ಕರ್ನಾಟಕ

karnataka

ETV Bharat / state

PAYCM ಪೋಸ್ಟರ್ ಪ್ರಕರಣ: ಐವರು ಕಾಂಗ್ರೆಸ್ ಕಾರ್ಯಕರ್ತರ ಬಂಧನ - ಪೇ ಸಿಎಂ ಪೋಸ್ಟರ್ ವಿವಾದ

ಪೇ ಸಿಎಂ ಪೋಸ್ಟರ್ ಅಂಟಿಸಿದ ಪ್ರಕರಣ ಸಂಬಂಧ ಬೆಂಗಳೂರಿನಲ್ಲಿ ಐವರು ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.

congress-activists-arrested-in-paycm-poster-case
ಪೇ ಸಿಎಂ ಪೋಸ್ಟರ್ ಪ್ರಕರಣ : ಐವರು ಕಾಂಗ್ರೆಸ್ ಕಾರ್ಯಕರ್ತರ ಬಂಧನ

By

Published : Sep 22, 2022, 11:50 AM IST

Updated : Sep 22, 2022, 12:03 PM IST

ಬೆಂಗಳೂರು:ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಫೋಟೋ ಬಳಸಿ ಪೇ ಸಿಎಂ (PAYCM) ಪೋಸ್ಟರ್ ಅಂಟಿಸಿದ ಪ್ರಕರಣ ಸಂಬಂಧ ಹೈಗ್ರೌಂಡ್ಸ್​ ಪೊಲೀಸರು ಐವರು ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸಿದ್ದಾರೆ.

ಬಿ.ಆರ್.ನಾಯ್ಡು, ಪವನ್, ಗಗನ್, ಸಂಜಯ್ ಹಾಗೂ ವಿಶ್ವನಾಥ್ ಎಂಬುವರ ಬಂಧನವಾಗಿದೆ. ಇನ್ನೂ ಕೆಲವರನ್ನು ವಶಕ್ಕೆ ಪಡೆಯಲಾಗಿದೆ. ನಗರದಲ್ಲಿ ಪೇ ಸಿಎಂ ಶೀರ್ಷಿಕೆಯಡಿ ಸಿಎಂ ಫೋಟೋ ಬಳಸಿ ಪೋಸ್ಟರ್​​ ಅಂಟಿಸಿದ ವಿಚಾರಕ್ಕೆ ನಾಲ್ಕು ಠಾಣೆಗಳಲ್ಲಿ ಎಫ್ಐಆರ್ ದಾಖಲಾಗಿತ್ತು.

ಇದನ್ನೂ ಓದಿ:ಪೇ ಸಿಎಂ ಪೋಸ್ಟರ್​​.. ಕಾಂಗ್ರೆಸ್, ಬಿಜೆಪಿಯಿಂದ ಪರ-ವಿರೋಧದ ಅಭಿಪ್ರಾಯ ವ್ಯಕ್ತ

ಈ ಪ್ರಕರಣಗಳ ತನಿಖೆ ನಡೆಸಲು ಸಿಸಿಬಿಗೆ ನಗರದ ಪೊಲೀಸ್​ ಆಯುಕ್ತರು ಸೂಚಿಸಿದ್ದರು.‌ ಬುಧವಾರ ರಾತ್ರಿ ಹೈಗ್ರೌಂಡ್ಸ್ ಹಾಗೂ ಸಿಸಿಬಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಎಂಟು ಜನರನ್ನ ವಶಕ್ಕೆ ಪಡೆದಿದ್ದಾರೆ.‌ ಇದರಲ್ಲಿ ಐವರು ಕಾಂಗ್ರೆಸ್​​ನ ಸಕ್ರಿಯ ಕಾರ್ಯಕರ್ತರು ಎಂದು ಹೇಳಲಾಗುತ್ತಿದೆ‌.

ಇದನ್ನೂ ಓದಿ:ರಾಜ್ಯ ಮತ್ತು ನನ್ನ ಹೆಸರು ಕೆಡಿಸಲು ಈ ರೀತಿ ಪೋಸ್ಟರ್​ ಹಾಕಲಾಗಿದೆ: ಸಿಎಂ

Last Updated : Sep 22, 2022, 12:03 PM IST

ABOUT THE AUTHOR

...view details