ಬೆಂಗಳೂರು: ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಫೋಟೋ ಪ್ರಕಟಣೆಯ ಟ್ವೀಟ್ ವಾರ್ ನಡೆದಿದೆ.
ಭ್ರಷ್ಟಾಚಾರ, ಅವ್ಯವಹಾರ, ಅಕ್ರಮ, ಸಿಡಿ ಇತ್ಯಾದಿ ವಿಚಾರ ಮುಂದಿಟ್ಟುಕೊಂಡು ಪರಸ್ಪರ ಎರಡೂ ಪಕ್ಷಗಳ ನಾಯಕರು ಕೆಲ ಆರೋಪಿಗಳ ಜತೆ ಇರುವ ಫೋಟೋ ಪ್ರಕಟಿಸಿ ಲೇವಡಿ ಮಾಡಿಕೊಳ್ಳುವ ಕಾರ್ಯ ಮಾಡಿವೆ.

ಬಿಜೆಪಿ ಟ್ವೀಟ್ನಲ್ಲಿ ಫೋಟೋ ಪ್ರಕಟಿಸಿ, ಹೆಗಲು ಮುಟ್ಟಿ ನೋಡಿಕೊಂಡಿದ್ದಕ್ಕೂ ಈ ಚಿತ್ರಕ್ಕೂ ಸಂಬಂಧವಿರಬಹುದೇ? 'ಮಾಸ್ಟರ್ ಮೈಂಡ್' ಮತ್ತು 'ರಿಂಗ್ ಮಾಸ್ಟರ್' ಒಂದೇ ಫ್ರೇಮ್‌ನಲ್ಲಿ ಸಿಲುಕಿಕೊಂಡಿರುವುದಕ್ಕೂ 'ನನ್ನನ್ನು ಸಿಲುಕಿಸುವ ಕುತಂತ್ರ' ಎನ್ನುವ ಸ್ವ-ರಕ್ಷಣಾ ಆಟ ಆಡಿರುವುದಕ್ಕೂ ಸಂಬಂಧವಿರಬಹುದೇ? ಎಂದಿತ್ತು.
ಓದಿ:ಜಾರಕಿಹೊಳಿ ಸಿಡಿ ಪ್ರಕರಣ.. ಬಿಜೆಪಿ -ಕಾಂಗ್ರೆಸ್ ನಡುವೆ ಭಾರೀ ಟ್ವೀಟ್ ವಾರ್..
ಇದಕ್ಕೆ ಪ್ರತಿಯಾಗಿ ನಾಲ್ಕು ಫೋಟೋ ಬಳಸಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಹೆಣ್ಣು ಮಕ್ಕಳ ದುರ್ಬಳಕೆಯನ್ನು ಸಮರ್ಥಿಸುತ್ತಿರುವ ರಾಜ್ಯ ಬಿಜೆಪಿ ದೇಶದ್ರೋಹಿ ಹಾಗೂ ಅತ್ಯಾಚಾರಿಯೊಂದಿಗೆ ನರೇಂದ್ರ ಮೋದಿ ಅವರಿಗೆ ಏನು ಸಂಬಂಧ? ಸಂಸದ ತೇಜಸ್ವಿ ಸೂರ್ಯ ಡ್ರಗ್ ಡೀಲರ್‌ಗೂ ಏನು ಸಂಬಂಧ? ಸಂಸದ ಪ್ರತಾಪ್ ಸಿಂಹ ಹಾಗೂ ಈ ಆರೋಪಿಗೂ ಏನು ಸಂಬಂಧ? ಡಿಸಿಎಂ ಲಕ್ಷ್ಮಣ್ ಸವದಿ ಹಾಗೂ ಯುವರಾಜನಿಗೂ ಏನು ಸಂಬಂಧ? ಹೆಗಲು ಮುಟ್ಟಿಕೊಂಡು ತಡೆಯಾಜ್ಞೆ ತಂದಿದ್ಯಾರು? ಎಂದು ಪ್ರಶ್ನಿಸಿದೆ.