ಕರ್ನಾಟಕ

karnataka

ETV Bharat / state

ಡಿಕೆಶಿ ಬೆಂಬಲಿಸಿ ಕೈ ಕಾರ್ಯಕರ್ತರ ಪ್ರತಿಭಟನೆ: ಸದಾಶಿವನಗರದಲ್ಲಿ ಹೈಡ್ರಾಮ - ಬೆಂಗಳೂರು

ಡಿಕೆಶಿ ಬೆಂಬಲಿಸಿ ಪ್ರತಿಭಟನೆ ನಡೆಸುತ್ತಾ ರಮೇಶ್​ ಜಾರಕಿಹೊಳಿ ಮನೆ ಕಡೆ ಹೊರಟ ಕಾಂಗ್ರೆಸ್‌ ಕಾರ್ಯಕರ್ತರನ್ನು ದಾರಿಮಧ್ಯೆ ಪೊಲೀಸರು ತಡೆದಿದ್ದಾರೆ. ಈ ವೇಳೆ ಪ್ರತಿಭಟನಾಕಾರರು ಮತ್ತು ಪೊಲೀಸರ ಮಧ್ಯೆ ವಾಗ್ವಾದ ನಡೆಯಿತು.

Congress Activists protest in Bangalore
ಡಿಕೆಶಿ ಬೆಂಬಲಿಸಿ ಕೈ ಕಾರ್ಯಕರ್ತರ ಪ್ರತಿಭಟನೆ

By

Published : Mar 28, 2021, 4:50 PM IST

ಬೆಂಗಳೂರು:ಸದಾಶಿವನಗರದ ಡಿಕೆಶಿ ಮನೆ ಮುಂದೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನೆಡಸಲು ಮುಂದಾಗಿದ್ದು, ಹೈಡ್ರಾಮ ಸೃಷ್ಟಿಯಾಗಿತ್ತು. ಖಾಸಗಿ ಕಾರ್ಯಕ್ರಮಕ್ಕೆ ಹೋಗಿದ್ದ ಡಿಕೆಶಿ ಮನೆಗೆ ವಾಪಸ್ಸಾಗುವ ಮುನ್ನ ಬೆಂಬಲಿಗರು ಅಲ್ಲಿ ಜಮಾವಣೆಗೊಂಡಿದ್ದರು.

ಡಿಕೆಶಿ ಬೆಂಬಲಿಸಿ ಕೈ ಕಾರ್ಯಕರ್ತರ ಪ್ರತಿಭಟನೆ

ಕಾಂಗ್ರೆಸ್ ಕಾರ್ಯಕರ್ತರು ಮತ್ತು ಡಿಕೆಶಿ ಅಭಿಮಾನಿಗಳನ್ನು ವಶಕ್ಕೆ ಪಡೆದ ಪೊಲೀಸರು ಅವರನ್ನು ವಾಹನದಲ್ಲಿ ಕರೆದೊಯ್ದರು. ಮಾತಿಗೆ ಮಾತು ಬೆಳೆದು ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು.

ಇದನ್ನೂ ಓದಿ:ರಮೇಶ್ ಜಾರಕಿಹೊಳಿ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ

ABOUT THE AUTHOR

...view details