ಕರ್ನಾಟಕ

karnataka

ETV Bharat / state

ಎಸ್​ಪಿಬಿ ನಿಧನಕ್ಕೆ ಚಿತ್ರರಂಗದ ಗಣ್ಯರಿಂದ ಸಂತಾಪ

ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ನಿಧನಕ್ಕೆ ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ.

By

Published : Sep 25, 2020, 3:52 PM IST

Condolences for the death of S PB
ಎಸ್​ಪಿಬಿ ನಿಧನಕ್ಕೆ ಚಿತ್ರರಂಗದ ಗಣ್ಯರಿಂದ ಸಂತಾಪ

ಬೆಂಗಳೂರು: ಗಾನಗಂಧರ್ವ ಎಸ್.ಪಿ.ಬಾಲಸುಬ್ರಹ್ಮಣ್ಯಂ ನಿಧನಕ್ಕೆ ಗಾಯಕಿಯರಾದ ಸಂಗೀತಾ ಕಟ್ಟಿ, ಅರ್ಚನಾ ಉಡುಪ, ಚಿತ್ರ ಸಾಹಿತಿ ಕೆ.ಕಲ್ಯಾಣ್, ಸಂಗೀತ ನಿರ್ದೇಶಕ ವಿ.ಮನೋಹರ್ ಸಂತಾಪ ಸೂಚಿಸಿದ್ದಾರೆ.

ಸಂಗೀತಾ ಕಟ್ಟಿ , ಹಾಡುಗಾರ್ತಿ:ನೂರು ಮಾತು ಸಾಲದು ನಿಮ್ಮನ್ನು ಬಣ್ಣಿಸಲು ಎಸ್​ಪಿಬಿ ಸರ್. ಪಾಸಿಟಿವಿಟಿ ಅವರಲ್ಲಿ ಹೆಚ್ಚಿತ್ತು, ಆಶಾದಾಯಕ ಮನಸ್ಸು. ಆದರೆ, ನೂರು ವರ್ಷ ಬದುಕಬೇಕಿತ್ತು. ಪ್ರತಿಯೊಬ್ಬ ಕಲಾವಿದರಿಗೂ ಸ್ಫೂರ್ತಿ. ಅಮರ ಪ್ರೇಮ ಚಿತ್ರಕ್ಕೆ ಅವರೊಂದಿಗೆ ಒಟ್ಟಿಗೆ ಹಾಡಿದ್ದು ಮೊದಲು. ಹಾಡನ್ನು ಹೇಗೆ ಹಾಡುವುದು ಎಂದು ಕಲಿಸಿಕೊಟ್ಟವರು. ಅವರೊಂದಿಗಿನ ನೆನಪುಗಳೇ ನನಗೆ ಆಸ್ತಿ, ಅವರ ಸಾಧನೆ ಅವರಿಗೆ ಸಾಟಿ.

ಮನೋಹರ್, ಸಂಗೀತ ನಿರ್ದೇಶಕ :ಅಪಮೃತ್ಯು ವರ್ಷ. ಎಸ್​ಪಿಬಿ ಅವರ ಧ್ವನಿ ಇವತ್ತಿಗೂ ಹಾಗೇ ಇತ್ತು. ಇನ್ನೂ ಹತ್ತು ವರ್ಷ ಹಾಡುವ ಧ್ವನಿ ಅವರಿಗಿತ್ತು. ಒಂದೇ ದಿನ ಹತ್ತು, ಹದಿನೈದು ಹಾಡುಗಳನ್ನು ಹಾಡಿದ್ದಾರೆ. ಅವರ ನಿಧನ ತುಂಬಾ ನೋವುಂಟು ಮಾಡಿದೆ.

ಅರ್ಚನಾ ಉಡುಪ , ಹಾಡುಗಾರ್ತಿ :ಮತ್ತೊಮ್ಮೆ ಅವರನ್ನು ನೋಡಲು ಸಾಧ್ಯವಿಲ್ಲ. ಮಾತನಾಡಲು ಸಾಧ್ಯವಿಲ್ಲ. ದೇವರಲ್ಲಿ ನಂಬಿಕೆ ಕಳೆದುಕೊಂಡೆ. ಅವರನ್ನು ಕಳೆದುಕೊಂಡ ದುಃಖ ನನಗೆ ಕಾಡುತ್ತಿದೆ.

ಕೆ.ಕಲ್ಯಾಣ್, ಚಿತ್ರ ಸಾಹಿತಿ :ಜನ ಹಾಡುವುದನ್ನು ನಿಲ್ಲಿಸಿ ಎಂದಾಗ ನಿಲ್ಲಿಸುತ್ತೇನೆ ಎಂದು ಹೇಳುತ್ತಿದ್ದರು. ಆದರೆ, ಹಾಡುಗಳ ಮೂಲಕ ಅಜರಾಮರರು. ನನ್ನಂತಹ ಕೋಟ್ಯಾಂತರ ಜನರ ಮನಸ್ಸಲ್ಲಿ ಚಿರಂಜೀವಿಯಾಗಿರುತ್ತಾರೆ. ಜೀವನ ಪ್ರೀತಿ ಇಟ್ಟುಕೊಂಡವರು, ಎಲ್ಲರನ್ನೂ ಬೆಳೆಸಿ ಬೆಳೆದವರು. ಇವರ ವ್ಯಕ್ತಿತ್ವ, ಇವರ ಧ್ವನಿಯಿಂದಲೇ ಎಷ್ಟೋ ಜನ ಸೂಪರ್ ಸ್ಟಾರ್ ಆಗಿದ್ದಾರೆ. ನಾನು ಬರೆದ ಬಹುತೇಕ ಹಾಡುಗಳನ್ನು ‌ಹಾಡಿದ್ದಾರೆ. ನನ್ನ ಹಾಡುಗಳನ್ನು ಅವರೇ ಹಾಡಬೇಕು ಎಂದು ನನಗೆ ವ್ಯಾಮೋಹವಿತ್ತು.

ರವಿಶಂಕರ್, ಕಲಾವಿದ, ಹಾಡುಗಾರ :ಪವಡಿಸು ಪರಮಾತ್ಮ ದೇವರ ಲೋಕಕ್ಕೆ... ನನ್ನ ಆರಾಧ್ಯ ದೈವವಾದ ನೀವು ಅನ್ನುವುದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ನನ್ನ ಜೀವನಕ್ಕೆ ಅತಿ ದೊಡ್ಡ ಆದರ್ಶ ನೀವು. ಇದೇ ನಾಡು, ಇದೇ ಭಾಷೆ ಎಂದೆಂದು ನಿಮ್ಮದಾಗಿರಲಿ.

ABOUT THE AUTHOR

...view details