ಬೆಂಗಳೂರು:ರಾಷ್ಟ್ರಪತಿ ಚುನಾವಣೆ ವೇಳೆ ರಾಜ್ಯದಲ್ಲಿ ನಿಯಮ ಉಲ್ಲಂಘನೆ ಆಗಿದೆ ಎಂದು ಆರೋಪಿಸಿ ಕಾಂಗ್ರೆಸ್ ನಾಯಕರು ಇಂದು ರಾಜ್ಯ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ.
ಮಾಜಿ ಸಂಸದ ವಿ. ಎಸ್ ಉಗ್ರಪ್ಪ ಮಾತನಾಡಿರುವುದು ಮಾಜಿ ಸಂಸದ ಉಗ್ರಪ್ಪ ನೇತೃತ್ವದ ನಿಯೋಗ ಇಂದು ರಾಜ್ಯ ಚುನಾವಣಾ ಆಯುಕ್ತರನ್ನ ಭೇಟಿಯಾಗಿ ದೂರು ಸಲ್ಲಿಕೆ ಮಾಡಿದೆ. ನಿಯೋಗದಲ್ಲಿ ಉಗ್ರಪ್ಪ ಜತೆ ಮಾಜಿ ಸಚಿವ ಹೆಚ್. ಎಂ ರೇವಣ್ಣ, ರಾಮಚಂದ್ರಪ್ಪ ತೆರಳಿದ್ದರು.
ರಾಜ್ಯ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು ಬಿಜೆಪಿ ನಾಯಕರ ವಿರುದ್ಧ ಆಯೋಗಕ್ಕೆ ದೂರು ಸಲ್ಲಿಸಲಾಗಿದೆ. ರಾಜ್ಯ ಮುಖ್ಯಚುನಾವಣಾಧಿಕಾರಿಗೆ ನೀಡಿದ ದೂರಿನಲ್ಲಿ ರಾಷ್ಟ್ರಪತಿ ಚುನಾವಣೆಯಲ್ಲಿ ನಿಯಮ ಉಲ್ಲಂಘನೆ ಆಗಿದೆ. ಬಿಜೆಪಿ ನಾಯಕರು ನಿಯಮ ಉಲ್ಲಂಘಿಸಿದ್ದಾರೆ. ಶಾಸಕರನ್ನು ಲಕ್ಸುರಿ ಹೋಟೆಲ್ನಲ್ಲಿ ಇಡಲಾಗಿತ್ತು. ಅಲ್ಲಿ ಅವರಿಗೆ ಎಲ್ಲಾ ವ್ಯವಸ್ಥೆ ಮಾಡಲಾಗಿತ್ತು. ಮತದಾನಕ್ಕೆ ಸಾರಿಗೆ ಬಸ್ನಲ್ಲೇ ಕರೆತರಲಾಗಿದೆ. ಹೋಟೆಲ್ನಿಂದ ನೇರವಾಗಿ ಶಾಸಕರನ್ನ ಕರೆತರಲಾಗಿದೆ. ಇದು ಸಂವಿಧಾನದ ನಿಯಮಕ್ಕೆ ವಿರುದ್ಧವಾದುದು. ಬಿಜೆಪಿ ಶಾಸಕರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.
ರಾಜ್ಯ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು ರಾಜ್ಯ ಚುನಾವಣಾ ಆಯೋಗಕ್ಕೆ ಕೈ ನಿಯೋಗದ ದೂರು ಸಲ್ಲಿಕೆ ನಂತರ ಮಾತನಾಡಿದ ಮಾಜಿ ಸಂಸದ ವಿ. ಎಸ್ ಉಗ್ರಪ್ಪ, ಬಿಜೆಪಿ ಶಾಸಕರು ವಾಸ್ತವ್ಯ ಹೂಡಿದ್ದ ಹೋಟೆಲ್ನ ಮಾಹಿತಿ ಹಾಗೂ ಅಲ್ಲಿನ ಊಟ ಹಾಗೂ ಉಳಿದ ಉಪಚಾರಗಳ ವಿವರವನ್ನು ಸಹ ದಾಖಲೆ ಸಮೇತ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಕೆ ಮಾಡಿದ್ದೇವೆ. ಮಾಧ್ಯಮದಲ್ಲಿ ಪ್ರಕಟವಾಗಿರುವ ವರದಿ ಹಾಗೂ ಜನರೆ ಮೇಲ್ನೋಟಕ್ಕೆ ಕಂಡಂತಹ ಮಾಹಿತಿ ಬಿಜೆಪಿ ಶಾಸಕರ ಬಗ್ಗೆ ಕುರಿತು ವಿವರ ಒದಗಿಸುತ್ತದೆ.
ಚುನಾವಣಾ ಅಧಿಕಾರಿಗಳಿಗೆ ಮನವಿ: ಬಿಜೆಪಿ ಶಾಸಕರ ಹೋಟೆಲ್ ವಾಸ್ತವ್ಯ ಹಾಗೂ ಖರ್ಚು ವೆಚ್ಚ ಇತ್ಯಾದಿ ವಿವರಗಳ ಕುರಿತು ಚುನಾವಣಾ ಆಯೋಗ ಕೂಲಂಕಷ ತನಿಖೆ ನಡೆಸಬೇಕು. ಯಾವುದೇ ವಿಧದ ಮತದಾನವು ಪಾರದರ್ಶಕ ಹಾಗೂ ಮುಕ್ತವಾಗಿ ನಡೆಯಬೇಕು ಎಂಬ ನಿಯಮ ಇದೆ. ಮತದಾರರಿಗೆ ಯಾವುದೇ ರೀತಿಯ ಆಮಿಷ ಒಡ್ಡಬಾರದು ಎಂಬ ನಿಯಮ ಜಾರಿಯಲ್ಲಿದೆ. ಬಿಜೆಪಿ ಶಾಸಕರ ಮೇಲೆ ಒತ್ತಡ ಹೇರಿರುವ ವಿಚಾರ ಮೇಲ್ನೋಟಕ್ಕೆ ಸಾಬೀತಾಗುವ ಹಿನ್ನೆಲೆ ಇದು ಚುನಾವಣಾ ಅಪರಾಧವಾಗಿದ್ದು, ಸೂಕ್ತ ತನಿಖೆ ನಡೆಸಬೇಕು ಎಂದು ಚುನಾವಣಾ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ ಎಂದರು.
ಓದಿ:ಶಾಲೆಗೆ ಬಣ್ಣ, ಸ್ಮಾರ್ಟ್ ಕ್ಲಾಸ್ಗೆ ತಿಂಗಳ ವೇತನ ಕೊಟ್ಟ ಹೆಡ್ಮಾಸ್ಟರ್.. ಕೈಜೋಡಿಸಿದ ಗ್ರಾಮಸ್ಥರು