ಕರ್ನಾಟಕ

karnataka

ETV Bharat / state

ಪಕ್ಷೇತರ ಶಾಸಕ ಆರ್. ಶಂಕರ್ ವಿರುದ್ಧ ಸ್ಪೀಕರ್​ಗೆ ಕೆಪಿಜೆಪಿ ಪಕ್ಷದ ಸಂಸ್ಥಾಪಕ ಮಹೇಶ್ ಗೌಡ ದೂರು - ಪಕ್ಷ ವಿಲೀನ

ಪಕ್ಷದ ನಿಯಮ ಉಲ್ಲಂಘಿಸಿ ಕಾಂಗ್ರೆಸ್​ ಜೊತೆ ಪಕ್ಷ ವಿಲೀನಕ್ಕೆ ಮುಂದಾಗಿರುವ ರಾಣಿಬೆನ್ನೂರು ಪಕ್ಷೇತರ ಶಾಸಕ ಆರ್​. ಶಂಕರ್ ವಿರುದ್ಧ ಕೆಪಿಜೆಪಿ ಪಕ್ಷದ ಸಂಸ್ಥಾಪಕ ಮಹೇಶ್ ಗೌಡ ಸ್ಪೀಕರ್​ಗೆ ದೂರು ನೀಡಿದ್ದಾರೆ.

ಶಾಸಕ ಆರ್​. ಶಂಕರ್

By

Published : Jul 16, 2019, 7:10 PM IST

Updated : Jul 16, 2019, 11:46 PM IST

ಬೆಂಗಳೂರು: ರಾಣೇಬೆನ್ನೂರು ಪಕ್ಷೇತರ ಶಾಸಕ ಆರ್​. ಶಂಕರ್ ವಿರುದ್ಧ ಸ್ಪೀಕರ್​ಗೆ ದೂರು ನೀಡಲಾಗಿದೆ. ಪಕ್ಷದ ನಿಯಮ ಉಲ್ಲಂಘಿಸಿದ್ದರ ವಿರುದ್ಧ ಕೆಪಿಜೆಪಿ ಪಕ್ಷದ ಸಂಸ್ಥಾಪಕ ಮಹೇಶ್ ಗೌಡ ಸ್ಪೀಕರ್ ಕಚೇರಿಯಲ್ಲಿ ದೂರು ದಾಖಲಿಸಿದ್ದಾರೆ.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಮಹೇಶ್ ಗೌಡ, ಪಕ್ಷದ ಗಮನಕ್ಕೆ ತರದೇ ಆರ್​. ಶಂಕರ್ ಕಾಂಗ್ರೆಸ್ ಜತೆ ಪಕ್ಷ ವಿಲೀನ ಮಾಡಿದ್ದಾರೆ. ವಿಲೀನ ಕುರಿತಂತೆ ಶಂಕರ್​ ಸ್ಪೀಕರ್​ಗೆ ಪತ್ರ ಬರೆದಿರೋದು ಸರಿಯಲ್ಲ. ಇದನ್ನು ಮಾನ್ಯ ಮಾಡಬಾರದೆಂದು ಸ್ಪೀಕರ್ ಕಚೇರಿಗೆ ದೂರು ನೀಡಲಾಗಿದೆ ಎಂದು ಹೇಳಿದರು.

ನಿಯಮ ಪ್ರಕಾರ ಪಕ್ಷ ವಿಲೀನ ಮಾಡಬೇಕಾದರೆ ಮೊದಲು ಜಿಲ್ಲಾ ಮತ್ತು ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಚರ್ಚಿಸಬೇಕು. ಆದರೆ, ಆರ್. ಶಂಕರ್ ಯಾವುದೇ ಚರ್ಚೆ ನಡೆಸದೇ ವಿಲೀನ ಮಾಡಲು ಮುಂದಾಗಿರೋದು ಸರಿಯಲ್ಲ. ಹಾಗಾಗಿ, ವಿಲೀನದ ಬಗ್ಗೆ ಶಂಕರ್ ಅವರು ಕೊಟ್ಟಿರುವ ಪತ್ರವನ್ನು ಮಾನ್ಯ ಮಾಡಬಾರದು ಎಂದು ಸ್ಪೀಕರ್ ಅವರಿಗೆ ದೂರು ನೀಡಲಾಗಿದೆ ಎಂದು ತಿಳಿಸಿದರು.

ಪಕ್ಷೇತರ ಶಾಸಕ ಆರ್​. ಶಂಕರ್ ವಿರುದ್ಧ ಸ್ಪೀಕರ್​ಗೆ ದೂರು

ಶಂಕರ್ ಬಾಹ್ಯ ಬೆಂಬಲ ನೀಡಿರೋದು ಅವರ ವೈಯುಕ್ತಿಕ ವಿಚಾರ. ವಿಲೀನ ಕುರಿತಂತೆ ಪಕ್ಷ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಯಾವ ಪಕ್ಷಕ್ಕೆ ಬೆಂಬಲ ನೀಡಬೇಕು ಎನ್ನುವ ಬಗ್ಗೆ ಇನ್ನೂ ಚರ್ಚೆ ನಡೆದಿಲ್ಲ. ನಾಳೆ ಸಂಜೆ ರಾಜ್ಯ ಕಾರ್ಯಕಾರಿಣಿ ಸಭೆ ನಡೆಸಲಾಗುವುದು. ಆ ಸಭೆಯಲ್ಲಿ ಯಾವ ಪಕ್ಷಕ್ಕೆ ಬೆಂಬಲ ನೀಡಬೇಕು ಎಂಬ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮಹೇಶ್​ ಗೌಡ ಈ ವೇಳೆ ತಿಳಿಸಿದರು. ಕೆಪಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಇರ್ಷಾದ್ ಮತ್ತಿತರರು ಈ ವೇಳೆ ಉಪಸ್ಥಿತರಿದ್ದರು.

Last Updated : Jul 16, 2019, 11:46 PM IST

ABOUT THE AUTHOR

...view details