ಕರ್ನಾಟಕ

karnataka

ETV Bharat / state

ಅಮಿತ್​ ಶಾಗೆ ಐದು ಪ್ರಶ್ನೆಗಳನ್ನು ಕೇಳಿ ಕಾಂಗ್ರೆಸ್​ ಟ್ವೀಟ್​ - State Congress tweeted by asking five questions

ಕೇಂದ್ರ ಗೃಹಸಚಿವರ ರಾಜ್ಯದ ಭೇಟಿ ಕೆಟ್ಟು ನಿಂತ ಡಬಲ್ ಇಂಜಿನ್‌ ಸರ್ಕಾರವನ್ನು ತಳ್ಳಿ ಸ್ಟಾರ್ಟ್ ಮಾಡುವುದಕ್ಕಲ್ಲ. ಬದಲಾಗಿ ಜೆ.ಪಿ ನಡ್ಡಾ ಅವರನ್ನು ಸೈಡ್ ಲೈನ್ ಮಾಡುವುದಕ್ಕೆ, ಕೇಂದ್ರ ಸರ್ಕಾರದ ಪ್ರತಿನಿಧಿಯಾಗಿ ಆಗಮಿಸಿ ಆಗು ಹೋಗುಗಳನ್ನು ಚರ್ಚಿಸುವ ಬದಲು ಪಕ್ಷದ ಸಭೆ ಮಾಡುತ್ತಿದ್ದಾರೆ. ಅವರ ಭೇಟಿಯಿಂದ ರಾಜ್ಯಕ್ಕೆ ನಯಾಪೈಸೆ ಉಪಯೋಗವಿಲ್ಲ ಎಂದು ಕಾಂಗ್ರೆಸ್​ ಟ್ವೀಟ್​ ಮಾಡಿದೆ.

Congress ask five questions to Amit Shah
ಅಮಿತ್​ ಶಾಗೆ ಐದು ಪ್ರಶ್ನೆಗಳನ್ನು ಕೇಳಿ ಕಾಂಗ್ರೆಸ್​ ಟ್ವೀಟ್​

By

Published : May 3, 2022, 7:19 PM IST

ಬೆಂಗಳೂರು:ರಾಜ್ಯಕ್ಕೆ ಅಮಿತ್ ಶಾ ಭೇಟಿ ನೀಡಿರುವ ಸಂದರ್ಭದಲ್ಲಿಯೇ ಐದು ಪ್ರಶ್ನೆಗಳನ್ನು ಕೇಳಿ ರಾಜ್ಯ ಕಾಂಗ್ರೆಸ್ ಟ್ವೀಟ್ ಮಾಡಿದೆ. ಅಮಿತ್ ಶಾ ಅವರೇ, ನಿಮ್ಮ ಕರ್ನಾಟಕ ಭೇಟಿಯ ಅಜೆಂಡಾ ಏನು? ಪಿಎಸ್ಐ ಪರೀಕ್ಷೆ ಅಕ್ರಮವನ್ನು ಕೇಂದ್ರ ತನಿಖಾ ಸಂಸ್ಥೆಗೆ ವಹಿಸುವುದೇ? ಬಿಟ್ ಕಾಯಿನ್ ಹಗರಣದ ತನಿಖೆಯನ್ನ ಚುರುಕುಗೊಳಿಸುವುದಕ್ಕಾ? ಕುಸಿದು ಕುಳಿತಿರುವ ರಾಜ್ಯದ ಕಾನೂನು ಸುವ್ಯವಸ್ಥೆಯನ್ನ ಸರಿಪಡಿಸುವುದಕ್ಕಾ? ಅಸಮರ್ಥ ಗೃಹಮಂತ್ರಿಯನ್ನು ಬದಲಿಸುವುದಕ್ಕಾ? ಅಥವಾ ಸಿಎಂ ಬದಲಾವಣೆಗಾಗಿಯಾ? ಕೇಂದ್ರ ಗೃಹಸಚಿವರ ರಾಜ್ಯದ ಭೇಟಿ ಕೆಟ್ಟು ನಿಂತ ಡಬಲ್ ಇಂಜಿನ್‌ ಸರ್ಕಾರವನ್ನು ತಳ್ಳಿ ಸ್ಟಾರ್ಟ್ ಮಾಡುವುದಕ್ಕಲ್ಲ, ಬದಲಾಗಿ ಜೆ.ಪಿ ನಡ್ಡಾ ಅವರನ್ನು ಸೈಡ್ ಲೈನ್ ಮಾಡುವುದಕ್ಕೆ ಎಂದು ಕಾಂಗ್ರೆಸ್​ ಟ್ವೀಟ್​ ಮಾಡಿದೆ.

ಕೇಂದ್ರ ಸರ್ಕಾರದ ಪ್ರತಿನಿಧಿಯಾಗಿ ಆಗಮಿಸಿ ಆಗು ಹೋಗುಗಳನ್ನು ಚರ್ಚಿಸುವ ಬದಲು ಪಕ್ಷದ ಸಭೆ ಮಾಡುತ್ತಿದ್ದಾರೆ. ಅವರ ಭೇಟಿಯಿಂದ ರಾಜ್ಯಕ್ಕೆ ನಯಾಪೈಸೆ ಉಪಯೋಗವಿಲ್ಲ. ಸಿಎಂ ಬದಲಾವಣೆ ಬಗ್ಗೆ ಬಿಜೆಪಿ ಶಾಸಕ ಯತ್ನಾಳ್ ಅವರ ಮುನ್ಸೂಚನೆ ನಿಜವೇ? ನಿಜವಲ್ಲ ಎಂದಾದರೆ, ಇತರ ಪಕ್ಷಗಳ ನಾಯಕರಿಗೆ ನೋಟಿಸ್ ಸಲಹೆ ಕೊಡುವ ತಾವು ಯತ್ನಾಳ್ ಅವರಿಗೆ ನೋಟಿಸ್ ಏಕೆ ನೀಡಿಲ್ಲ? ಬಿಜೆಪಿ ನಾಯಕತ್ವವಿಲ್ಲದೇ ಒದ್ದಾಡುವ ಸ್ಥಿತಿ ಬಂದಿದೆ. ಅದೆಷ್ಟೇ ಬದಲಾವಣೆಯ ಸರ್ಕಸ್ ಮಾಡಿದರೂ ನಾಯಕತ್ವ ಸೃಷ್ಟಿಸಲು ಸಾಧ್ಯವಿಲ್ಲ ಎಂದಿದೆ.

ಇದನ್ನೂ ಓದಿ:ಶಾ ರಾಜ್ಯಕ್ಕೆ ಬಂದಿದ್ದೇಕೆ.. ಸಿಎಂ ಬದಲಾವಣೆ ಗುಸು ಗುಸು.. ಬೊಮ್ಮಾಯಿ ಬೆಂಬಲಕ್ಕೆ ಬಿಎಸ್‌'ವೈ'!?

For All Latest Updates

TAGGED:

ABOUT THE AUTHOR

...view details