ಕರ್ನಾಟಕ

karnataka

ETV Bharat / state

ಉಪಸಮರಕ್ಕೆ ಕೈ ಅಭ್ಯರ್ಥಿ ಪ್ರಕಟ: ಸಿಂದಗಿಗೆ ಅಶೋಕ್ ಮನಗೂಳಿ, ಹಾನಗಲ್​ಗೆ ಶ್ರೀನಿವಾಸ್ ಮಾನೆ - congress

ನಿರೀಕ್ಷೆಯಂತೆ ಹಾನಗಲ್‌ಗೆ ಶ್ರೀನಿವಾಸ್ ಮಾನೆ ಹೆಸರು ಹಾಗೂ ಸಿಂದಗಿಗೆ ಅಶೋಕ್ ಮನಗೂಳಿ ಹೆಸರು ಫೈನಲ್ ಆಗಿದೆ. ಹಾನಗಲ್‌ಗೆ ಮನೋಹರ್ ತಹಶೀಲ್ದಾರ್ ಟಿಕೆಟ್‌ಗಾಗಿ ಬೇಡಿಕೆ ಇಟ್ಟಿದ್ದರು. ಬಳಿಕ ಸಿದ್ದರಾಮಯ್ಯ ಹಾಗೂ ಡಿಕೆಶಿ ಅವರು ಮನೋಹರ್ ತಹಶೀಲ್ದಾರ್ ಮನವೊಲಿಸಿದ್ದರು.

ಉಪಸಮರಕ್ಕೆ ಕೈ ಅಭ್ಯರ್ಥಿ ಪ್ರಕಟ
ಉಪಸಮರಕ್ಕೆ ಕೈ ಅಭ್ಯರ್ಥಿ ಪ್ರಕಟ

By

Published : Oct 5, 2021, 9:45 PM IST

Updated : Oct 5, 2021, 9:56 PM IST

ಬೆಂಗಳೂರು: ಸಿಂದಗಿ ಹಾಗೂ ಹಾನಗಲ್ ಉಪಸಮರಕ್ಕಾಗಿ ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಸಿಂದಗಿ ಕ್ಷೇತ್ರಕ್ಕೆ ಅಶೋಕ್ ಮನಗೂಳಿ ಹಾಗೂ ಹಾನಗಲ್ ಕ್ಷೇತ್ರದಿಂದ ಶ್ರೀನಿವಾಸ್ ಮಾನೆ ಹೆಸರನ್ನು ಅಂತಿಮಗೊಳಿಸಲಾಗಿದೆ.

ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಈ ಈರ್ವರ ಹೆಸರಿಗೆ ಅನುಮೋದನೆ ನೀಡಿದ್ದಾರೆ. ನಿರೀಕ್ಷೆಯಂತೆ ಹಾನಗಲ್‌ಗೆ ಶ್ರೀನಿವಾಸ್ ಮಾನೆ ಹೆಸರು ಹಾಗೂ ಸಿಂದಗಿಗೆ ಅಶೋಕ್ ಮನಗೂಳಿ ಹೆಸರು ಫೈನಲ್ ಆಗಿದೆ. ಹಾನಗಲ್‌ಗೆ ಮನೋಹರ್ ತಹಶೀಲ್ದಾರ್ ಟಿಕೆಟ್‌ಗಾಗಿ ಬೇಡಿಕೆ ಇಟ್ಟಿದ್ದರು. ಬಳಿಕ ಸಿದ್ದರಾಮಯ್ಯ ಹಾಗೂ ಡಿಕೆಶಿ ಅವರು ಮನೋಹರ್ ತಹಶೀಲ್ದಾರ್ ಮನವೊಲಿಸಿದ್ದರು. ಸಿಂದಗಿ ಕ್ಷೇತ್ರ ಜೆಡಿಎಸ್ ಭದ್ರಕೋಟೆಯಾಗಲು ಕಾರಣರಾಗಿದ್ದ ಎಂ.ಸಿ. ಮನಗೂಳಿ ಕುಟುಂಬವನ್ನು ಕಾಂಗ್ರೆಸ್ ತನ್ನ ತೆಕ್ಕೆಗೆ ಸೆಳೆದುಕೊಂಡಿತ್ತು. ದಿವಂಗತ ಎಂ.ಸಿ. ಮನಗೂಳಿ ಪುತ್ರ ಅಶೋಕ್​​ ಮನಗೂಳಿಗೆ ಟಿಕೆಟ್ ಭರವಸೆಯಿತ್ತು. ಕೈಪಡೆ ಇವರನ್ನು ಪಕ್ಷಕ್ಕೆ ಸೇರಿಸಿಕೊಂಡಿತ್ತು‌.

ಇದೀಗ ನಿರೀಕ್ಷೆಯಂತೆಯೇ ಅವರಿಗೆ ಟಿಕೆಟ್ ನೀಡಲಾಗಿದೆ. ಸಿಂದಗಿ ಮತ್ತು ಹಾನಗಲ್ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಅಕ್ಟೋಬರ್ 30ರಂದು ಮತದಾನ ನಡೆಯಲಿದ್ದು, ನವೆಂಬರ್ 2ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.

Last Updated : Oct 5, 2021, 9:56 PM IST

ABOUT THE AUTHOR

...view details