ಕರ್ನಾಟಕ

karnataka

ETV Bharat / state

ಮಹಿಳೆಯರಿಗೆ ಅವಕಾಶ ಸಿಗೋದೆ ಕಡಿಮೆ.. ಕಾಂಗ್ರೆಸ್ ನನಗೆ ಅವಕಾಶ ನೀಡಿದೆ : ಕುಸುಮಾ ಹನುಮಂತರಾಯಪ್ಪ - ಆರ್​. ಆರ್​ ನಗರದ ಉಪಚುನಾವಣೆ

ಆರ್​. ಆರ್​ ನಗರ ಉಪಚುನಾವಣೆಯ ಕಾಂಗ್ರೆಸ್​ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ ಹಿರಿಯ ಕಾಂಗ್ರೆಸ್​ ನಾಯಕರ ಜೊತೆ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ನಡೆಸಿದರು..

Cong candidate Campagin at RR Nagar
ಕುಸುಮಾ ಹನುಮಂತರಾಯಪ್ಪ ಮತಭೇಟೆ ನಡೆಸಿದರು

By

Published : Oct 30, 2020, 10:00 PM IST

ಬೆಂಗಳೂರು :ಮಹಿಳೆಯರು ತಮಗಿಂತ ತಮ್ಮ ಮನೆಯವರ ಬಗ್ಗೆ ಯೋಚಿಸುವುದೇ ಹೆಚ್ಚು. ಮಹಿಳೆಯರಿಗೆ ಅವಕಾಶ ಸಿಗುವುದು ಕಡಿಮೆ. ಆದರೆ, ಕಾಂಗ್ರೆಸ್ ನನಗೆ ಅವಕಾಶ ನೀಡಿದೆ ಎಂದು ಆರ್​. ಆರ್​ ನಗರ ಕೈ ಅಭ್ಯರ್ಥಿ ಕುಸುಮಾ ಹೇಳಿದರು.

ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಜೊತೆ ರೋಡ್ ಶೋ ನಡೆಸಿ ಮಾತನಾಡಿದ ಅವರು, "ಇಂದು ನಾನು ನಿಮ್ಮ ಮನೆ ಮುಂದೆ ಬಂದು ನಿಂತಿದ್ದೇನೆ. ಈ ಬಾರಿ ನಮ್ಮ ಪಕ್ಷದ ಪ್ರಮುಖ ನಾಯಕರ ಜೊತೆ ಬಂದಿದ್ದೇನೆ.

ಮಹಿಳೆಯರು ತಮಗಿಂತ ತಮ್ಮ ಮನೆಯಲ್ಲಿರುವ ಗಂಡ, ಮಕ್ಕಳು, ತಂದೆ, ತಾಯಿ, ಸೋದರ, ಸೋದರಿಯರ ಬಗ್ಗೆ ಯೋಚಿಸುವುದೇ ಹೆಚ್ಚು. ಮಹಿಳೆಯರಿಗೆ ರಾಜಕೀಯದಲ್ಲಿ ಅವಕಾಶ ಸಿಗುವುದೇ ಕಡಿಮೆ. ಆದರೆ, ಕಾಂಗ್ರೆಸ್ ನನಗೆ ಅವಕಾಶ ನೀಡಿದೆ. ನಿಮ್ಮ ಸೇವೆಗಾಗಿ ಅದನ್ನು ಮುಡಿಪಾಗಿಡುತ್ತೇನೆ ಎಂದರು.

ಕುಸುಮಾ ಹನುಮಂತರಾಯಪ್ಪ ಮತಭೇಟೆ ನಡೆಸಿದರು

ಈ ಚುನಾವಣೆಯಲ್ಲಿ ನನ್ನ ಹೆಸರು ಕೇಳಿ ಬರುತ್ತಿದ್ದಂತೆ, ನನ್ನ ಮೇಲೆ ಗದಾಪ್ರಹಾರ ನಡೆಯಲು ಶುರುವಾಗಿದೆ. ನಾನು ನನ್ನ ಗಂಡನ ಹೆಸರು ಬಳಸಬಾರದು ಅಂತಾರೆ. ನನ್ನ ಮೇಲೆ ಎಫ್ಐಆರ್ ಹಾಕ್ತಾರೆ. ಪ್ರಚಾರಕ್ಕೆ ಹೋದಲ್ಲೆಲ್ಲಾ ತೊಂದರೆ ಕೊಡುತ್ತಿದ್ದಾರೆ. ನಾನು ಅವರಿಗೆ ಒಂದು ಪ್ರಶ್ನೆ ಕೇಳಲು ಇಚ್ಚಿಸುತ್ತೇನೆ.

ಹೆಣ್ಣು ಮಗಳಾಗಿ ನಾನು ರಾಜಕೀಯಕ್ಕೆ ಬರೋದು ತಪ್ಪಾ..?. ಜನರ ಸೇವೆ ಮಾಡೋದು ತಪ್ಪಾ..?. ಇಲ್ಲಿರುವ ಯುವಕರು, ಮಹಿಳೆಯರು ಒಟ್ಟಾಗಿ ನಿಲ್ಲಬೇಕು. ಒಂದು ಹೆಣ್ಣಿಗೆ ಅವಕಾಶ ಸಿಕ್ಕಾಗ ಆಕೆಯೂ ದೇಶ ಕಟ್ಟುವ ಕೆಲಸವನ್ನು ಸಮರ್ಥವಾಗಿ ಮಾಡುತ್ತಾಳೆ ಎಂಬುವುದನ್ನು ತೋರಿಸಲು ಅವಕಾಶ ಮಾಡಿಕೊಡಬೇಕು ಎಂದು ಹೇಳಿದರು.

ನಿಮ್ಮ ಮನೆ ಮಗಳಾದ ನನಗೆ ನವೆಂಬರ್ 3 ರಂದು ನಡೆಯಲಿರುವ ಚುನಾವಣೆಯಲ್ಲಿ ಕ್ರಮ ಸಂಖ್ಯೆ 1 ಹಸ್ತದ ಗುರುತಿಗೆ ಮತಹಾಕಿ ಆಶೀರ್ವದಿಸಿ ಎಂದು ಮನವಿ ಮಾಡಿದರು.

ABOUT THE AUTHOR

...view details