ಕರ್ನಾಟಕ

karnataka

ETV Bharat / state

ಮಂಗಳಾ ಅಂಗಡಿ, ಶರಣು ಸಲಗರ್​​ಗೆ ಸಿಎಂ, ಸಚಿವರಿಂದ ಅಭಿನಂದನೆ - ಪ್ರಧಾನಿ ನರೇಂದ್ರ ಮೋದಿ ನಾಯಕತ್ವ

ಪ್ರಧಾನಿ ನರೇಂದ್ರ ಮೋದಿ ನಾಯಕತ್ವಕ್ಕೆ ಬೆಂಬಲ ವ್ಯಕ್ತಪಡಿಸಿ ಬಿಜೆಪಿ ಅಭ್ಯರ್ಥಿಗೆ ಆಶೀರ್ವದಿಸಿರುವ ಕ್ಷೇತ್ರದ ಜನತೆಗೆ ಕೃತಜ್ಞತಾ ಪೂರ್ವಕ ಧನ್ಯವಾದಗಳು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.

congratulations-for-winning-candidates-to-cm-and-minister
ಸಿಎಂ, ಸಚಿವರಿಂದ ಅಭಿನಂದನೆ

By

Published : May 2, 2021, 10:36 PM IST

ಬೆಂಗಳೂರು:ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಮಂಗಳಾ ಅಂಗಡಿ ಹಾಗೂ ಶರಣು ಸಲಗರರಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಬಿಜೆಪಿ ನಾಯಕರು ಅಭಿನಂದನೆ ಸಲ್ಲಿಸಿದ್ದು, ಬಿಜೆಪಿ ಬೆಂಬಲಿಸಿದ ಮತದಾರರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಪ್ರಧಾನಿ ನರೇಂದ್ರ ಮೋದಿ ನಾಯಕತ್ವಕ್ಕೆ ಬೆಂಬಲ ವ್ಯಕ್ತಪಡಿಸಿ ಬಿಜೆಪಿ ಅಭ್ಯರ್ಥಿಗೆ ಆಶೀರ್ವದಿಸಿರುವ ಕ್ಷೇತ್ರದ ಜನತೆಗೆ ಕೃತಜ್ಞತಾಪೂರ್ವಕ ಧನ್ಯವಾದಗಳು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ. ಬಸವಕಲ್ಯಾಣ ಅಭ್ಯರ್ಥಿ ಶರಣು ಸಲಗರ್ ಗೆಲುವಿಗೂ ಅಭಿನಂದನೆ ಸಲ್ಲಿಸಿ ಮತದಾರರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಬೊಮ್ಮಾಯಿ ಅಭಿನಂದನೆ:

ಬಿಜೆಪಿಯನ್ನು ಗೆಲ್ಲಿಸಿದ ಬಸವಕಲ್ಯಾಣ ಕ್ಷೇತ್ರದ ಜನತೆಗೆ, ಬಿಜೆಪಿ ಕಾರ್ಯಕರ್ತರಿಗೆ ಹಾಗೂ ಚುನಾವಣೆಯಲ್ಲಿ ಗೆದ್ದಿರುವ ಬಿಜೆಪಿ ಅಭ್ಯರ್ಥಿ ಶರಣು ಸಲಗರ ಅವರಿಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಬಸವಕಲ್ಯಾಣ ಕ್ಷೇತ್ರದ ಉಪಚುನಾವಣೆಯಲ್ಲಿ ನಾವೆಲ್ಲ ಸಂಘಟಿತರಾಗಿ ಹೋರಾಟ ಮಾಡಿದೆವು. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಅಭಿವೃದ್ಧಿಗೆ ಹೆಚ್ಚು ಒತ್ತು ಕೊಟ್ಟರು. ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸಿದರು. ನಾವು ಎಲ್ಲಾ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡೆವು.

ಚುನಾವಣಾ ಉಸ್ತುವಾರಿ ಜವಾಬ್ದಾರಿಯನ್ನು ನಾನು, ಡಿಸಿಎಂ ಲಕ್ಷ್ಮಣ ಸವದಿ, ವಸತಿ ಸಚಿವರಾದ ವಿ. ಸೋಮಣ್ಣ ಹಾಗೂ ಬೀದರ್ ಕ್ಷೇತ್ರದ ಸಂಸದರಾದ ಭಗವಂತ ಖುಬಾ ಸಮನಾಗಿ ಹಂಚಿಕೊಂಡು ಪ್ರಾಮಾಣಿಕವಾಗಿ ನಿರ್ವಹಿಸಿದೆವು. ಜನ ಅಭಿವೃದ್ಧಿಗಾಗಿ ಮತ ಕೊಟ್ಟಿದ್ದಾರೆ. ಬಸವಕಲ್ಯಾಣ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ನಾವು ಬದ್ಧರಾಗಿದ್ದೇವೆ ಎಂದು ಪತ್ರಿಕಾ ಹೇಳಿಕೆ ಮೂಲಕ ತಿಳಿಸಿದ್ದಾರೆ.

ಡಿಸಿಎಂ ಕಾರಜೋಳ ಅಭಿನಂದನೆ:

ಅತ್ಯಂತ ರೋಚಕ ತಿರುವು ಪಡೆದ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಮಂಗಳಾ ಅಂಗಡಿಯವರು ಜಯಭೇರಿ ಬಾರಿಸಿದ್ದು, ಎಲ್ಲಾ ಮತದಾರ ಬಂಧುಗಳಿಗೆ ಅಭಾರಿಯಾಗಿದ್ದು, ಮಂಗಳಾ ಅಂಗಡಿ, ಎಲ್ಲಾ ಕಾರ್ಯಕರ್ತರಿಗೆ, ಮುಖಂಡರನ್ನು ಅಭಿನಂದಿಸುವುದಾಗಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ತಿಳಿಸಿದ್ದಾರೆ.

ಅತ್ಯಂತ ಪ್ರತಿಷ್ಠೆಯ ಈ ಚುನಾವಣೆಯಲ್ಲಿ, ಬಿಜೆಪಿ ಜಯ ಸಾಧಿಸುವುದರೊಂದಿಗೆ ಕೇಂದ್ರದಲ್ಲಿ ನರೇಂದ್ರ ಮೋದಿಜಿ ಮತ್ತು ರಾಜ್ಯದಲ್ಲಿ ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರ ಜನಪರ ಕಾರ್ಯಕ್ರಮಗಳೊಂದಿಗೆ ಜನರ‌ ಮನ ಗೆದ್ದಿದ್ದು, ಜನ ನಮ್ಮ ಪರವಾಗಿದ್ದಾರೆ ಎಂಬುದು ಸಾಬೀತಾಗಿದೆ. ಬೆಳಗಾವಿಯ ಮತದಾರ ಪ್ರಭುಗಳು ಶ್ರೀಮತಿ ಮಂಗಳಾ ಅವರನ್ನು ಜಯಶೀಲರನ್ನಾಗಿಸಿ, ಅವರ ಪತಿ ಸುರೇಶ ಅಂಗಡಿ ಅವರಿಗೆ ನಿಜವಾದ ಗೌರವ ಸೂಚಿಸಿದ್ದಾರೆ ಎಂದಿದ್ದಾರೆ.

ಮಂಗಳಾ ಅಂಗಡಿ ಅವರಿಗೆ ಹಾರ್ದಿಕ ಅಭಿನಂದನೆಗಳು. ಅವರು ಜಿಲ್ಲೆಯ ಅಭಿವೃದ್ಧಿಗಾಗಿ ಶ್ರಮಿಸಲಿದ್ದಾರೆ. ಮುಂದೆ ಉತ್ತಮ ಸಾಧನೆಗಳು ಹೊರಹೊಮ್ಮಲಿ ಎಂದು ನಾನು ಶುಭ ಹಾರೈಸುತ್ತೇನೆ. ಈ ಅಭೂತಪೂರ್ವ ಜಯ ತಂದುಕೊಟ್ಟ ಮತದಾರರಿಗೆ ಮತ್ತು ಈ ಚುನಾವಣೆಯಲ್ಲಿ ಶ್ರಮಿಸಿದ ಎಲ್ಲ ಬಿಜೆಪಿ ಮುಖಂಡರಿಗೆ ಮತ್ತು ಕಾರ್ಯಕರ್ತರಿಗೆ ಹಾರ್ದಿಕ ವಂದನೆಗಳನ್ನು ಡಿಸಿಎಂ ಸಲ್ಲಿಸಿದ್ದಾರೆ.

ಡಿಸಿಎಂ ಸವದಿ ಹರ್ಷ:

ಅತ್ಯಂತ ರೋಚಕ ತಿರುವು ಪಡೆದ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಮಂಗಳಾ ಅಂಗಡಿಯವರು ಜಯಭೇರಿ ಬಾರಿಸುವದರೊಂದಿಗೆ ಫಲಿತಾಂಶವು ಬಿಜೆಪಿಯ ಪಾಲಿಗೆ ಮಂಗಳದಾಯಕವಾಗಿದೆ ಎಂದು ಉಪಮುಖ್ಯಮಂತ್ರಿ ಮತ್ತು ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದ್ದಾರೆ.

ಸಹೋದರಿ ಮಂಗಳ ಅವರಿಗೆ ನನ್ನ ಹಾರ್ದಿಕ ಅಭಿನಂದನೆಗಳು. ಅವರಿಂದ ಮುಂದೆ ಉತ್ತಮ ಸಾಧನೆಗಳು ಹೊರಹೊಮ್ಮಲಿ ಎಂದು ನಾನು ಶುಭ ಹಾರೈಸುತ್ತೇನೆ. ಕಾಂಗ್ರೆಸ್ ಪಕ್ಷವು ಈ ಕ್ಷೇತ್ರದಲ್ಲಿ ಇನ್ನಿಲ್ಲದ ತಂತ್ರಗಳನ್ನು ನಡೆಸಿದರೂ ಸಹ ಬಿಜೆಪಿಯ ಒಗ್ಗಟ್ಟಿನ ಮತ್ತು ಸಂಘಟನೆಯ ಬಲದಿಂದ ವಿಜಯ ಸಾಧ್ಯವಾಗಿದೆ. ಈ ಅಭೂತಪೂರ್ವ ಜಯ ತಂದುಕೊಟ್ಟ ಮತದಾರರಿಗೆ ಮತ್ತು ಈ ಚುನಾವಣೆಯಲ್ಲಿ ಶ್ರಮಿಸಿದ ಎಲ್ಲ ಬಿಜೆಪಿ ಮುಖಂಡರಿಗೆ ಮತ್ತು ಕಾರ್ಯಕರ್ತರಿಗೆ ನನ್ನ ಹಾರ್ದಿಕ ವಂದನೆಗಳು ಎಂದು ಪತ್ರಿಕಾ ಹೇಳಿಕೆ ಮೂಲಕ ತಿಳಿಸಿದ್ದಾರೆ.

ನಿರಾಣಿ ಅಭಿನಂದನೆ:

ಕೊನೆಯ ಕ್ಷಣದವರೆಗೂ ರೋಚಕಘಟ್ಟ ತಲುಪಿದ್ದ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಮಂಗಲ ಸುರೇಶ್ ಅಂಗಡಿ ಗೆಲುವಿಗೆ ಗಣಿ ಮತ್ತು ‌ಭೂವಿಜ್ಞಾನ ಸಚಿವ ಮುರುಗೇಶ್‌ ಆರ್ ನಿರಾಣಿ ಅವರು ಮತದಾರರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಮತ ಎಣಿಕೆಯ ಕೊನೆಯ ಸುತ್ತಿನವರೆಗೂ ತೀವ್ರ ಕುತೂಹಲ ಕೆರಳಿಸಿದ್ದ ಫಲಿತಾಂಶದಲ್ಲಿ ನಮ್ಮ ‌ಅಭ್ಯರ್ಥಿ ಗೆಲುವು ಸಾಧಿಸುವ ಮೂಲಕ ಬೆಳಗಾವಿ ಜಿಲ್ಲೆ ಬಿಜೆಪಿಯ ಭದ್ರಕೋಟೆ ಎಂಬುದು ‌ಇದರಿಂದ ಮತ್ತೊಮ್ಮೆ ಸಾಬೀತಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details