ಕರ್ನಾಟಕ

karnataka

ETV Bharat / state

ಡಿಸೆಂಬರ್ ಅಂತ್ಯದ ವೇಳೆಗೆ ಎಲ್ಲ ಕಾಮಗಾರಿ ಪೂರ್ಣಗೊಳಿಸಿ : ಬಿಬಿಎಂಪಿ ಆಯುಕ್ತ - ಕುಂದಲಹಳ್ಳಿ ಕೆಳಸೇತುವೆ ಕಾಮಗಾರಿ

ಹಲವು ಸಮಯದಿಂದ ಕುಂದಲಹಳ್ಳಿ ಕೆಳಸೇತುವೆ ಕಾಮಗಾರಿ ನೆನೆಗುದಿಗೆ ಬಿದ್ದಿದ್ದು, ಮುಂದಿನ ನಾಲ್ಕು ತಿಂಗಳಲ್ಲಿ ಪೂರ್ಣಗೊಳಿಸುವಂತೆ ಆಯುಕ್ತರು ಸೂಚನೆ ನೀಡಿದರು‌.

complete-all-work-by-the-end-of-december-bbmp-commissioner
ಬಿಬಿಎಂಪಿ ಆಯುಕ್ತ

By

Published : Oct 9, 2020, 3:24 AM IST

ಬೆಂಗಳೂರು:ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಕುಂದಲಹಳ್ಳಿ ಕೆಳಸೇತುವೆ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.‌

ಜಂಟಿ ಆಯುಕ್ತ ವೆಂಕಟಾಚಲಪತಿ, ಮುಖ್ಯ ಎಂಜಿನಿಯರ್ ರಮೇಶ್, ಹಾಗೂ ಪಾಲಿಕೆ ಅಧಿಕಾರಿಗಳು ಈ ಸಂದರ್ಭದಲ್ಲಿದ್ದರು. ಹಲವು ಸಮಯದಿಂದ ಈ ಕಾಮಗಾರಿ ನೆನೆಗುದಿಗೆ ಬಿದ್ದಿದ್ದು, ಮುಂದಿನ ನಾಲ್ಕು ತಿಂಗಳಲ್ಲಿ ಪೂರ್ಣಗೊಳಿಸುವಂತೆ ಆಯುಕ್ತರು ಸೂಚನೆ ನೀಡಿದರು‌.

ಕಾಮಗಾರಿ

ಸರ್ವಿಸ್ ರಸ್ತೆಯನ್ನು ಅಗಲೀಕರಣ ಮಾಡಲು, 36,000 ಚದರ ಅಡಿ ಜಾಗದ ಅಗತ್ಯವಿದ್ದು, ಈ ಭೂಮಿಯ 24 ಜನ ಮಾಲೀಕರಿಗೆ 42.5 ಕೋಟಿ ರೂ ಮುಂದಿನ ವಾರವೇ ಪಾವತಿಸಲು ಅಧಿಕಾರಿಗಳಿಗೆ ಸೂಚಿಸಿದರು. ಈಗಾಗಲೇ ತಡೆಗೋಡೆ ನಿರ್ಮಾಣ ಕಾರ್ಯ ಮುಗಿದಿದೆ. ಡಿಸೆಂಬರ್ ಅಂತ್ಯದ ವೇಳೆ ಎಲ್ಲಾ ಕಾಮಗಾರಿ ಪೂರ್ಣಗೊಳಿಸಿ ಆಯುಕ್ತರು ಸೂಚನೆ ನೀಡಿದರು.

ABOUT THE AUTHOR

...view details