ಕರ್ನಾಟಕ

karnataka

ETV Bharat / state

ಸಮಗ್ರ ಕೃಷಿ ಅಭಿಯಾನ ವಾಹನಕ್ಕೆ ಹಸಿರು ನಿಶಾನೆ - Agricultural Employment Fair

ಮಂಡೂರು ಜಿಪಂ ವತಿಯಿಂದ ಬೆಂ.ಪೂರ್ವ ತಾಲೂಕು ಮಟ್ಟದಲ್ಲಿ ಇದೇ ಸೋಮವಾರ ಕೃಷಿ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ. ಸಮಗ್ರ ಕೃಷಿ ಅಭಿಯಾನ ಬಿತ್ತಿ ಚಿತ್ರವುಳ್ಳ ವಾಹನಕ್ಕೆ ಮಂಡೂರು ಜಿಲ್ಲಾ ಪಂಚಾಯ್ತಿ ಸದಸ್ಯ ಡಾ. ಕೆ.ಕೆಂಪರಾಜು ಹಸಿರು ನಿಶಾನೆ ತೋರಿದರು.

ಸಮಗ್ರ ಕೃಷಿ ಅಭಿಯಾನ

By

Published : Aug 25, 2019, 4:45 AM IST

ಬೆಂಗಳೂರು: ಮಂಡೂರು ಜಿಲ್ಲಾ ಪಂಚಾಯಿತಿ ವತಿಯಿಂದ ಬೆಂಗಳೂರು ಪೂರ್ವ ತಾಲೂಕು ಮಟ್ಟದಲ್ಲಿ ಇದೇ ಸೋಮವಾರ ಕೃಷಿ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ. ಸಮಗ್ರ ಕೃಷಿ ಅಭಿಯಾನ ಭಿತ್ತಿ ಚಿತ್ರವುಳ್ಳ ವಾಹನಕ್ಕೆ ಮಂಡೂರು ಜಿಪಂ ಸದಸ್ಯ ಡಾ. ಕೆ.ಕೆಂಪರಾಜು ಹಸಿರು ನಿಶಾನೆ ತೋರಿದರು.

ಸಮಗ್ರ ಕೃಷಿ ಅಭಿಯಾನ

ಬಿದರಹಳ್ಳಿ ಕೃಷಿ ಕೇಂದ್ರದಿಂದ ಹೊರಟ ಈ ವಾಹನ ಬೆಂಗಳೂರು ಪೂರ್ವ ತಾಲೂಕಿನ ಗ್ರಾಮಗಳಲ್ಲಿ 2 ದಿನಗಳ ಪ್ರಚಾರ ಕಾರ್ಯ ನಡೆಸಲಿದೆ. ಕರ್ನಾಟಕ ರಾಜ್ಯದಲ್ಲೆ ಇದೇ ಮೊದಲ ಬಾರಿಗೆ ‘ಬರಡು ಭೂಮಿಯಲ್ಲಿ ಬಂಗಾರ’ ಎಂಬ ಕಾರ್ಯಕ್ರಮ ರೈತರು ಹಾಗೂ ರೈತರ ಮಕ್ಕಳಿಗೆ ಉಪಯೋಗವಾಗಿದೆ. ನೀಲಗಿರಿ ಬೆಳೆಯನ್ನು ನಿಷೇಧಿಸಿರುವುದರಿಂದ ಅದರ ಪರ್ಯಾಯ ಮಾರ್ಗವಾಗಿ ಒಂದಕ್ಕೆ ನಾಲ್ಕರಷ್ಟು ಆದಾಯ ಗಳಿಸುವ ಹೊಸ ಉಪಾಯವನ್ನು ರೂಪಿಸಲಾಗಿದೆ. ರಾಜಕಾಲುವೆ, ಮನೆ ಅಂಗಳದಲ್ಲಿನ ಖಾಲಿ ಜಾಗದಲ್ಲಿ ಉಪಯುಕ್ತ ಶ್ರೀಗಂಧ, ಹಲಸು, ನೇರಳೆ , ಬಿಲ್ವಪತ್ರೆ, ಸಿಲ್ವರ್ ಓಕ್, ಹೆಬ್ಬೆವು, ಸಂಪಿಗೆ, ನುಗ್ಗೆ ಇತ್ಯಾದಿ ಮರಗಳನ್ನು ಬೆಳೆಸುವುದರಿಂದ ಪರಿಸರ ಸಂರಕ್ಷಣೆ ಜೊತೆಗೆ ರೈತರು ಕಾರ್ಖಾನೆಗಳ ಕೆಲಸಕ್ಕೆ ಅವಲಂಬಿತರಾಗದೆ ಮನೆಯಲ್ಲೆ ಇದ್ದು ಕೃಷಿ ಚಟುವಟಿಕೆ ಮೂಲಕ ಹಣ ಗಳಿಸಲು ಇದು ಸಹಕಾರಿಯಾಗಲಿದೆ.

ಸೋಮವಾರ ನಡೆಯುವ ಕೃಷಿ ಉದ್ಯೋಗ ಮೇಳದಲ್ಲಿ ಅರಣ್ಯ ಇಲಾಖೆ, ಕೃಷಿ ಇಲಾಖೆ, ಮೀನುಗಾರಿಕೆ, ಪಶು ಸಂಗೋಪನಾ ಇಲಾಖೆ, ತೋಟಗಾರಿಕೆ, ಆರೋಗ್ಯ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಳು ಭಾಗವಹಿಸಲಿದ್ದು, ಇವುಗಳಿಂದ ದೊರೆಯುವ ಸೌಲಭ್ಯಗಳನ್ನು ಪಡೆಯಬಹುದಾಗಿದೆ ಎಂದು ಜಿಪಂ ಸದಸ್ಯ ಕೆಂಪರಾಜು ತಿಳಿಸಿದ್ದಾರೆ.

ABOUT THE AUTHOR

...view details