ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಬಿಜೆಪಿ ತೆಗಳುವ ಭರದಲ್ಲಿ ಭಯೋತ್ಪಾದಕರ ಪರ ಮಾತನಾಡಿರುವುದನ್ನು ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಖಂಡಿಸಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈಗಾಗಲೇ ಭಯೋತ್ಪಾದಕರ ಪರ ನಿಂತ ಕಾಂಗ್ರೆಸ್‌ನ ಪರಿಸ್ಥಿತಿ ದೇಶದಲ್ಲಿ ಏನಾಗಿದೆ ಎಂದು ಎಲ್ಲರಿಗೂ ಗೊತ್ತಿದೆ. ಅದರೊಂದಿಗಿನ ಸಂಬಂಧ ಇಂದು ಕಾಂಗ್ರೆಸ್‌ನ ಧೂಳು ತಿನ್ನುವಂತೆ ಮಾಡಿದೆ ಎಂದು ಟೀಕಿಸಿದರು.
ಓಲೈಕೆ ರಾಜಕಾರಣ:ಕಾಂಗ್ರೆಸ್‌ನವರು ಓಟಿಗಾಗಿ ಓಲೈಕೆ ಮಾಡುತ್ತ ತಮ್ಮ ಅಸ್ತಿತ್ವ ಕಳೆದುಕೊಂಡಿದ್ದಾರೆ. ದೇಶದಲ್ಲಿ ನಡೆದಿರುವ ಭಯೋತ್ಪಾದಕ ಕೃತ್ಯದಿಂದ ಹಿಂದುಳಿದಿದೆ ಎಂದು ಅವರು ತಿಳಿದುಕೊಂಡಿಲ್ಲ. ಕೇಂದ್ರ ಸರ್ಕಾರ ಭಯೋತ್ಪಾದನೆ ತಡೆಗಟ್ಟುವ ಕೆಲಸ ಮಾಡಿದ್ದಾರೆ. ಡಿ ಕೆ ಶಿವಕುಮಾರ್ ಅವರ ಹೇಳಿಕೆ ಖಂಡನೀಯ. ಅವರ ಹೇಳಿಕೆಯಿಂದ ಅವರ ಪಕ್ಷದವರು ಯಾರು ಬೆಂಬಲಕ್ಕೆ ನಿಂತಿಲ್ಲ ಎಂದು ವಾಗ್ದಾಳಿ ನಡೆಸಿದರು.
ಶಾಸಕ ಯು ಟಿ ಖಾದರ್ ಇಂಥ ಘಟನೆಯನ್ನು ಯಾರು ಸಹಿಸುವುದಿಲ್ಲ ಎಂದು ಹೇಳಿದ್ದಾರೆ. ಯಾರು ಪ್ರಚೋದನೆ ನೀಡಬಾರದು, ಸಪೋರ್ಟ್ ಮಾಡಬಾರದು. ಮಂಗಳೂರು ಬ್ಲಾಸ್ಪ್ ಘಟನೆ ಖಂಡನೀಯ ಎಂದಿದ್ದಾರೆ. ಡಿಕೆಶಿ ಡಬಲ್ ಸ್ಡ್ಯಾಂಡರ್ಡ್, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಡಿ.ಕೆ.ಶಿವಕುಮಾರ್ ಹೇಳಿಕೆಯನ್ನು ಒಪ್ಪುತ್ತಾರಾ?. ಈ ವಿಚಾರದಲ್ಲಿ ಅವರು ಹೇಳಿಕೆಯನ್ನು ಕೊಡಬೇಕು ಎಂದು ಒತ್ತಾಯಿಸಿದರು.
ಮಾನನಷ್ಟ ಮೊಕದ್ದಮೆ:ಮೈಸೂರಿನ ಕಾಂಗ್ರೆಸ್ ವಕ್ತಾರ ಲಕ್ಷ್ಮಣ್ ಅವರು, ಸಿ ಟಿ ರವಿಯವರ ಬಗ್ಗೆ ಬಹಳ ಅವಹೇಳನಕಾರಿ ಮಾತನಾಡಿದ್ದಾರೆ. ಅವರಿಗೆ ಹುಚ್ಚು ಹಿಡಿದಿರಬಹುದು, ಅವರನ್ನು ಆಸ್ಪತ್ರೆಗೆ ದಾಖಲಿಸಬೇಕು ಎಂದು ಕಿಡಿಕಾರಿದರು.
ಸಿ ಟಿ ರವಿ ಅವರ ತಂದೆ ರೈತರು, ಅವರು ಎಂದು ಆಟೋ ಓಡಿಸಿಲ್ಲ. ಬಲಗೈ ಬಂಟ ಲಕ್ಷ್ಮಣ್ ಮೂಲಕ ಸಿದ್ದರಾಮಯ್ಯ ಅವರು ಹೇಳಿಕೆ ಕೊಡ್ತಿದ್ದಾರೆ. ಅವರ ವಿರುದ್ಧ ಸಿ ಟಿ ರವಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಆ ನೋಟಿಸ್ ಪಡೆಯದೆ ತಲೆಮರೆಸಿಕೊಂಡು ಓಡಾಡ್ತಿದ್ದಾರೆ ಎಂದು ಹೇಳಿದರು.
ಇದನ್ನೂಓದಿ:MLC ವಿಶ್ವನಾಥ್ ಉಪ ಚುನಾವಣೆಗೆ 15 ಕೋಟಿ ತೆಗೆದುಕೊಂಡಿದ್ದರು: ಶ್ರೀನಿವಾಸ್ ಪ್ರಸಾದ್ ಹೊಸ ಬಾಂಬ್