ಬೆಂಗಳೂರು :ಡಿಕೆಶಿ ಬ್ರದರ್ಸ್ ಮನೆ ಮೇಲೆ ಸಿಬಿಐ ದಾಳಿ ಹಿನ್ನೆಲೆ, ಕಾಂಗ್ರೆಸ್ ಕಾರ್ಯಕರ್ತರು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದು, ಈ ವೇಳೆ ಕಾರ್ಯಕರ್ತರು ಕೊರೊನಾ ನಿಯಮವಾಳಿಗಳನ್ನು ಮರೆತು ಪ್ರತಿಭಟನೆಯಲ್ಲಿ ನಿರತರಾಗಿದ್ದಾರೆ.
ಕೊರೊನಾ ಇದ್ರೂ ಡೋಂಟ್ ಕೇರ್: ಮಾಸ್ಕ್ ಹಾಕದೇ ಡಿಕೆಶಿ ಮನೆ ಬಳಿ ಪ್ರತಿಭಟನೆ - Congress activists protest against government
ಕೊರೊನಾ ನಿಯಮವನ್ನು ಗಾಳಿಗೆ ತೂರಿ ಕಾಂಗ್ರೆಸ್ ಕಾರ್ಯಕರ್ತರು ಡಿಕೆ ಬ್ರದರ್ಸ್ ಮನೆ ಮೇಲಿನ ದಾಳಿ ಖಂಡಿಸಿ, ಡಿ.ಕೆ ಶಿವಕುಮಾರ್ ಮನೆ ಮುಂದೆ ಗುಂಪು ಗುಂಪಾಗಿ ಕಾರ್ಯಕರ್ತರು ಸೇರಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.

ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ
ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ
ಪ್ರತಿಭಟನೆಯಲ್ಲಿ ಭಾಗಿಯಾದವರು ಸಾಮಾಜಿಕ ಅಂತರ ಕಾಪಾಡದೇ, ಮಾಸ್ಕ್ ಹಾಕದೇ ಪ್ರತಿಭಟನೆಯಲ್ಲಿ ತೊಡಗಿದ್ದಾರೆ. ಕೊರೊನಾ ಸೋಂಕು ವ್ಯಾಪಕವಾಗಿರುವ ಕಾರಣ ಕೆಲ ನಿಯಮಗಳನ್ನು ಪಾಲನೆ ಮಾಡಲು ಆರೋಗ್ಯ ಇಲಾಖೆ ಸೂಚಿಸಿದೆ. ಆದರೆ ಸದ್ಯ ಪೊಲೀಸರು ನಿಯಮ ಪಾಲನೆ ಮಾಡಲು ಸೂಚನೆ ನೀಡಿದರೂ ಅದನ್ನು ಗಾಳಿಗೆ ತೂರಿ, ಕಾರ್ಯಕರ್ತರು ಮಾತ್ರ ಪ್ರತಿಭಟನೆ ಮುಂದುವರೆಸಿದ್ದಾರೆ.
ಪೊಲೀಸರು ಪ್ರತಿಭಟನಾ ಸ್ಥಳದಲ್ಲಿನ ವಿಡಿಯೋ ರೆಕಾರ್ಡ್ ಮಾಡಿಕೊಂಡು ಕೊರೊನಾ ನಿಯಮ ಉಲ್ಲಂಘನೆ ಮಾಡಿದವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.