ಕರ್ನಾಟಕ

karnataka

ETV Bharat / state

ಕಾರು ನಿಲ್ಲಿಸುವ ವಿಚಾರಕ್ಕೆ ಗಲಾಟೆ: ಬಿಜೆಪಿ ನಾಯಕನಿಂದ ಮಹಿಳೆ‌ ಮೇಲೆ ಹಲ್ಲೆ ಆರೋಪ - Conflict for the reason of parking the car news

ಉಮೇಶ್ ಮತ್ತು ಶಿವಕುಮಾರ್ ನಡುವೆ ಪಾರ್ಕಿಂಗ್ ವಿಚಾರದಲ್ಲಿ ಗಲಾಟೆ ನಡೆಯುತ್ತಿತ್ತಂತೆ. ಈ ವೇಳೆ ಮಧ್ಯಪ್ರವೇಶಿಸಿದ ಲೀಲಾವತಿಗೆ ಪಾಟ್​ನಿಂದ ಹಲ್ಲೆ ನಡೆಸಲಾಗಿದೆ ಎಂದು ಆರೋಪ ಮಾಡಲಾಗಿದೆ.

ಬಿಜೆಪಿ ನಾಯಕನಿಂದ ಮಹಿಳೆ‌ ಮೇಲೆ ಹಲ್ಲೆ ಆರೋಪ
ಬಿಜೆಪಿ ನಾಯಕನಿಂದ ಮಹಿಳೆ‌ ಮೇಲೆ ಹಲ್ಲೆ ಆರೋಪ

By

Published : Feb 25, 2021, 7:17 PM IST

ಬೆಂಗಳೂರು:ಕಾರು ನಿಲ್ಲಿಸುವ ವಿಚಾರಕ್ಕೆ ಲೀಲಾವತಿ ಎಂಬ ಮಹಿಳೆ ಮೇಲೆ ಸ್ಥಳೀಯ ಬಿಜೆಪಿ ನಾಯಕ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ.

ಸ್ಥಳೀಯ ಬಿಜೆಪಿ ಮುಖಂಡ ಉಮೇಶ್, ಮಹಿಳೆ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಮುಖ, ತಲೆ, ಕೈಗೆ ಹಲ್ಲೆ ಮಾಡಿರುವುದಾಗಿ ಮಹಿಳೆ ದೂರಿದ್ದಾರೆ. ಬಂಡೆಪಾಳ್ಯದ ಸಮೀಪ ಹೊಸಪಾಳ್ಯದಲ್ಲಿ ಈ ಘಟನೆ ನಡೆದಿದೆ.

ಓದಿ:ನಾಳೆ ರಾಷ್ಟ್ರಾದ್ಯಂತ ಲಾರಿ ಮುಷ್ಕರ; ಪೆಟ್ರೋಲ್, ಡೀಸೆಲ್ ದರ ಇಳಿಕೆಗೆ ಒತ್ತಾಯ

ಉಮೇಶ್ ಮತ್ತು ಮಹಿಳೆಯ ಪತಿ ಶಿವಕುಮಾರ್ ಅಕ್ಕಪಕ್ಕದ ನಿವಾಸಿಗಳಾಗಿದ್ದು, ಉಮೇಶ್ ಮತ್ತು ಶಿವಕುಮಾರ್ ನಡುವೆ ಪಾರ್ಕಿಂಗ್ ವಿಚಾರದಲ್ಲಿ ಗಲಾಟೆ ನಡೆಯುತ್ತಿತ್ತಂತೆ. ಈ ವೇಳೆ ಮಧ್ಯಪ್ರವೇಶಿಸಿದ ಲೀಲಾವತಿಗೆ ಪಾಟ್​ನಿಂದ ಹಲ್ಲೆ ನಡೆಸಲಾಗಿದೆ ಎಂದು ಆರೋಪ ಮಾಡಲಾಗಿದೆ. ಬಂಡೆಪಾಳ್ಯ ಪೊಲೀಸ್ ಠಾಣೆಗೆ ದೂರು ನೀಡಿ, ಲೀಲಾವತಿಯ ಹೇಳಿಕೆ ಪಡೆಯಲಾಗಿದೆ. ಮುಂದಿನ ಕ್ರಮಕ್ಕೆ ಪೊಲೀಸರು ಮುಂದಾಗಿದ್ದಾರೆ.

ABOUT THE AUTHOR

...view details