ಕರ್ನಾಟಕ

karnataka

ETV Bharat / state

ಡಿಕೆಶಿ ಬಂಧನಕ್ಕೆ ಭಾರಿ ಪ್ರತಿರೋಧ: ಇಡಿ ಕಚೇರಿ ಎದುರು ಹೈಡ್ರಾಮಾ.. ಕಣ್ಣೀರಿಟ್ಟ ಅಭಿಮಾನಿ: ವಿಡಿಯೋ! - ಡಿ.ಕೆ. ಶಿವಕುಮಾರ್ ಬಂಧನ

ಅಕ್ರಮ ಹಣ ವರ್ಗಾವಣೆ ಪ್ರಕರಣ ಕುರಿತಂತೆ ಸತತ ನಾಲ್ಕು ದಿನಗಳಿಂದ ವಿಚಾರಣೆ ನಡೆಸಿದ್ದ ಇಡಿ ಕೊನೆಗೂ ಮಾಜಿ ಸಚಿವ ಡಿ.ಕೆ. ಶಿವಕುಮಾರ್​ ಅವರನ್ನ ಬಂಧಿಸಿದೆ.

ಇಡಿ ಕಚೇರಿ ಎದುರು ಹೈಡ್ರಾಮಾ

By

Published : Sep 3, 2019, 9:38 PM IST

Updated : Sep 3, 2019, 10:24 PM IST

ನವದೆಹಲಿ: ನವದೆಹಲಿಯ ಫ್ಯ್ಲಾಟ್​​ನಲ್ಲಿ ಸಿಕ್ಕಿದ್ದ 8.59 ಕೋಟಿ ರೂಪಾಯಿ ಬಗ್ಗೆ ಸರಿಯಾದ ಮಾಹಿತಿ ನೀಡಿಲ್ಲವೆಂದು ಮಾಜಿ ಸಚಿವ ಡಿಕೆಶಿ ಅವರನ್ನ ಇಡಿ ಅಧಿಕಾರಿಗಳು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ಕಣ್ಣೀರಿಟ್ಟ ಡಿಕೆಶಿ ಅಭಿಮಾನಿ

ಅಕ್ರಮ ಹಣ ವರ್ಗಾವಣೆ ಪ್ರಕರಣ ಕುರಿತಂತೆ ಸತತ ನಾಲ್ಕು ದಿನಗಳಿಂದ ವಿಚಾರಣೆ ನಡೆಸಿದ್ದ ಇಡಿ ಕೊನೆಗೂ ಮಾಜಿ ಸಚಿವ ಡಿ.ಕೆ. ಶಿವಕುಮಾರ್​ ಅವರನ್ನ ಬಂಧಿಸಿದೆ.

ಇಡಿ ಕಚೇರಿ ಎದುರು ಹೈಡ್ರಾಮಾ

ಡಿಕೆಶಿ ಬಂಧಿಸಿರುವ ಇಡಿ ಅಧಿಕಾರಿಗಳು ಅವರನ್ನ ಆರ್​ಎಂಎಲ್​ ಆಸ್ಪತ್ರೆಗೆ ಮೆಡಿಕಲ್​ ಚೆಕ್​ ಅಪ್​ಗೆ ದಾಖಲಿಸಿದ್ದಾರೆ.

ವೈದ್ಯಕೀಯ ಪರೀಕ್ಷೆಗೆ ತೆರಳುವಾಗ ಜಾರಿ ನಿರ್ದೇಶನಾಲಯ ಕಚೇರಿ ಮುಂದೆ ಅವರ ಬೆಂಬಲಿಗರು ಮತ್ತು ಕಾರ್ಯಕರ್ತರು ಭಾರಿ ಪ್ರತಿಭಟನೆ ನಡೆಸಿದರು.

ಇದೇ ವೇಳೆ, ಮಾಜಿ ಸಚಿವ ಡಿ ಕೆ ಶಿವಕುಮಾರ್ ಅವರು ತಮ್ಮ ಕಾರ್ಯಕರ್ತರನ್ನು ಸಮಾಧಾನ ಮಾಡುವ ಪ್ರಯತ್ನ ಮಾಡಿದರು.

ಈ ವೇಳೆ, ಕಾರ್ಯಕರ್ತನೋರ್ವ ಕಣ್ಣೀರಿಟ್ಟ, ಆಗ ಡಿಕೆಶಿ ಕಣ್ಣಾಲಿಗಳು ತೇವಗೊಂಡವು.

ಸದ್ಯ ಡಿಕೆಶಿ ಅವರು ಆಸ್ಪತ್ರೆಗೆ ತಲುಪಿದ್ದು, ವೈದ್ಯಕೀಯ ತಪಾಸಣೆ ನಡೆಯುತ್ತಿದೆ. ಬಳಿಕ ಅವರನ್ನು ನ್ಯಾಯಾಧೀಶರ ಎದುರು ಹಾಜರುಪಡಿಸುವ ಸಾಧ್ಯತೆಯಿದೆ.

ಗಣೇಶ ಹಬ್ಬ ಇದ್ದರೂ ಬಿಡುವು ನೀಡದ ಇಡಿ ಅಧಿಕಾರಿಗಳು ನವದೆಹಲಿಯಲ್ಲಿ ಬಂಧಿಸಿದ್ದಾರೆ.

Last Updated : Sep 3, 2019, 10:24 PM IST

ABOUT THE AUTHOR

...view details