ಬೆಂಗಳೂರು:ಉಪ ಚುನಾವಣೆ ಪ್ರಚಾರದ ಭರಾಟೆ ನಡುವೆಯೂ, ಶಿವಾಜಿನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ಕಾರ್ಯಕರ್ತರ ಜೊತೆ ಊಟ ಸವಿದಿದ್ದಾರೆ.
ಕಾರ್ಯಕರ್ತರೊಂದಿಗೆ ಊಟ.. ಹೋಟೆಲ್ನಲ್ಲೆ ರಿಜ್ವಾನ್ ಅರ್ಷದ್ ಮತಯಾಚನೆ
ಕಾರ್ಯಕರ್ತರ ಜೊತೆ ಸಾಮಾನ್ಯರಂತೆ ಊಟ ಮಾಡಿದ ಕೈ ಅಭ್ಯರ್ಥಿ ರಿಜ್ವಾನ್ ಅರ್ಷದ್ ಹೋಟೆಲ್ನಲ್ಲೆ ಪ್ರಚಾರ ಮಾಡಿ ಗಮನ ಸೆಳೆದಿದ್ದಾರೆ.
ರಿಜ್ವಾನ್ ಅರ್ಷದ್, ಮಾಜಿ ಸಚಿವ ಪ್ರಿಯಾಂಕ ಖರ್ಗೆ ಹಾಗೂ ಮಹಮ್ಮದ್ ನಲಪಾಡ್ ಜೊತೆ ಹಲಸೂರಿನ ಮುರುಗನ್ ಕೆಫೆಯಲ್ಲಿ ಕಾರ್ಯಕರ್ತರ ಜೊತೆ ಊಟ ಸವಿದು ರಿಲ್ಯಾಕ್ಸ್ ಮಾಡಿ, ಹೋಟೆಲ್ನಲ್ಲೇ ಮತಯಾಚನೆ ಮಾಡಿದ್ರು.
ಇಂದು ಬೆಳಗ್ಗೆಯಿಂದಲೇ ರಿಜ್ವಾನ್ ಪರ ಪ್ರಚಾರಕ್ಕೆ ಇಳಿದಿದ್ದ ಮಾಜಿ ಸಚಿವ ಪ್ರಿಯಾಂಕ ಖರ್ಗೆ ಹಾಗೂ ಮಹಮ್ಮದ್ ನಲಪಾಡ್ ಮಧ್ಯಾಹ್ನದ ವೇಳೆಗೆ ಹಲಸೂರು ಮೆಟ್ರೋ ಸ್ಟೇಷನ್ ಬಳಿ ಇರುವ ಮುರುಗನ್ ಕೆಫೆಯಲ್ಲಿ ಕಾರ್ಯಕರ್ತರ ಜೊತೆ ಸಾಮಾನ್ಯರಂತೆ ಊಟ ಮಾಡಿದರು. ಅಲ್ಲದೆ ಕೆಲ ಯುವಕರು ರಿಜ್ವಾನ್ ಅವರಿಗೆ ವಿಶ್ ಮಾಡಿದ್ರು. ಈ ವೇಳೆ ರಿಜ್ವಾನ್ ಹೋಟೆಲ್ನಲ್ಲೆ ಮತಯಾಚನೆ ಮಾಡಿದ್ದಾರೆ.