ಕರ್ನಾಟಕ

karnataka

ETV Bharat / state

ನಿತೇಶ್ ಅಪಾರ್ಟ್‌ಮೆಂಟ್ ಬಳಿ‌ ಕಾಂಗ್ರೆಸ್,ಬಿಜೆಪಿ ಕಾರ್ಯಕರ್ತರ ಗಲಾಟೆ - congress

ಪಕ್ಷೇತರ ಶಾಸಕರಿರುವ ನಿತೇಶ್ ಅಪಾರ್ಟ್ ಮೆಂಟ್ ಗೇಟ್ ಮುಂದೆ ಕಾಂಗ್ರೆಸ್ ಬಿಜೆಪಿ ಕಾರ್ಯಕರ್ತರು ಎದುರು ಬದುರು ರಸ್ತೆಯಲ್ಲಿ ಕುಳಿತು ಪ್ರತಿಭಟನೆ ಮಾಡುತ್ತಿದ್ದಾರೆ.

galate

By

Published : Jul 23, 2019, 6:30 PM IST

ಬೆಂಗಳೂರು:ಪಕ್ಷೇತರ ಶಾಸಕರು ತಂಗಿರುವನಿತೇಶ್ ಅಪಾರ್ಟ್‌ಮೆಂಟ್ ಗೇಟ್ ಮುಂದೆ ಎದುರುಬದುರು ರಸ್ತೆಯಲ್ಲಿ ಕುಳಿತು ಕಾಂಗ್ರೆಸ್ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ಮಾಡುತ್ತಿದ್ದಾರೆ. ಬಿಜೆಪಿ ಡೌನ್ ಡೌನ್ ಅಂತ ಕಾಂಗ್ರೆಸ್ ಕಾರ್ಯಕರ್ತರು ಘೋಷಣೆ ಕೂಗುತ್ತಿದ್ದು, ಬಿಬಿಎಂಪಿ ವಿರೋಧ ಪಕ್ಷದ ನಾಯಕ ಪದ್ಮನಾಭರೆಡ್ಡಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಕಾಂಗ್ರೆಸ್ ಎಮ್ ಎಲ್ ಸಿ ಐವನ್ ಡಿಸೋಜಾ ಸ್ಥಳದಲ್ಲಿದ್ದಾರೆ. ಬಿಜೆಪಿ ಪಕ್ಷದ ಧ್ವಜವನ್ನು ಕಾಂಗ್ರೆಸ್ ಕಾರ್ಯಕರ್ತರು ಕಿತ್ತಾಡಿದ ಘಟನೆಯೂ ನಡೆದಿದೆ.

ಅಪಾರ್ಟ್‌ಮೆಂಟ್ ಬಳಿ‌ ಕಾರ್ಯಕರ್ತರ ಗಲಾಟೆ
ಕಾಂಗ್ರೆಸ್ ಶಾಸಕ ನಾಗೇಶ್ ಆರ್ ಶಂಕರ್ ಸೇರಿದಂತೆ ಕೆಲ ಶಾಸಕರನ್ನು ಆರ್ ಅಶೋಕ್ ಮಾಲೀಕತ್ವದ ನಿತೇಶ್ ಅಪಾರ್ಟ್ ಮೆಂಟ್‌ನಲ್ಲಿ ಕೂಡಿಹಾಕಿದ್ದಾರೆಂದು ಪ್ರತಿಭಟನೆ ಮಾಡುತ್ತಿದ್ದಾರೆ. ಇಲ್ಲಿ ಯಾರೂ ಇಲ್ಲ, ಕಾಂಗ್ರೆಸ್‌ನವರೇ ಗೂಂಡಾಗಳು ಎಂದು ಬಿಜೆಪಿ ಕಾರ್ಪೋರೇಟರ್ಸ್ ಪ್ರತಿಭಟನೆ ನಡೆಸುತ್ತಿದ್ದಾರೆ. ಪೊಲೀಸರ ಜೊತೆ ಕೈ ಕಾರ್ಯಕರ್ತರು ಮಾತಿನ ಚಕಮಕಿ ನಡೆಸುತ್ತಿದ್ದಾರೆ. ಜಾಗ ತೆರವು ಮಾಡಿಸಲು ಹಾಗೂ ಪ್ರತಿಭಟನಾಕಾರರನ್ನು ಬಂಧಿಸಲು ಪೊಲೀಸರು ಹರಸಾಹಸಪಡುತ್ತಿದ್ದಾರೆ.
ವಿಧಾನಸೌಧ ಸುತ್ತಮುತ್ತ ನಾಟಕೀಯ ಬೆಳವಣಿಗೆ ಹೆಚ್ಚಾದ ಹಿನ್ನೆಲೆಯಲ್ಲಿ ಖುದ್ದು ನಗರ ಆಯುಕ್ತ ಅಲೋಕ್ ಕುಮಾರ್ ಎಲ್ಲಾ ಹಿರಿಯ ಅಧಿಕಾರಿಗಳ ಸಭೆ ಕರೆದು ಅಲರ್ಟ್ ಆಗಿರುವಂತೆ ಸೂಚನೆ ನೀಡಿದ್ದಾರೆ.

ABOUT THE AUTHOR

...view details