ಬೆಂಗಳೂರು :ಮಹಾತ್ಮ ಗಾಂಧಿ ನೇತೃತ್ವದಲ್ಲಿ ಕ್ವಿಟ್ ಇಂಡಿಯಾ ಚಳವಳಿ ನಡೆಸಿ 78 ವರ್ಷಗಳು ತುಂಬಿದ ಹಿನ್ನೆಲೆ ಕಾಂಗ್ರೆಸ್ ನಾಯಕರು ಟ್ವೀಟ್ ಮಾಡಿ ಹೋರಾಟದ ಪ್ರಾಮುಖ್ಯತೆಯನ್ನು ಬಣ್ಣಿಸಿದ್ದಾರೆ.
ನೆನಪಿರಲಿ 'ಕ್ವಿಟ್ ಇಂಡಿಯಾ' ಕೇವಲ ಒಂದು ಆಂದೋಲನವಲ್ಲ ಈ ನೆಲದ ಕ್ರಾಂತಿ. 78 ವರ್ಷಗಳ ಹಿಂದೆ ಮಹಾತ್ಮ ಗಾಂಧಿಜೀ ಅವರ ನೇತೃತ್ವದಲ್ಲಿ ದಾಸ್ಯ ಅನ್ಯಾಯ, ದಬ್ವಾಳಿಕೆ, ಸರ್ವಾಧಿಕಾರದ ವಿರುದ್ದ ಇಡೀ ದೇಶವೇ ಸೆಟೆದು ನಿಂತಿತ್ತು. 'ಮಾಡು ಇಲ್ಲವೇ ಮಡಿ' ವೇದ ಘೋಷ ಈ ನೆಲದ ಎಲ್ಲೆಡೆ ರಣರಣಿಸಿತ್ತು. ಕ್ವಿಟ್ ಇಂಡಿಯಾದ 78 ನೇ ಸ್ಮರಣೋತ್ಸವದ ಸಂದರ್ಭದಲ್ಲಿ ನಾವೆಲ್ಲಾ ಅನ್ಯಾಯ ಅಸತ್ಯ ದಬ್ಬಾಳಿಕೆ ಸರ್ವಾಧಿಕಾರಿ ಧೊರಣೆಯ ವಿರುದ್ದ ಹೋರಾಡಲು ಮತ್ತೆ ಪಣ ತೊಡೋಣ. ದೇಶ, ಪ್ರಜಾಪ್ರಭುತ್ವ ಉಳಿಸೋಣ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಕಂಡ್ರೆ ಟ್ವೀಟ್ ಮಾಡಿದ್ದಾರೆ.