ಬೆಂಗಳೂರು:ಕಳಂಕಿತ ರಾಜಕಾರಣಿಗಳ ಆಯಕಟ್ಟಿನ ಸ್ಥಾನ ಕಲ್ಪಿಸುತ್ತಿರುವ ವಿಚಾರವಾಗಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ನಡುವೆ ಟ್ವೀಟ್ ವಾರ್ ನಡೆದಿದೆ.
ರಾಜಕೀಯ ಆಯಕಟ್ಟಿನ ಸ್ಥಾನ: ಬಿಜೆಪಿ- ಕಾಂಗ್ರೆಸ್ ನಡುವೆ ಟ್ವೀಟ್ ವಾರ್ - Bjp latest tweet
ಪಕ್ಷದ ಪ್ರಮುಖ ಸ್ಥಾನಗಳಿಗೆ ಕಳಂಕಿತರು ಹಾಗೂ ಭ್ರಷ್ಟಾಚಾರಿಗಳನ್ನು ನೇಮಕ ಮಾಡಲಾಗುತ್ತಿದೆ ಎಂದು ಎರಡು ರಾಷ್ಟ್ರೀಯ ಪಕ್ಷಗಳು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ವಾಕ್ಸಮರ ನಡೆಸಿವೆ. ರಾಜಕೀಯ ಪಕ್ಷಗಳ ಪರಸ್ಪರ ಕೆಸರೆರಚಾಟ ನಡೆದಿದ್ದು, ಟ್ವೀಟ್ ಮೂಲಕ ಉಭಯ ಪಕ್ಷಗಳು ತಮ್ಮ ಆಕ್ರೋಶ ಹೊರಹಾಕಿವೆ.
ಕಾಂಗ್ರೆಸ್ ಟ್ವೀಟ್
ಮೊದಲು ಟ್ವೀಟ್ ಮಾಡಿದ ಬಿಜೆಪಿ, ರೌಡಿ ಕೊತ್ವಾಲನ ಶಿಷ್ಯನಿಗೆ ರಾಜ್ಯ ಕಾಂಗ್ರೆಸ್ ನಲ್ಲಿ ದೊಡ್ಡ ಪಟ್ಟ. ಸ್ವತಃ ರೌಡಿ ಆಗಿರುವವರಿಗೆ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಅವಕಾಶ. ಹೆಚ್ಚು ಮತ ಪಡೆದರೂ ಆತನಿಗೆ ಸೋಲು, ಈಗ ಅದೇ ರೌಡಿ ನಾಯಕನಿಗೆ ಕಾರ್ಯಾಧ್ಯಕ್ಷ ಎಂಬ ಪಟ್ಟ ಕಟ್ಟಲು ಉತ್ಸಾಹ. ಕಾಂಗ್ರೆಸ್ ಪಕ್ಷದವರು ಸಮಾಜಕ್ಕೆ ಯಾವ ಸಂದೇಶ ರವಾನಿಸುತ್ತಿದ್ದಾರೆ? ಎಂದು ಹೇಳುವ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಮಹಮ್ಮದ್ ನಲಪಾಡ್ ಹ್ಯಾರಿಸ್ ಹೆಸರು ಪ್ರಸ್ತಾಪಿಸದೇ ಲೇವಡಿ ಮಾಡಿತ್ತು.