ಬೆಂಗಳೂರು :ಲಾಕ್ಡೌನ್ ವೇಳೆ ಇಂಧನ ಬೇಡಿಕೆ ಕುಸಿದಿದ್ದರೂ ಸಹ ಬೆಲೆ ನಿರಂತರವಾಗಿ ಹೆಚ್ಚಿಸುತ್ತಿರುವ ಕೇಂದ್ರ ಸರ್ಕಾರದ ನಡೆಗೆ ಟ್ವೀಟ್ ಮೂಲಕ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
ಕೊರೊನಾ ಸಂಕಷ್ಟ, ಉದ್ಯೋಗ ನಷ್ಟ, ಆರ್ಥಿಕ ಕುಸಿತ, ಅದಾಯವಿಲ್ಲದೆ ಕಂಗಾಲಾಗಿರುವ ಜನತೆಗೆ ರಾಷ್ಟ್ರೀಯ ಬಿಜೆಪಿ ಪಕ್ಷದ "ಪ್ರಜಾ ಪೀಡಕ ಸರ್ಕಾರ" ಪೆಟ್ರೋಲ್, ಡೀಸೆಲ್ ಬೆಲೆ ಏರಿಸಿ ಬದುಕನ್ನು ಸರ್ವನಾಶ ಮಾಡಲು ಮುಂದಾಗಿದೆ. ಈ ಬೆಲೆ ಏರಿಕೆ ಜನರ ಬದುಕಿನ ಮೇಲಷ್ಟೇ ಅಲ್ಲದೆ ದೇಶದ ಆರ್ಥಿಕ ಚಟುವಟಿಕೆಗಳ ಮೇಲೂ ಭೀಕರ ಪರಿಣಾಮ ಬೀರಲಿದೆ.
ಮೈಸೂರಿನ ಇಬ್ಬರೂ ಅಧಿಕಾರಿಗಳನ್ನ ವರ್ಗಾವಣೆಗೊಳಿಸಿದ್ದು ಕೊರೊನಾ ನಿರ್ವಹಣೆಗೆ ಹಿನ್ನೆಡೆಯಾಗಲಿದೆ. ಬದಲಾದ ಅಧಿಕಾರಿಗಳಿಗೆ ಜಿಲ್ಲೆಯ ಚಿತ್ರಣ ಅರಿಯಲು ಸಾಕಷ್ಟು ಸಮಯ ಹಿಡಿಯಲಿದೆ. ಕೊರೊನಾ ಸಂದರ್ಭದಲ್ಲಿ ಹೊಸ ಅಧಿಕಾರಿಗಳಿಗೂ ಸವಾಲು, ಜನತೆಗೂ ಸಂಕಷ್ಟ.