್ಕೆ ಇಮ್ರಾನ್​ನನ್ನು ಮಹಾರಾಷ್ಟ್ರ ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆ ಮಾಡಿದೆ. ಗ್ಯಾಂಗ್‌ಸ್ಟರ್ ಕಾಯ್ದೆಯಡಿ ಬಂಧನವಾದವರ ಜತೆ ಇಮ್ರಾನ್ ಸಂಪರ್ಕ ಇದೆ ಎಂದು ಕರಂದ್ಲಾಜೆ ಆರೋಪಿಸಿದರು.

ಇಮ್ರಾನ್ ಕರ್ನಾಟಕಕ್ಕೆ ಬಂದು ಟಿಪ್ಪು ಪರ ಭಾಷಣ ಮಾಡಿದ್ದ, ಮುಸ್ಲಿಮರಿಗೆ ತಲೆ ತಗ್ಗಿಸಿ ಗೊತ್ತಿಲ್ಲ, ತಲೆ ಕಡಿದು ಗೊತ್ತಿದೆ ಅಂತ ಭಾಷಣ ಮಾಡಿದ್ದ. ಇಮ್ರಾನ್ ನಮ್ಮ ರಾಜ್ಯದ ಮುಸಲ್ಮಾನರನ್ನು ಎತ್ತಿ ಕಟ್ಟುವ ಯತ್ನ ಮಾಡಿದ್ದ. ಇಂತಹ ಇಮ್ರಾನ್​ ಬಗ್ಗೆ ಕಾಂಗ್ರೆಸ್​ಗೆ ಎಲ್ಲ ಗೊತ್ತಿದೆ, ಯುಪಿಯಲ್ಲಿ ಹತ್ಯೆ ಆದ ಅತೀಕ್, ಅಶ್ರಫ್ ಜತೆ ಇಮ್ರಾನ್ ನಿಕಟವರ್ತಿ ಆಗಿದ್ದ, ಇಂಥವರ ಜತೆ ಸಂಪರ್ಕದಲ್ಲಿ ಇದ್ದವರ ಬಂಧನ ಆಗಲಿ ಅಂತ ಕೆಲ ಕಾಂಗ್ರೆಸ್ ಮುಖಂಡರೇ ಆಗ್ರಹ ಮಾಡಿದ್ದಾರೆ.

ಕಾಂಗ್ರೆಸ್ ಕೈ ಅಪರಾಧಿಗಳ ಜತೆ ಇದೆ, ದೇಶದ್ರೋಹಿಗಳ ಜತೆ ಇದೆ, ಇಮ್ರಾನ್ ನನ್ನ ಸ್ಟಾರ್ ಪ್ರಚಾರಕ ಮಾಡಿರುವ ಕಾಂಗ್ರೆಸ್ ಸ್ಪಷ್ಟೀಕರಣ ಕೊಡಬೇಕು. ಕಾಂಗ್ರೆಸ್ ಉದ್ದೇಶ ಏನು? ಇಲ್ಲೂ ಹಿಂದೂಗಳ ವಿರುದ್ಧ ಮುಸ್ಲಿಮರನ್ನು ಎತ್ತಿ ಕಟ್ಟುವ ಕೆಲಸ ಮಾಡ್ತೀರಾ? ಎಂದು ಪ್ರಶ್ನಿಸಿದರು. ಡಿ.ಕೆ ಶಿವಕುಮಾರ್ ಒಂದು ಮಾತನ್ನು ಹೇಳಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಗೋ ಹತ್ಯಾ ನಿಷೇಧ ಕಾಯ್ದೆ ರದ್ದು ಮಾಡೋದಾಗಿ ಹೇಳಿದ್ದಾರೆ.

ಕೇರಳದ ಕಣ್ಣೂರಿನಲ್ಲಿ ಸಾರ್ವಜನಿಕವಾಗಿ ಹಸುಗಳನ್ನ ಕಡಿದು ರಕ್ತದಲ್ಲಿ ಆಟ ಆಡಿದವರನ್ನು ಅಲ್ಲಿನ ಯೂತ್ ಕಾಂಗ್ರೆಸ್ ಅಧ್ಯಕ್ಷನಾಗಿ ಮಾಡಿದ್ದಾರೆ. ಅಂತವರ ಜೊತೆ ರಾಜ್ಯ ಕಾಂಗ್ರೆಸ್ ನಾಯಕರಿಗೆ ನಂಟಿದೆ. ನಮ್ಮ ಕಾಂಗ್ರೆಸ್ ನಾಯಕರು ಅಂತಹವರ ಜೊತೆ ಕೈ ಜೋಡಿಸಿದ್ದಾರೆ. ರಾಜ್ಯದ ಕಾಂಗ್ರೆಸ್ ನಾಯಕರು ಕ್ರಿಮಿನಲ್​ಗಳ ಜೊತೆ ಕೈ ಜೋಡಿಸಿದ್ದಾರೆ ಎಂದು ಟೀಕಿಸಿದರು.

ಕರಾವಳಿಯಲ್ಲಿ ಪ್ರಶಾಂತ್ ಪೂಜಾರಿ ಹತ್ಯೆ ಮಾಡ್ತಾರೆ. ಸಿದ್ದರಾಮಯ್ಯ ನನ್ನ ಕಾರ್ಯಕ್ರಮ ಮುಗಿಯೋವರೆಗೂ ಪೂಜಾರಿ ಸಾವನ್ನಪ್ಪಿರುವ ವಿಷಯ ಬಹರಂಗ ಮಾಡಬೇಡಿ ಅಂತ ಹೇಳ್ತಾರೆ. ಸಿದ್ದರಾಮಯ್ಯ ಸಂಭ್ರಮ ಮಾಡಿ ಕಾರ್ಯಕ್ರಮ ಮಾಡ್ತಾರೆ. ವಾಪಸ್ ವಿಧಾನಸೌಧಕ್ಕೆ ಬಂದ ಬಳಿಕ ಪ್ರಶಾಂತ್ ಪೂಜಾರಿ ಹತ್ಯೆ ಬಗ್ಗೆ ಬಹಿರಂಗಪಡಿಸ್ತಾರೆ. ಕ್ರಿಮಿನಲ್​ಗಳ ನಾಯಕ ಡಿಕೆ ಶಿವಕುಮಾರ್. ಹಾಗಾಗಿ, ಕ್ರಿಮಿನಲ್​​​​​ಗಳನ್ನ ಕರೆತರುವ ಕೆಲಸ ಡಿಕೆಶಿ ಮಾಡುತ್ತಿದ್ದಾರೆ. ಇಮ್ರಾನ್ ಗಢಿ ಕರೆತಂದು ಸ್ಟಾರ್ ಪ್ರಚಾರಕನನ್ನಾಗಿ ಮಾಡಿದ್ದಾರೆ ಎಂದರು.

ಇದನ್ನೂ ಓದಿ :ಭವಾನಿ ರೇವಣ್ಣ, ಹೆಚ್ ಡಿ ದೇವೇಗೌಡ ಸೇರಿ 27 ಮಂದಿ ಸ್ಟಾರ್ ಪ್ರಚಾರಕರ ಹೆಸರು ಪ್ರಕಟಿಸಿದ ಜೆಡಿಎಸ್‌

ಕಾಂಗ್ರೆಸ್ ಕೈಯಲ್ಲಿ ರಕ್ತ ಅಂಟಿದೆ. ಇಲ್ಲಿ ಮತದ ಪ್ರಶ್ನೆ ಬರಲ್ಲ, ಅಸ್ತಿತ್ವದ ಪ್ರಶ್ನೆ. ನಮ್ಮ ಭಾಗದಲ್ಲಿ ಅವರು ನಡೆದುಕೊಳ್ಳುವ ರೀತಿ ನಮಗೆ ಭಯ ಹುಟ್ಟಿಸಿದೆ. ನೇರವಾಗಿ ಬೆದರಿಕೆ ಹಾಕುವ ಧೈರ್ಯ ಯಾಕೆ ಬಂತು, ಸಿದ್ದರಾಮಯ್ಯ ರೀತಿಯ ನಾಯಕರ ಬೆಂಬಲ ಅವರ ಧೈರ್ಯಕ್ಕೆ ಕಾರಣ, ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಅಂತಹ ವ್ಯಕ್ತಿಗಳು ಇಂತವರ ಜೊತೆ ಕೈ ಜೋಡಿಸಿರೋದಕ್ಕೆ ಆರಾಮಾಗಿ ಓಡಾಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

ಮಂಗಳೂರಿನಲ್ಲಿ ಕುಕ್ಕರ್ ಬ್ಲಾಸ್ಟ್ ಆಯ್ತು. ಅದರಲ್ಲಿ ಸಿಲುಕಿದವನನ್ನು ನನ್ನ ಸಹೋದರ ಅಂತ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಹೇಳ್ತಾರೆ. ಮಂಗಳೂರು ಕುಕ್ಕರ್ ಬ್ಲಾಸ್ಟ್ ನಲ್ಲಿ ನಮ್ಮ ಕೈವಾಡ ಇದೆ ಅಂತ ಐಎಸ್ಐ ಕ್ಲೈಮ್ ಮಾಡಿಕೊಂಡಿದೆ. ಅಂತವರ ಜೊತೆ ಕಾಂಗ್ರೆಸ್​ ಕೈ ಜೋಡಿಸಿದೆ ಎಂದರು.

ಇದನ್ನೂ ಓದಿ :ಲಿಂಗಾಯತ ಸಿಎಂ ಚರ್ಚೆ ಆಗಿದೆ, ನಿರ್ಣಯ ಕೈಗೊಂಡಿಲ್ಲ: ಮುಖ್ಯಮಂತ್ರಿ ಬೊಮ್ಮಾಯಿ

ಸಿದ್ದರಾಮಯ್ಯ ಕಾಲದಲ್ಲಿ ಹಿಂದೂ ಯುವಕರ ಹತ್ಯೆ ಆಯಿತು. ರುದ್ರೇಶ್ ಹಂತಕರು ಪಿಎಫ್ಐನ ಕಾರ್ಯಕರ್ತರಾಗಿದ್ದು, ಅವರೆಲ್ಲಾ ಜೈಲಲ್ಲಿದ್ದಾರೆ. ಆದರೆ, ಅಂತಹ ಪಿಎಫ್ಐ ಕಾರ್ಯಕರ್ತರ ಮೇಲಿನ ಕೇಸ್ ವಾಪಸ್ ಪಡೆದರು.175 ಪ್ರಕರಣ ವಾಪಸ್ ಪಡೆದು 1,700 ಕಾರ್ಯಕರ್ತರ ಬಿಡುಗಡೆ ಮಾಡಿದರು. ಅಂದು ಪಿಎಫ್ಐ ನಿಷೇಧಕ್ಕೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲ್ಲ ಎಂದು ಅಂದಿನ ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ಸಿದ್ದರಾಮಯ್ಯ ಇನ್ನು ಮುಂದೆ ಹೋಗಿ ಯಾರು ಕೇಳದಿದ್ದರೂ ಟಿಪ್ಪು ಜಯಂತಿ ಮಾಡಿದರು. ಈಗ ಅಧಿಕಾರಕ್ಕೆ ಬಂದರೆ ಮತಾಂತರ ನಿಷೇಧ ಕಾಯ್ದೆ, ಗೋಹತ್ಯೆ ನಿಷೇಧ ಕಾಯ್ದೆ ವಾಪಸ್ ಪಡೆಯುತ್ತೇವೆ ಎನ್ನುತ್ತಿದ್ದಾರೆ. ಮುಸಲ್ಮಾನ್ ನಾಯಕರ ಜೊತೆ ಸಿದ್ದರಾಮಯ್ಯ ಇದ್ದರೆ, ಕ್ರಿಮಿನಲ್​ಗಳ ಜೊತೆ ಡಿಕೆ ಶಿವಕುಮಾರ್ ಶಾಮೀಲಾಗಿದ್ದಾರೆ. ಹಾಗಾಗಿ, ಇಮ್ರಾನ್ ಪ್ರತಾಪ್ ಗಢಿ ತಂದು ಪ್ರಚಾರಕ್ಕೆ ಹೊರಟಿದ್ದಾರೆ. ಕೇರಳದಲ್ಲಿ ಹಸು ಕೊಂದವರ ಜೊತೆ ರಾಹುಲ್ ಗಾಂಧಿ ಪಾದಯಾತ್ರೆ ನಡೆಸುತ್ತಾರೆ, ಇದರ ಅರ್ಥ ಏನು? ಇವರು ಯಾರ ಪರ ಇದ್ದಾರೆ? ಎಂದು ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದರು.

Last Updated : Apr 20, 2023, 1:43 PM IST

ABOUT THE AUTHOR

...view details