ಬೆಂಗಳೂರು: ಮಾಜಿ ಸಿಎಂ ಕುಮಾರಸ್ವಾಮಿ ತಮ್ಮ ಮಗ ನಿಖಿಲ್ ಕುಮಾರಸ್ವಾಮಿ ಅವರ ವಿವಾಹವನ್ನು ಸರಳವಾಗಿ ಆಯೋಜಿಸಿದ್ದಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಭಿನಂದನೆ ಸಲ್ಲಿಸಿದ್ದಾರೆ.
ಲಾಕ್ಡೌನ್ ಮಧ್ಯೆ ಸರಳ ವಿವಾಹ ನಡೆಸಿದ್ದಕ್ಕೆ ಎಚ್ಡಿಕೆಗೆ ಸಿಎಂ ಬಿಎಸ್ವೈ ಅಭಿನಂದನೆ - ನಿಖಿಲ್ ಕುಮಾರಸ್ವಾಮಿ ಮದುವೆ
ಲಾಕ್ಡೌನ್ ನಡುವೆಯೂ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿ ಅವರ ವಿವಾಹವನ್ನು ಸರಳವಾಗಿ ರಾಮನಗರದಲ್ಲಿ ಆಯೋಜಿಸಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪರ- ವಿರೋಧದ ಮಾತುಗಳು ಕೇಳಿಬಂದಿದ್ದವು. ಈ ಎಲ್ಲದರ ನಡುವೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, 'ಕಾನೂನು ಚೌಕಟ್ಟಿನಲ್ಲಿ ಲಾಕ್ಡೌನ್ ನಿಯಮಗಳಿಗೆ ಧಕ್ಕೆ ಆಗದಂತೆ ಕುಮಾರಸ್ವಾಮಿ ತಮ್ಮ ಪುತ್ರನ ಮದುವೆ ಮಾಡಿದ್ದಾರೆ' ಎಂದು ಶ್ಲಾಘಿಸಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಮಾತನಾಡಿದ ಯಡಿಯೂರಪ್ಪ, ಕುಮಾರಸ್ವಾಮಿ ಸರ್ಕಾರದ ಅನುಮತಿ ಪಡೆದು ವಿವಾಹ ಆಯೋಜನೆ ಮಾಡಿದ್ದರು. ಅವರದ್ದು ದೊಡ್ಡ ಕುಟುಂಬವಾದರೂ ಸರಳ ರೀತಿಯಲ್ಲಿ ಮದುವೆ ಮಾಡಿದ್ದಾರೆ. ಯಾವುದೇ ನಿಯಮ ಉಲ್ಲಂಘನೆ ಸಹ ಮಾಡಿಲ್ಲ. ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ರಾಮನಗರದಲ್ಲಿ ನಿನ್ನೆ ನಡೆದ ನಿಖಿಲ್ ಕುಮಾರಸ್ವಾಮಿ ಮದುವೆಯಲ್ಲಿ ಲಾಕ್ ಡೌನ್ ನಿಯಮ ಉಲ್ಲಂಘಿಸಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ವಿವಾಹ ನಡೆಸಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಇಂದು ಪ್ರತಿಕ್ರಿಯಿಸಿದ ಯಡಿಯೂರಪ್ಪ, 'ಸರಳವಾಗಿ ವಿವಾಹ ನಡೆಸಿದ್ದಾರೆ' ಎಂದು ಆರೋಪಗಳಿಗೆ ತೆರೆ ಎಳೆದಿದ್ದಾರೆ.