ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ಕೊರೊನಾ, ತೈಲಬೆಲೆ, ಆಹಾರ ಪದಾರ್ಥಗಳ ಬೆಲೆ ದಾಖಲೆ ಮಟ್ಟದಲ್ಲಿ ಏರಿಕೆ ಆಗಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಬೆಲೆ ಏರಿಕೆ ಕಡಿತಗೊಳಿಸದೇ ನರೇಂದ್ರ ಮೋದಿ ಬೆಲೆ ಏರಿಕೆಯನ್ನು ಹೆಚ್ಚಿಸುತ್ತಿದ್ದಾರೆ. ಆದ್ದರಿಂದ ಮೋದಿ ದುರಾಡಳಿತವನ್ನು ಖಂಡಿಸಿ ಬೆಲೆ ಏರಿಕೆಯನ್ನು ಕಡಿತಗೊಳಿಸಬೇಕೆಂದು ಆಗ್ರಹಿಸಿ ನಗರದ ಕ್ರಾಂಗ್ರೆಸ್ ಭವನದಲ್ಲಿ ಕಾರ್ಯಕರ್ತರು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.
ಬೆಲೆ ಏರಿಕೆ ಬಗ್ಗೆ ತಲೆ ಕೆಡಿಸಿಕೊಳ್ಳದ ನರೇಂದ್ರ ಮೋದಿಗೆ ಪಂದ್ಯ ಪುರುಷೋತ್ತಮ ಪಿಕ್ ಪಾಕೆಟ್ ಕಪ್ ಪ್ರಶಸ್ತಿ ನೀಡಿ ಪ್ರತಿಭಟನೆ ನಡೆಸಲಾಯಿತು. ಪೆಟ್ರೋಲ್- ಡೀಸೆಲ್ ಬೆಂಗಳೂರು ನಗರದಲ್ಲಿ 100 ರೂ ತಲುಪಿದೆ. ಅಡುಗೆ ಎಣ್ಣೆ ದಾಖಲೆ ಮಟ್ಟದಲ್ಲಿ ದುಪ್ಪಟ್ಟಾಗಿ ಏರಿಕೆಯಾಗಿದೆ. ಹೀಗಿರುವಾಗ ಜನಸಾಮಾನ್ಯರು ಬದುಕುವ ಪರಿಸ್ಥಿತಿ ಇಲ್ಲದಂತಾಗಿದೆ.