ಕರ್ನಾಟಕ

karnataka

By

Published : Jul 21, 2019, 3:49 PM IST

ETV Bharat / state

ಕಾಂಗ್ರೆಸ್ ಮುಖ್ಯಮಂತ್ರಿ, ವಿಚಾರ ರಾಜಕೀಯ ತಂತ್ರ : ಎಸ್. ಆರ್. ವಿಶ್ವನಾಥ್

ಕಾಂಗ್ರೆಸ್ ಮುಖ್ಯಮಂತ್ರಿ, ವಿಚಾರ ರಾಜಕೀಯ ತಂತ್ರ. ಮೈತ್ರಿ ಸರ್ಕಾರ ಬಹುಮತ ಕಳೆದುಕೊಂಡು 15 ಶಾಸಕರು ಹೊರ ಹೋಗಿದಾರೆ. ಶಾಸಕರನ್ನ ಮತ್ತೆ ಕರೆಸೋಕೆ ಈ ತಂತ್ರ ಮಾಡ್ತಿದಾರೆ, ಇದೆಲ್ಲ ಬ್ಲಾಕ್ ಮೇಲ್-ಎಸ್​.ಆರ್​ ವಿಶ್ವನಾಥ್​.

ಶಾಸಕ ಎಸ್. ಆರ್. ವಿಶ್ವನಾಥ್

ಬೆಂಗಳೂರು :ಸರ್ಕಾರ ರಚಿಸಲು ಕಾಂಗ್ರೆಸ್​ಗೆ ಜೆಡಿಎಸ್ ಬಾಹ್ಯ ಬೆಂಬಲ ನೀಡುವ ವಿಚಾರವಾಗಿ ಪ್ರತಿಕ್ರಿಯಿಸಿರುವ ಶಾಸಕ ಎಸ್.ಆರ್. ವಿಶ್ವನಾಥ್ ಜೆಡಿಎಸ್ ಬೆಂಬಲ ನೀಡಿದ ಸರ್ಕಾರಗಳು ಒಂದೆರಡು ತಿಂಗಳು ಉಳಿದಿಲ್ಲ ಎಂದು ಹೇಳಿದ್ದಾರೆ.

ರಮಡ ಹೋಟೆಲ್ ಬಳಿ ಮಾತನಾಡಿ, ಕಾಂಗ್ರೆಸ್ ಪಕ್ಷದಲ್ಲೆ ಸಿದ್ದರಾಮಯ್ಯ, ಖರ್ಗೆ, ಡಿಕೆಶಿ ಹೆಸರುಗಳು ಕೇಳಿ ಬರುತ್ತಿದೆ. ಆದರೆ, ಮುಖ್ಯಮಂತ್ರಿಯಾಗಲು ಯಾರು ಸಹ ಮುಂದಾಗುತ್ತಿಲ್ಲ. ಪ್ರಸಕ್ತ ವರ್ತಮಾನ ಗಮನಿಸಿದರೆ ಮುಖ್ಯಮಂತ್ರಿ ಕುಮಾರಸ್ವಾಮಿ ಸೋಲು ಒಪ್ಪಿಕೊಂಡಂತಾಗುತ್ತದೆ ಎಂದರು.

ಕಾಂಗ್ರೆಸ್ ಮುಖ್ಯಮಂತ್ರಿ, ವಿಚಾರ ರಾಜಕೀಯ ತಂತ್ರ. ಮೈತ್ರಿ ಸರ್ಕಾರ ಬಹುಮತ ಕಳೆದುಕೊಂಡು 15 ಶಾಸಕರು ಹೊರ ಹೋಗಿದಾರೆ. ಶಾಸಕರನ್ನ ಮತ್ತೆ ಕರೆಸೋಕೆ ಈ ತಂತ್ರ ಮಾಡ್ತಿದಾರೆ. ಇದೆಲ್ಲ ಬ್ಲಾಕ್ ಮೇಲ್ ತಂತ್ರ, ಯಾರನ್ನು ಬೇಕಾದರೂ ಮುಖ್ಯಮಂತ್ರಿ ಮಾಡಿಕೊಳ್ಳಲಿ ಎಂದು ಹೇಳಿದರು.

ಶಾಸಕ ಎಸ್. ಆರ್. ವಿಶ್ವನಾಥ್

ಸಮ್ಮಿಶ್ರ ಸರ್ಕಾರಕ್ಕೆ ಬೆಂಬಲ ಇಲ್ಲ.106 ಜನ ನಾವು ಮತದಾನಕ್ಕೆ ಸಿದ್ದರಿದ್ದೇವೆ. ಸಮ್ಮಿಶ್ರ ಸರ್ಕಾರದ ಸಂಖ್ಯೆ ಕುಗ್ಗುತ್ತಾ ಇದೆ. ಕುಮಾರಸ್ವಾಮಿ ಅವರದ್ದು ಮುಂದುವರೆದ ರಾಜಕೀಯ ಕುತಂತ್ರವೆ ಬಾಹ್ಯ ಬೆಂಬಲದ ಸೂತ್ರ ಎಂದು ತಿಳಿಸಿದರು.

ಸ್ಪೀಕರ್​ ಸ್ಪಷ್ಟವಾಗಿ ಕಾಲಹರಣಕ್ಕೆ ಅವಕಾಶ ಕೊಡುವುದಿಲ್ಲ. ಸೋಮವಾರ ಅಂತ್ಯ ಆಗಬೇಕು ಎಂದಿದ್ದಾರೆ, ನಾವು ನಂಬಿದ್ದೇವೆ. ಸಿ.ಎಲ್.ಪಿ ನಾಯಕರು, ಕುಮಾರಸ್ವಾಮಿ ಎಲ್ರೂ ಸದನದಲ್ಲಿ ಕೇಳಿದಾರೆ ನಾವು ನಂಬಿದ್ದೇವೆ. ಸೋಮವಾರ ವಿಶ್ವಾಸ ಮತ ಪ್ರಕ್ರಿಯೆ ಅಂತ್ಯ ಆಗಲಿದೆ ಎಂದು ಹೇಳಿದರು.

ABOUT THE AUTHOR

...view details