ಕರ್ನಾಟಕ

karnataka

ETV Bharat / state

ಚಳಿಗಾಲದ ಅಧಿವೇಶನ ಆರಂಭ: ಅಗಲಿದ ಗಣ್ಯರಿಗೆ ಸಂತಾಪ - Condolences to the elite in Vidhanasabha

ಕೇಂದ್ರ ಸಚಿವ ರಾಮ ವಿಲಾಸ್ ಪಾಸ್ವಾನ್, ಮಾಜಿ ಶಾಸಕರಾದ ಜೆ.ಶ್ರೀನಿವಾಸ ರೆಡ್ಡಿ, ಕೆ.ಮಲ್ಲಪ್ಪ, ಡಾ. ವೈ.ನಾಗಪ್ಪ, ಕೇಂದ್ರದ ಮಾಜಿ ಸಚಿವ ಜಸ್ವಂತ್ ಸಿಂಗ್ ಸೇರಿದಂತೆ ಅಗಲಿದ ಗಣ್ಯರಿಗೆ ಉಭಯ ಸದನಗಳಲ್ಲಿ ಸಂತಾಪ ಸೂಚಿಸಲಾಯಿತು.

ಅಗಲಿದ ಗಣ್ಯರಿಗೆ ಸಂತಾಪ
ಅಗಲಿದ ಗಣ್ಯರಿಗೆ ಸಂತಾಪ

By

Published : Dec 7, 2020, 1:01 PM IST

ಬೆಂಗಳೂರು: ಚಳಿಗಾಲದ ಅಧಿವೇಶನ ಆರಂಭಗೊಂಡಿದ್ದು, ಮೊದಲ ದಿನದ ವಿಧಾನಸಭೆ ಹಾಗೂ ವಿಧಾನ ಪರಿಷತ್ ಕಲಾಪ ಆರಂಭವಾಗಿದೆ.

ಕಲಾಪಗಳ ಆರಂಭದಲ್ಲಿ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಲಾಯಿತು. ಕೇಂದ್ರ ಸಚಿವ ರಾಮ ವಿಲಾಸ್ ಪಾಸ್ವಾನ್, ಮಾಜಿ ಶಾಸಕರಾದ ಜೆ.ಶ್ರೀನಿವಾಸ ರೆಡ್ಡಿ, ಕೆ.ಮಲ್ಲಪ್ಪ, ಡಾ.ವೈ. ನಾಗಪ್ಪ, ಕೇಂದ್ರದ ಮಾಜಿ ಸಚಿವ ಜಸ್ವಂತ್ ಸಿಂಗ್, ಸ್ವಾತಂತ್ರ್ಯ ಹೋರಾಟಗಾರ ಎಂ.ಬಿ. ಶಾಮರಾವ್, ರಂಗಕರ್ಮಿ ಕೊಡಗನೂರು ಜೆ.ಕುಮಾರ್, ಸಂಗೀತ ನಿರ್ದೇಶಕ ರಾಜನ್, ಉತ್ತರ ಕನ್ನಡದ ಡಾ.ವೈಕುಂಟಡರಾವ್ ಶೇಷಗಿರಿರಾವ್, ಕಲಾವಿದ ಅಶ್ವತ್ಥ್, ಪತ್ರಕರ್ತ ಶಾಮಸುಂದರ್, ವಯಲಿನ್ ವಾದಕ ಟಿ.ಎನ್. ಕೃಷ್ಣನ್, ಪತ್ರಕರ್ತ ರವಿ ಬೆಳಗೆರೆ ಅವರಿಗೆ ಸಭೆಯಲ್ಲಿ ಸಂತಾಪ ಸೂಚಿಸಲಾಯಿತು.

ಅಗಲಿದ ಗಣ್ಯರ ಸೇವೆಯನ್ನು ಸ್ಮರಿಸಿ, ಮೌನಾಚರಣೆ ಮಾಡುವ ಮೂಲಕ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಿ ಗೌರವ ಸಲ್ಲಿಸಲಾಯಿತು.

ABOUT THE AUTHOR

...view details