ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಧೋರಣೆಯಿಂದ ಕನ್ನಡಕ್ಕೆ ಮನ್ನಣೆ ನೀಡಿಲ್ಲ ಅನ್ನೋದು ಗೊತ್ತಾಗಿದೆ ಎಂದು ಮಾಜಿ ಸಚಿವ ಡಾ.ಅಶ್ವತ್ಥನಾರಾಯಣ್ ಆರೋಪಿಸಿದರು. ಬೆಂಗಳೂರಲ್ಲಿಂದು ಮಾತನಾಡಿದ ಅವರು, ಕನ್ನಡಪರ ಸಂಘಟನೆಗಳು ಸರ್ಕಾರದ ವಿರುದ್ಧ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ನಮ್ಮ ನಾಡಿನ ಭಾಷೆ ಕನ್ನಡ. ಕನ್ನಡ ಬಳಕೆಗೆ ಸರ್ಕಾರ ಕ್ರಮ ವಹಿಸಬೇಕಿದೆ. ಆದರೆ ಸರ್ಕಾರ ವಿಳಂಬ ಮಾಡಿದೆ. ಹಾಗಾಗಿ ಕನ್ನಡ ನಾಮಫಲಕಗಳಿಗಾಗಿ ಕನ್ನಡಪರ ಸಂಘಟನೆಗಳು ಆಗ್ರಹಿಸಿವೆ. ಆದರೆ, ಕಾನೂನು ಕೈಗೆತ್ತಿಕೊಳ್ಳುವ ಕೆಲಸ ಆಗಬಾರದು. ಈ ಸರ್ಕಾರ ಅಭಿವೃದ್ಧಿ ಕೆಲಸ ಮಾಡದೇ ಮೈ ಮರೆತಿದೆ. ಕನ್ನಡ ಕಡ್ಡಾಯ ಆಗಬೇಕು ಅನ್ನೋದೇ ಬಿಜೆಪಿ ಆಶಯ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷರ ಆಯ್ಕೆ ವಿಚಾರವಾಗಿ ಮಾತನಾಡಿದ ಅವರು, ಬೆಂಗಳೂರು ಉತ್ತರ ಜಿಲ್ಲೆ ಅಪೇಕ್ಷಿತರು, ಪ್ರಮುಖರ ಕರೆದು ಅಭಿಪ್ರಾಯ ಸಂಗ್ರಹ ಮಾಡಲಾಗಿದೆ. ಯಾರನ್ನು ಅಧ್ಯಕ್ಷರನ್ನಾಗಿ ಮಾಡಬೇಕು ಅಂತ ಚರ್ಚೆ ಆಗಿದೆ. ಯಾವಾಗ, ಯಾರು ಅಂತ ವರಿಷ್ಠರು ಘೋಷಣೆ ಮಾಡುತ್ತಾರೆ. ಎಲ್ಲರೂ ಅಭಿಪ್ರಾಯ ನೀಡಿದ್ದೇವೆ ಎಂದು ಹೇಳಿದರು.