ಬೆಂಗಳೂರು:ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರದಲ್ಲಿ ಇಂದು ಸಹ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ಭರ್ಜರಿ ಪ್ರಚಾರ ನಡೆಸಿದರು. ಈ ಬಾರಿ ನಾವೇ ಗೆಲ್ಲೋದು ನಾವೇ ಎಂದು ಉಭಯ ಪಕ್ಷಗಳ ಅಭ್ಯರ್ಥಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದೆಲ್ಲರ ನಡುವೆ ಕಾಂಗ್ರೆಸ್ ಕಾರ್ಪೋರೇಟರ್, ತಮಗೆ ಜಾತಿ ನಿಂದನೆ ಮಾಡಿರುವುದಾಗಿ ಆರೋಪಿಸಿ ಬಿಜೆಪಿ ಕಾರ್ಯಕರ್ತನ ಮೇಲೆ ವಾಗ್ದಾಳಿ ನಡೆಸಿದ್ದಾರೆ.
ಪ್ರಚಾರದ ವೇಳೆ ಬಿಜೆಪಿ ಕಾರ್ಯಕರ್ತನಿಂದ ಜಾತಿ ನಿಂದನೆ: ಕಾಂಗ್ರೆಸ್ ಕಾರ್ಪೋರೇಟರ್ ಆರೋಪ - ಪ್ರಚಾರದ ವೇಳೆ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ
ಪ್ರಚಾರದ ವೇಳೆ ಬಿಜೆಪಿ ಕಾರ್ಯಕರ್ತ ಜಾತಿ ನಿಂದನೆ ಮಾಡಿದ್ದಾರೆ ಎಂದು ಕಾಂಗ್ರೆಸ್ ಕಾರ್ಪೋರೇಟರ್ ಆರೋಪಿಸಿದ್ದಾರೆ.
ಹೊರಮಾವು ವಾರ್ಡನ ಕಾಂಗ್ರೆಸ್ ಕಾರ್ಪೋರೇಟರ್ ರಾಧಮ್ಮ ವೆಂಕಟೇಶ್, ಬಾಬೂಸಪಾಳ್ಯ ಹಾಗೂ ಜ್ಯೋತಿ ನಗರದಲ್ಲಿ ಪ್ರಚಾರ ನಡೆಸುವಾಗ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ.
ಬಿಜೆಪಿ ಕಾರ್ಯಕರ್ತ ಶಾಂತಕುಮಾರ್ ಎಂಬಾತನನ್ನ ಕಾಂಗ್ರೆಸ್ಗೆ ಮತ ನೀಡುವಂತೆ ಕೇಳಿದ್ದಾರೆ. ಅಷ್ಟಕ್ಕೆ ಅಲ್ಲಿ ಮಾತಿನ ಚಕಮಕಿ ನಡೆದಿದ್ದು, ಈ ವೇಳೆ ಕಾರ್ಪೊರೇಟರ್ಗೆ ಏಕವಚನದಲ್ಲಿ ಹೆದರಿಸಿ ಜಾತಿ ನಿಂದನೆ ಮಾಡಿದ್ದಾರೆ ಅಂತ ಆರೋಪಿಸಿದ್ದಾರೆ. ಅಲ್ಲದೆ, ಚುನಾವಣಾ ನೀತಿ ಸಂಹಿತೆ ಪ್ರಕಾರ ಪೋಸ್ಟರ್, ಫ್ಲಾಗ್ಗಳನ್ನು ಮನೆ ಮನೆಗೂ ಅಂಟಿಸಬಾರದು ಎಂಬ ನಿಯಮವಿದ್ದರೂ ಉಲ್ಲಂಘಿಸಿ ಬಾವುಟ ಹಾಗೂ ಸ್ಟಿಕ್ಕರ್ಗಳನ್ನ ಹಾಕಲಾಗಿದೆ. ಈ ಬಗ್ಗೆ ದೂರು ನೀಡಿವುದಾಗಿ ಕಾರ್ಪೊರೇಟರ್ ರಾಧಮ್ಮ ತಿಳಿಸಿದ್ದಾರೆ.