ಕರ್ನಾಟಕ

karnataka

ETV Bharat / state

ಬಿ.ಎಲ್.ಸಂತೋಷ್ ವಿರುದ್ಧ ಕಾಂಗ್ರೆಸ್​ ಟೀಕೆ: ಹರಿಹಾಯ್ದ ಡಿಸಿಎಂ ಸವದಿ...!

ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರ ವಿರುದ್ಧ ಟೀಕೆ ಮಾಡಿರುವ ಕಾಂಗ್ರೆಸ್ ವಿರುದ್ಧ ಡಿಸಿಎಂ ಲಕ್ಷ್ಮಣ ಸವದಿ ಹರಿಹಾಯ್ದಿದ್ದಾರೆ.

Lakshmana savadi
Lakshmana savadi

By

Published : Aug 14, 2020, 4:02 PM IST

ಬೆಂಗಳೂರು:ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಅವರಂತಹ ಸಿದ್ಧಾಂತ ಬದ್ಧ ನೀತಿ ರಾಜಕಾರಣ ಮಾಡುವ ವ್ಯಕ್ತಿಯ ಬಗ್ಗೆ ಮಾತನಾಡಿ ಕಾಂಗ್ರೆಸ್ ತನ್ನಲ್ಲಿನ ನಾಯಕತ್ವದ ಕೊರತೆ ಮಾತ್ರವಲ್ಲ, ನೈತಿಕತೆಯ ಕೊರತೆಯನ್ನು ಜಗತ್ತಿಗೆ ಪರಿಚಯಿಸಿಕೊಟ್ಟಿದೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಹರಿಹಾಯ್ದಿದ್ದಾರೆ.

ಡಿ.ಜೆ ಹಳ್ಳಿಯಲ್ಲಿ ನಡೆದ ಘಟನೆ ಸಾಮಾಜಿಕ ನ್ಯಾಯದ ಪ್ರತಿಪಾದಕರು ಎಂದು ಕರೆಸಿಕೊಳ್ಳುವ ಕಾಂಗ್ರೆಸ್​ನವರ ನಿಜ ಬಣ್ಣ ಬಯಲು ಮಾಡಿದೆ. ತಮ್ಮ ಪಕ್ಷದ ದಲಿತ ನಾಯಕನಿಗೆ ರಕ್ಷಣೆ ನೀಡಲಾಗದ ಪಕ್ಷದ ನಾಯಕರು, ಘಟನೆಗೆ ಕಾರಣನಾದ ವ್ಯಕ್ತಿ ಬಿಜೆಪಿ ಕಾರ್ಯಕರ್ತನೆಂದು ಬಿಂಬಿಸುವ ವ್ಯರ್ಥ ಪ್ರಯತ್ನವನ್ನೂ ಮಾಡಿದರು. ಇವರ ಮಿಥ್ಯಾರೋಪಗಳ ಬಗ್ಗೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಪ್ರಶ್ನಿಸಿದಾಗ, ನಾಯಕತ್ವದ ಭ್ರಷ್ಟತೆ, ಹಾಗೂ ನಾಯಕತ್ವದ ದಿವಾಳಿತನ ಪ್ರದರ್ಶಿಸಿದ ಕಾಂಗ್ರೆಸ್, ಜಮೀರ್ ಅಹಮ್ಮದ್ ಮೂಲಕ ಉತ್ತರ ಹೇಳಲು ಹೊರಟಿದೆ ಎಂದು ವ್ಯಂಗ್ಯವಾಡಿದರು.

ಪ್ರಕೃತಿಯಲ್ಲಿ ನಾವೆಲ್ಲಾ ಸಹಜವಾಗಿ ನೋಡಿರುವ ಸಂಗತಿಯೊಂದನ್ನು ಈ ಸನ್ನಿವೇಶ ನೆನಪಿಸುತ್ತಿದೆ. ಆನೆ ನಡೆವ ಹಾದಿಯಲ್ಲಿ, ಸಣ್ಣ ಪುಟ್ಟ ಪ್ರಾಣಿಗಳು ಊಳಿಡುವುದು ಸಹಜ ಅಲ್ಲವೇ? ಎಂದು ಪ್ರಶ್ನಿಸಿದ ಡಿಸಿಎಂ ಸವದಿ, ಸಮಾಜ ಘಾತುಕ ವಿಚ್ಛಿದ್ರಕಾರಿ ಶಕ್ತಿಗಳನ್ನು ಬೆಂಬಲಿಸುತ್ತಾ ಶಾಂತಿ, ಸಾಮರಸ್ಯ ಮಾತ್ರವಲ್ಲ, ರಾಜ್ಯದ ಘನತೆಯನ್ನು ಹಾಳುಮಾಡುವ ಕ್ಷುಲ್ಲಕ ಪ್ರಯತ್ನ ಮಾಡುತ್ತಿದೆ.

ತಮ್ಮ ಅಸಮರ್ಥತೆಯನ್ನು ಮುಚ್ಚಿಕೊಳ್ಳಲು ಕಾಂಗ್ರೆಸ್ ಇನ್ನೊಬ್ಬರ ಮೇಲೆ ದೋಷಾರೋಪ ಮಾಡುವ ಹಳೆಯ ಚಾಳಿಯನ್ನೇ ಮುಂದುವರೆಸಿದೆ. ಪರಮ ದೇಶಭಕ್ತ, ನೀತಿ ರಾಜಕಾರಣಿ, ನಿಸ್ವಾರ್ಥ ವ್ಯಕ್ತಿತ್ವದ ಬಿ.ಎಲ್.ಸಂತೋಷ್ ಸಾಮಾಜಿಕ ಕಳಕಳಿಯನ್ನು ವ್ಯಕ್ತಪಡಿಸಿದಾಗ, ಅವರ ಟ್ವೀಟ್ ಅನ್ನು ಕೆಣಕುವ ಮೂಲಕ ಕಾಂಗ್ರೆಸ್ ತಮ್ಮ ಪಕ್ಷ ದೇಶ ಇನ್ನೂ ಅಸ್ತಿತ್ವದಲ್ಲಿದೆ ಎಂದು ತೋರಿಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ ಎಂದು ಪತ್ರಿಕಾ ಹೇಳಿಕೆ ಮೂಲಕ ಕಾಂಗ್ರೆಸ್ ನಡೆಯನ್ನು ಖಂಡಿಸಿದ್ದಾರೆ.

ABOUT THE AUTHOR

...view details