ಕರ್ನಾಟಕ

karnataka

ETV Bharat / state

ರಾತ್ರಿ 8 ಗಂಟೆಯಿಂದ ಕಂಪ್ಲೀಟ್ ಲಾಕ್​​​ಡೌನ್​ : ಮುಂಜಾಗ್ರತಾ ಕ್ರಮಕ್ಕೆ ಪೊಲೀಸ್​ ಇಲಾಖೆ ಸಜ್ಜು - Bangalore Corona News

ಇಂದಿನಿಂದ ಜಾರಿಯಾಗುವ ಕಠಿಣ ಲಾಕ್​​​ಡೌನ್ ವೇಳೆ, ‌ಪೊಲೀಸರ ಭದ್ರತೆ ಬಹಳ ಮಹತ್ವ ಪಡೆದುಕೊಂಡಿದೆ. ಹೀಗಾಗಿ ಸಿಬ್ಬಂದಿ ಬಗ್ಗೆ ಡಿಜಿ/ಐಜಿಪಿ ಸೂದ್​​ ಹೆಚ್ಚಿನ‌ ಮಾಹಿತಿ ಪಡೆದುಕೊಂಡಿದ್ದಾರೆ.

ಮುಜಾಂಗ್ರತ ಕ್ರಮಕ್ಕೆ ಪೊಲೀಸ್​ ಇಲಾಖೆ ಸಜ್ಜು
ಮುಜಾಂಗ್ರತ ಕ್ರಮಕ್ಕೆ ಪೊಲೀಸ್​ ಇಲಾಖೆ ಸಜ್ಜು

By

Published : Jul 14, 2020, 9:52 AM IST

ಬೆಂಗಳೂರು : ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳನ್ನ ಇಂದು ರಾತ್ರಿ 8 ಗಂಟೆಯಿಂದ ಕಂಪ್ಲೀಟ್ ಲಾಕ್​​ಡೌನ್ ಮಾಡಲು ನಿರ್ಧಾರ ಮಾಡಲಾಗಿದೆ. ಹೀಗಾಗಿ ಇಂದಿನಿಂದ ಪೊಲೀಸರ ಕೆಲಸಗಳು ಹೆಚ್ಚಾಗಲಿವೆ.

ನಿನ್ನೆ ಸಂಜೆ ನಗರ ಆಯುಕ್ತ ಭಾಸ್ಕರ್ ರಾವ್, ಗ್ರಾಮಾಂತರ ಐಜಿಪಿ, ನಗರದ ಹೆಚ್ಚುವರಿ ಆಯುಕ್ತರುಗಳು, ಡಿಸಿಪಿಗಳ ಜೊತೆ ರಾಜ್ಯ ಪೊಲೀಸ್​ ಮಹಾನಿರ್ದೇಶಕ ಪ್ರವೀಣ್​​​ ಸೂದ್ ಸಭೆ ನಡೆಸಿದರು. ಎಲ್ಲ ಹಿರಿಯ ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಪಡೆದುಕೊಂಡರು. ಈಗಾಗಲೇ ಇಲಾಖೆಯಲ್ಲಿ 560 ಸಿಬ್ಬಂದಿಗೆ ಕೊರೊನಾ ಸೋಂಕು ಪತ್ತೆಯಾಗಿದ್ದು, ಮಹಾ ನಿರ್ದೇಶಕರನ್ನ ನಿದ್ದೆ ಗೆಡಿಸಿದೆ. ಈ ಹಿನ್ನೆಲೆಯಲ್ಲಿ ಭದ್ರತೆ ಕುರಿತಂತೆ ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು.

ಇಂದಿನಿಂದ ಜಾರಿಯಾಗುವ ಕಠಿಣ ಲಾಕ್ ಡೌನ್ ವೇಳೆ, ‌ಪೊಲೀಸರ ಭದ್ರತೆಯೂ ಬಹಳ ಪ್ರಾಮುಖ್ಯವಾಗಿರುತ್ತದೆ. ಹೀಗಾಗಿಯೇ ಐಜಿಪಿ ಸಿಬ್ಬಂದಿಗಳ‌ ಮಾಹಿತಿ ಪಡೆದಿದ್ದಾರೆ. ಇನ್ನು ಪ್ರವೀಣ್ ಸೂದ್ ಅವರಿಗೆ ನಗರ ಆಯುಕ್ತ ಭಾಸ್ಕರ್ ರಾವ್ ಕೂಡ ಪ್ರತ್ಯೇಕವಾದ ವರದಿಯೊಂದನ್ನ ಸಲ್ಲಿಕೆ ಮಾಡಿದ್ದಾರೆ. ‌ಭದ್ರತೆಗೆ ಯಾವುದೇ ತೊಂದರೆಯಾಗಲ್ಲ, ಯಾಕೆಂದರೆ ಕೊರೊನಾದಿಂದ ಗುಣಮುಖರಾಗಿ ಬಹುತೇಕ ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ‌ ಇನ್ನು ಠಾಣೆಯಲ್ಲಿರುವ ಯುವ ಪೊಲೀಸರನ್ನ ಭದ್ರತೆಗೆ ನಿಯೋಜಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಆಯುಕ್ತರು ಪೊಲೀಸ್​ ಮಹಾ ನಿರ್ದೇಶಕರಿಗೆ ವಿವರಿಸಿದ್ದಾರೆ.

ಇಂದು ರಾತ್ರಿಯಿಂದಲೇ ಗಡಿ ಭಾಗ ಬಂದ್ : ಇನ್ನು ಪ್ರವೀಣ್ ಸೂದ್ ಅವರ ಆದೇಶದಂತೆ ಇಂದು ಸಂಜೆಯಿಂದ ನಗರದಲ್ಲಿ ವಾಹನ ಸವಾರರ ಓಡಾಟಕ್ಕೆ ಕಡಿವಾಣ ಬೀಳಲಿದೆ. ‌ರಾತ್ರಿ 8 ಗಂಟೆಯಿಂದ ನಗರದಿಂದ ಹೊರ ಹೋಗುವ ಮೈಸೂರು ರಸ್ತೆ, ತುಮಕೂರು ರಸ್ತೆ, ಕೋಲಾರ ಕನಕಪುರ ರಸ್ತೆ ಎಲ್ಲಾ ಗಡಿ ಭಾಗಗಳಿಗೆ ಬ್ಯಾರಿಕೇಡ್ ಹಾಕಿ ಭದ್ರತೆ ನಿಯೋಜನೆ ಮಾಡಲಾಗಿದೆ. ಹಾಗೆ 144 ಸೆಕ್ಷನ್ ಕೂಡ ಜಾರಿಯಲ್ಲಿರುತ್ತದೆ.

ABOUT THE AUTHOR

...view details