ಬೆಂಗಳೂರು: ರಾಜ್ಯಸಭೆ ಚುನಾವಣೆಯಲ್ಲಿಜೆಡಿಎಸ್ ಸದಸ್ಯ ಹೆಚ್.ಡಿ.ರೇವಣ್ಣ ಮತ ಅಸಿಂಧುಗೊಳಿಸುವಂತೆ ಸಲ್ಲಿಸಿದ ಮನವಿ ಪುರಸ್ಕಾರದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ಮೊರೆ ಹೋಗಿದ್ದೇವೆ ಎಂದು ವಿಧಾನಪರಿಷತ್ ಪ್ರತಿಪಕ್ಷ ಸಚೇತಕ ಪ್ರಕಾಶ್ ರಾಥೋಡ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ರೇವಣ್ಣ ಮತದಾನ ಮಾಡುವ ಸಂದರ್ಭದಲ್ಲಿ ಬ್ಯಾಲೆಟ್ ತೋರಿಸಿದ್ದಾರೆ. ಮತದಾನದ ಬಳಿಕ ಡಿ.ಕೆ.ಶಿವಕುಮಾರ್ಗೆ ಬ್ಯಾಲೆಟ್ ತೋರಿಸಿ, ತದನಂತರ ತಮ್ಮ ಪಕ್ಷದ ಎಜೆಂಟ್ನತ್ತ ತೊರಿಸುತ್ತಾರೆ. ಈ ಬಗ್ಗೆ ನಾವು ರಿಟರ್ನಿಂಗ್ ಅಫೀಸರ್ಗೆ ದೂರು ನೀಡಿದ್ದೆವು. ಆದರೆ ಅವರು ಇದರಲ್ಲಿ ತಪ್ಪೇನಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ ನಾವು ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ ಎಂದರು.
ಮತದಾನದ ಏಜೆಂಟ್ ಆದ ನಾನು ಎಲೆಕ್ಷನ್ ಕಮಿಷನ್ಗೆ ದೂರು ಕೊಟ್ಟಿದ್ದೇನೆ. ಅವರಿಂದ ಸೂಕ್ತ ನಿರ್ಧಾರ ಕೈಗೊಳ್ಳುವ ಕಾರ್ಯ ಆಗಲಿದೆ ಎಂಬ ವಿಶ್ವಾಸ ಇದೆ. ಆರ್ಟಿಕಲ್ 324ರ ಪ್ರಕಾರ ನಾವು ಆಯೋಗಕ್ಕೆ ದೂರು ನೀಡಿದ್ದೇವೆ. ಚುನಾವಣಾ ಜವಾಬ್ದಾರಿ ವಹಿಸಿಕೊಂಡಿದ್ದ ರಿಟರ್ನಿಂಗ್ ಆಫೀಸರ್ ಯಾವುದೇ ರೀತಿಯ ದಾಖಲೆ ನೀಡದೆ ನಮ್ಮ ಮನವಿ ತಿರಸ್ಕರಿಸಿದ್ದಾರೆ. ಸಿಸಿಟಿವಿ ದಾಖಲೆ ಸೇರಿದಂತೆ ಯಾವುದೇ ರೀತಿಯ ದಾಖಲೆ ಒದಗಿಸಿಲ್ಲ. ಈ ಎಲ್ಲ ವಿಚಾರವ ಪರಿಗಣಿಸಿ ನಾವು ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದ್ದೇವೆ ಎಂದು ರಾಥೋಡ್ ತಿಳಿಸಿದರು.