ಬೆಂಗಳೂರು: ವಿಧಾನಸಭೆ ಚುನಾವಣೆಗೆ ಈಗಿನಿಂದಲೇ ರಾಜಕೀಯ ಪಕ್ಷಗಳು ಸಿದ್ಧತಾ ಕಾರ್ಯ ಪ್ರಾರಂಭಿಸಿವೆ. ನಾಯಕತ್ವಕ್ಕಾಗಿ ಸಾಕಷ್ಟು ಕಿತ್ತಾಟಗಳು ನಡೆಯುತ್ತಿದ್ದು, ಟಿಕೆಟ್ ಹಂಚಿಕೆ ಕಾಂಗ್ರೆಸ್ ನಾಯಕರಿಗೆ ದೊಡ್ಡ ಸವಾಲಾಗಲಿದೆ ಎಂಬ ಮಾತು ಕೇಳಿ ಬರುತ್ತಿರುವ ಸಂದರ್ಭದಲ್ಲೇ ಬಹುತೇಕ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ.
2023ರ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಸಿದ್ಧತೆ ಆರಂಭಿಸಿದೆ. ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಇದುವರೆಗೂ ಬಿಜೆಪಿ, ಜೆಡಿಎಸ್, ಎಎಪಿಗಿಂತ ಮೊದಲೇ ಕಾಂಗ್ರೆಸ್ ಪಟ್ಟಿ ಬಿಡುಗಡೆ ಮಾಡಿದೆ. ಚುನಾವಣೆಗೆ ಐದಾರು ತಿಂಗಳು ಮುನ್ನವೇ ಆಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸಲಾಗಿತ್ತು. ಪ್ರತಿ ಕ್ಷೇತ್ರದಿಂದ ಐದರಿಂದ 15 ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದರು. ಆದರೆ, ಇದೀಗ ಎಲ್ಲಾ ಕ್ಷೇತ್ರಗಳಲ್ಲೂ ಸಂಭವನೀಯರ ಪಟ್ಟಿ ಅಂತಿಮವಾಗಿದೆ ಎಂದು ತಿಳಿದುಬಂದಿದೆ.
ಬೆಂಗಳೂರು ನಗರದ 28 ವಿಧಾನಸಭೆ ಕ್ಷೇತ್ರಗಳು ಸೇರಿದಂತೆ ಪಟ್ಟಿಯಲ್ಲಿ ಆಯ್ಕೆಯಾಗಿರುವ ಸಂಭವನೀಯರ ವಿವರ ಲಭ್ಯವಾಗಿದೆ. ಕೆಲ ಕ್ಷೇತ್ರಗಳಲ್ಲಿ ಒಬ್ಬರನ್ನು ಅಂತಿಮಗೊಳಿಸಿರುವ ಕಾಂಗ್ರೆಸ್ ನಾಯಕರು, ಮತ್ತೆ ಕೆಲ ಕ್ಷೇತ್ರಗಳಲ್ಲಿ ಹೆಚ್ಚಿನ ಆಯ್ಕೆ ಇಟ್ಟುಕೊಂಡಿದ್ದಾರೆ. ಹೆಚ್ಚು ಆಕಾಂಕ್ಷಿಗಳಿರುವ ಪಟ್ಟಿಯನ್ನೂ ಸಹ ಆದಷ್ಟು ಬೇಗ ಒಂದಕ್ಕಿಳಿಸಿ ಅಂತಿಮ ಪಟ್ಟಿ ಹೊರಡಿಸಲು ತೀರ್ಮಾನಿಸಿದ್ದಾರೆ ಎಂಬ ಮಾಹಿತಿ ಇದೆ. ಮೂಲಗಳ ಪ್ರಕಾರ, ಕಾಂಗ್ರೆಸ್ ಮೊದಲ ಪಟ್ಟಿಯಲ್ಲಿ ಬಹುತೇಕ ಹಾಲಿ ಶಾಸಕರಿಗೆ ಟಿಕೆಟ್ ಅಂತಿಮವಾಗಿದೆ. ಆದರೂ ಮೂರ್ನಾಲ್ಕು ಹಾಲಿ ಶಾಸಕರಿಗೆ ಟಿಕೆಟ್ ಕೈತಪ್ಪಬಹುದು ಎಂದು ಹೇಳಲಾಗುತ್ತಿದೆ. ಸ್ಪರ್ಧಿಸುವ ಕ್ಷೇತ್ರ ಹಾಗು ಅಭ್ಯರ್ಥಿಗಳ ಹೆಸರುಗಳು ಹೀಗಿವೆ..
- ಗಾಂಧಿನಗರ - ದಿನೇಶ್ ಗುಂಡೂರಾವ್
- ಬ್ಯಾಟರಾಯನಪುರ - ಕೃಷ್ಣಬೈರೇಗೌಡ
- ಸರ್ವಜ್ಞನಗರ - ಕೆ ಜೆ ಜಾರ್ಜ್
- ಬಿಟಿಎಂ ಲೇಔಟ್ - ರಾಮಲಿಂಗಾರೆಡ್ಡಿ
- ಜಯನಗರ - ಸೌಮ್ಯಾ ರೆಡ್ಡಿ
- ಪುಲಿಕೇಶಿನಗರ -ಅಖಂಡ ಶ್ರೀನಿವಾಸ್ ಮೂರ್ತಿ
- ಹೆಬ್ಬಾಳ - ಬೈರತಿ ಸುರೇಶ್
- ಮಲ್ಲೇಶ್ವರಂ - ರಶ್ಮಿ ರವಿಕಿರಣ್, ಅನೂಪ್ ಹೆಗಡೆ
- ರಾಜಾಜಿನಗರ -ಎಂಎಲ್ ಸಿ ಪುಟ್ಟಣ್ಣ, ಬಿಬಿಎಂಪಿ ಮಾಜಿ ಉಪಮೇಯರ್ ಪುಟ್ಟರಾಜು, ಸಾರಾ ಗೋವಿಂದ್, ಎಸ್.ನಾರಾಯಣ್
- ಸಿ.ವಿ.ರಾಮನ್ ನಗರ - ಮಾಜಿ ಮೇಯರ್ ಸಂಪತ್ ರಾಜ್
- ಮಹಾಲಕ್ಷ್ಮಿ ಲೇಔಟ್ - ನಾರಾಯಣಸ್ವಾಮಿ, ಜೆ.ಸಿ.ಚಂದ್ರಶೇಖರ್
- ವಿಜಯನಗರ - ಎಂ.ಕೃಷ್ಣಪ್ಪ
- ಗೋವಿಂದರಾಜನಗರ - ಪ್ರಿಯಕೃಷ್ಣ
- ಆರ್ ಆರ್ ನಗರ - ಕುಸುಮಾ ಹನುಮಂತರಾಯಪ್ಪ
- ಪದ್ಮನಾಭನಗರ - ರಘುನಾಥ್ ನಾಯ್ಡು, ಸಂಜಯ್ ಗೌಡ
- ಬೆಂಗಳೂರು ದಕ್ಷಿಣ - ಆರ್.ಕೆ.ರಮೇಶ್, ಸುಷ್ಮಾ ರಾಜಗೋಪಾಲ್
- ಬೊಮ್ಮನಹಳ್ಳಿ - ನಿರ್ಮಾಪಕ ಉಮಾಪತಿಗೌಡ
- ಮಹದೇವಪುರ - ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್, ಆನಂದ್
- ಕೆ.ಆರ್.ಪುರಂ - ಡಿ.ಕೆ.ಮೋಹನ್ ಬಾಬು, ನಾರಾಯಣಸ್ವಾಮಿ
- ಯಲಹಂಕ - ಚಂದ್ರಪ್ಪ, ನಾಗರಾಜು
ಬೆಂಗಳೂರು ಗ್ರಾಮಾಂತರ ಟಿಕೆಟ್:
- ನೆಲಮಂಗಲ - ಶ್ರೀನಿವಾಸ್
- ದೇವನಹಳ್ಳಿ - ಕೆ.ಹೆಚ್.ಮುನಿಯಪ್ಪ, ಎ.ಸಿ.ಶ್ರೀನಿವಾಸ್, ಆನಂದ್ ಕುಮಾರ್
- ಆನೇಕಲ್ - ಶಾಸಕ ಶಿವಣ್ಣ
- ದೊಡ್ಡಬಳ್ಳಾಪುರ - ಶಾಸಕ ವೆಂಕಟರಮಣಯ್ಯ
- ಹೊಸಕೋಟೆ - ಶರತ್ ಬಚ್ಚೇಗೌಡ
ತುಮಕೂರು ಜಿಲ್ಲೆ:
- ತುಮಕೂರು ನಗರ - ಅತೀಕ್ ಅಹ್ಮದ್, ರಫಿಕ್ ಅಹ್ಮದ್
- ತುಮಕೂರು ಗ್ರಾಮಾಂತರ - ರವಿ, ಸೂರ್ಯ ಮುಕುಂದರಾಜು
- ಕೊರಟಗೆರೆ - ಡಾ.ಜಿ.ಪರಮೇಶ್ವರ್
- ಮಧುಗಿರಿ - ಕೆ.ಎನ್.ರಾಜಣ್ಣ
- ಗುಬ್ಬಿ - ಶ್ರೀನಿವಾಸ್( ಶಾಸಕ)
- ಕುಣಿಗಲ್ - ರಂಗನಾಥ್( ಶಾಸಕ)
- ಚಿಕ್ಕನಾಯಕನಹಳ್ಳಿ - ಸುರೇಶ್ ಬಾಬು,ಸಿಎಂ ಧನಂಜಯ್
- ತಿಪಟೂರು - ಷಡಕ್ಷರಿ,ಮಾಜಿ ಡಿವೈಎಪಿ ಲೊಕೇಶ್
- ತುರುವೇಕೆರೆ - ಬೆಮೆಲ್ ಕಾಂತರಾಜು( ಮಾಜಿ ಎಂಎಲ್ಸಿ)
- ಶಿರಾ - ಜಯಚಂದ್ರ( ಮಾಜಿ ಶಾಸಕ)
- ಪಾವಗಡ -ಶಾಸಕ ವೆಂಕಟರಮಣ್ಣ ಪುತ್ರ ವೆಂಕಟೇಶ್
ಚಿತ್ರದುರ್ಗ ಜಿಲ್ಲೆ:
- ಚಿತ್ರದುರ್ಗ - ರಘು ಆಚಾರ್( ಮಾಜಿ ಎಂಎಲ್ಸಿ)
- ಹೊಳಲ್ಕೆರೆ - ಹೆಚ್. ಆಂಜನೇಯ( ಮಾಜಿ ಸಚಿವ)
- ಹೊಸದುರ್ಗ - ಬಿ.ಜಿ.ಗೋವಿಂದಪ್ಪ( ಮಾಜಿ ಶಾಸಕ)
- ಹಿರಿಯೂರು - ಸುಧಾಕರ್( ಮಾಜಿ ಶಾಸಕ)
- ಚಳ್ಳಕೆರೆ - ರಘು ಮೂರ್ತಿ( ಶಾಸಕ)
- ಮೊಳಕಾಲ್ಮೂರು - ಯೋಗೇಶ್ ಬಾಬು, ಉಗ್ರಪ್ಪ( ಮಾಜಿ ಸಂಸದ)
ದಾವಣಗೆರೆ ಜಿಲ್ಲೆ:
- ದಾವಣಗೆರೆ ದಕ್ಷಿಣ - ಶಾಮನೂರು ಶಿವಶಂಕರಪ್ಪ, ಇಲ್ಲವೇ ಕುಟುಂಬ ಸದಸ್ಯರು
- ದಾವಣಗೆರೆ ಉತ್ತರ - ಎಸ್.ಎಸ್.ಮಲ್ಲಿಕಾರ್ಜುನ್( ಮಾಜಿ ಸಚಿವ)
- ಜಗಳೂರು - ಹೆಚ್.ಪಿ.ರಾಜೇಶ್( ಮಾಜಿ ಶಾಸಕ)
- ಮಾಯಕೊಂಡ - ದುಗ್ಗಪ್ಪ, ಬಸವರಾಜು, ಸವಿತಾ ಮಲ್ಲೇಶನಾಯ್ಕ
- ಹರಿಹರ - ರಾಮಪ್ಪ( ಶಾಸಕ), ದೇವೇಂದ್ರಪ್ಪ, ನಾಗೇಂದ್ರಪ್ಪ
- ಹೊನ್ನಾಳಿ - ಶಾಂತನಗೌಡ, ಹೆಚ್.ಬಿ.ಮಂಜಪ್ಪ
- ಚನ್ನಗಿರಿ - ವಡ್ನಾಳ್ ರಾಜಣ್ಣ, ತಮ್ಮ ಅಶೋಕ್
ಬಳ್ಳಾರಿ,ವಿಜಯನಗರ ಜಿಲ್ಲೆ:
- ಬಳ್ಳಾರಿ ನಗರ - ನಾರಾ ಭರತ್ ರೆಡ್ಡಿ, ದಿವಾಕರ್ ಬಾಬು
- ಬಳ್ಳಾರಿ ಗ್ರಾಮಾಂತರ - ನಾಗೇಂದ್ರ( ಶಾಸಕ)
- ಸಂಡೂರು - ತುಕಾರಾಂ( ಶಾಸಕ)
- ಕೂಡ್ಲಿಗಿ - ನಾಗರಾಜು,ಶ್ರೀನಿವಾಸ್
- ಕಂಪ್ಲಿ - ಗಣೇಶ್( ಶಾಸಕ)
- ಹಗರಿಬೊಮ್ಮನಹಳ್ಳಿ - ಭೀಮಾನಾಯ್ಕ್( ಶಾಸಕ)
- ಹೊಸಪೇಟೆ - ಗವಿಯಪ್ಪ,ರಾಜಶೇಖರ್ ಹಿಟ್ನಾಳ್,ಘೋರ್ಪಡೆ
- ಹರಪನಹಳ್ಳಿ - ಲತಾ ಮಲ್ಲಿಕಾರ್ಜುನ್,ವೀಣಾ ಮಹಾಂತೇಶ್
- ಸಿರಗುಪ್ಪ - ಬಿ.ಎಂ.ನಾಗರಾಜು, ಮುರುಳಿಕೃಷ್ಣ
ಹಾಸನ ಜಿಲ್ಲೆ:
- ಹಾಸನ - ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಬಿ.ಪಿ ಮಂಜೇಗೌಡ, ರಂಗಸ್ವಾಮಿ
- ಅರಸೀಕೆರೆ - ಶಿವಲಿಂಗೇಗೌಡ
- ಬೇಲೂರು - ಗಂಡಸಿ ಶಿವರಾಂ, ಕೃಷ್ಣೇಗೌಡ
- ಸಕಲೇಶಪುರ - ಮುರುಳೀಮೋಹನ್
- ಅರಕಲಗೂಡು - ಎ.ಟಿ.ರಾಮಸ್ವಾಮಿ( ಜೆಡಿಎಸ್ ತೊರೆದರೆ ಮಾತ್ರ), ಕೃಷ್ಣೇಗೌಡ
- ಶ್ರವಣಬೆಳಗೊಳ - ಎಂಎಲ್ ಸಿ ಗೋಪಾಲಸ್ವಾಮಿ, ವಿಜಯ್ ಲಲಿತ್ ರಾಘವ್
ಮಂಡ್ಯ ಜಿಲ್ಲೆ:
- ಮಂಡ್ಯ- ಗಣಿಗರವಿ, ಡಾ.ಕೃಷ್ಣ
- ಮದ್ದೂರು - ಗುರುಚರಣ್
- ಮಳವಳ್ಳಿ - ನರೇಂದ್ರ ಸ್ವಾಮಿ( ಮಾಜಿ ಸಚಿವ)
- ಮೇಲುಕೋಟೆ - ಡಾ.ರವೀಂದ್ರ( ವೈದ್ಯಕೀಯ ಸಂಘದ ಮಾಜಿ ಅಧ್ಯಕ್ಷ)
- ಶ್ರೀರಂಗಪಟ್ಟಣ - ರಮೇಶ್ ಬಂಡಿ ಸಿದ್ದೇಗೌಡ( ಮಾಜಿ ಶಾಸಕ)
- ಕೆ.ಆರ್.ಪೇಟೆ - ವಿಜಯ ರಾಮೇಗೌಡ,ಕಿಕ್ಕೇರಿ ಸುರೇಶ್,ಕೆ.ಬಿ.ಚಂದ್ರಶೇಖರ್
- ನಾಗಮಂಗಲ - ಚೆಲುವರಾಯಸ್ವಾಮಿ( ಮಾಜಿ ಸಚಿವ)
ಮೈಸೂರು ಜಿಲ್ಲೆ
- ವರುಣಾ- ಸಿದ್ದರಾಮಯ್ಯ, ಯತೀಂದ್ರ ಸಿದ್ದರಾಮಯ್ಯ
- ಚಾಮುಂಡೇಶ್ವರಿ - ಮರಿಗೌಡ( ಸಿದ್ದು ಪರಮಾಪ್ತ)
- ಎನ್.ಆರ್.ಮೊಹಲ್ಲಾ - ತನ್ವೀರ್ ಶೇಠ್
- ಕೃಷ್ಣರಾಜ - ಸೋಮಶೇಖರ್
- ಚಾಮರಾಜ ಕ್ಷೇತ್ರ - ಹರಿಶ್ ಗೌಡ,ವಾಸು( ಮಾಜಿ ಶಾಸಕ)
- ಪಿರಿಯಾಪಟ್ಟಣ - ವೆಂಕಟೇಶ್( ಮಾಜಿ ಶಾಸಕ)
- ಕೆ.ಆರ್.ನಗರ - ರವಿಶಂಕರ್
- ಟಿ.ನರಸೀಪುರ - ಸುನೀಲ್ ಬೋಸ್
- ನಂಜನಗೂಡು - ದೃವನಾರಾಯಣ್( ಮಾಜಿ ಸಂಸದ)
- ಹೆಚ್.ಡಿ.ಕೋಟೆ - ಅನಿಲ್ ಚಿಕ್ಕಮಾದು
ಚಾಮರಾಜನಗರ ಜಿಲ್ಲೆ:
- ಗುಂಡ್ಲುಪೇಟೆ - ಗಣೇಶ್ ಪ್ರಸಾದ್
- ಚಾಮರಾಜನಗರ - ಪುಟ್ಟರಂಗ ಶೆಟ್ಟಿ( ಮಾಜಿ ಸಚಿವ)
- ಹನೂರು - ನರೇಂದ್ರ( ಶಾಸಕ)
- ಕೊಳ್ಳೇಗಾಲ - ಜಯಣ್ಣ, ಬಾಲರಾಜು
ಕೊಡಗು ಜಿಲ್ಲೆ:
- ವಿರಾಜಪೇಟೆ- ಪೊನ್ನಣ್ಣ ( ಕೆಪಿಸಿಸಿ ಲೀಗಲ್ ಸೆಲ್ ಅಧ್ಯಕ್ಷ)
- ಮಡಿಕೇರಿ- ಚಂದ್ರಮೌಳಿ, ಮಂಥರ್ ಗೌಡ ,ಜೀ ವಿಜಯ
ದಕ್ಷಿಣ ಕನ್ನಡ ಜಿಲ್ಲೆ:
- ಬಂಟ್ವಾಳ - ರಮಾನಾಥ್ ರೈ( ಮಾಜಿ ಸಚಿವ)
- ಪುತ್ತೂರು - ಶಂಕುಂತಲಾ ಶೆಟ್ಟಿ( ಮಾಜಿ ಶಾಸಕಿ)
- ಮೂಡಬಿದರೆ - ಮಿಥುನ್ ರೈ, ರಾಜಶೇಕರ್ ಕೊಟ್ಯಾನ್
- ಸುಳ್ಯ - ಡಾ.ರಘು
- ಮಂಗಳೂರು ಉತ್ತರ - ಮೊಯಿನುದ್ದೀನ್ ಬಾವ, ಪ್ರತಿಬಾ ಕುಳಾಯಿ
- ಮಂಗಳೂರು - ಐವಾನ್ ಡಿಸೋಜ, ಜೆ.ಆರ್.ಲೊಬೋ
- ಉಲ್ಲಾಳ - ಯು.ಟಿ.ಖಾದರ್( ಮಾಜಿ ಸಚಿವ)
- ಬೆಳ್ತಂಗಡಿ - ರಕ್ಷಿತ್ ಶಿವರಾಂ, ವಸಂತ ಬಂಗೇರ
ಉಡುಪಿ ಜಿಲ್ಲೆ:
- ಉಡುಪಿ - ಕೃಷ್ಣಮೂರ್ತಿ ಆಚಾರ್, ದಿನೇಶ್ ಹೆಗಡೆ
- ಬೈಂದೂರು - ಗೋಪಾಲ ಪೂಜಾರಿ
- ಕುಂದಾಪುರ - ಪ್ರತಾಪ್ ಚಂದ್ರ ಶೆಟ್ಟಿ
- ಕಾಪು - ವಿನಯ್ ಕುಮಾರ್ ಸೊರಕೆ