ಬೆಂಗಳೂರು: ಮನೆಗೆಲಸ ಮಾಡುತ್ತಿದ್ದ 15 ವರ್ಷದ ಬಾಲಕಿಯನ್ನು ಗೃಹ ಬಂಧನದಲ್ಲಿರಿಸಿ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿದ ಆರೋಪದಡಿ ಟೆಕ್ಕಿ ದಂಪತಿ ವಿರುದ್ಧ ಮಹದೇವಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪೋಷಕರ ಸಮ್ಮುಖದಲ್ಲಿ ಬಾಲಕಿ ನೀಡಿದ ದೂರಿನ ಮೇರೆಗೆ ಅಮಿತ್ ಸಿಂಗ್, ಪತ್ನಿ ಸಂಜು ಸಿಂಗ್ ಎಂಬುವರ ವಿರುದ್ಧ ಬಾಲಕಾರ್ಮಿಕ ನಿಷೇಧ ಕಾಯ್ದೆ ಹಾಗೂ ಬಾಲ ನ್ಯಾಯ ಕಾಯ್ದೆಯಡಿ ಪೊಲೀಸರು ಕೇಸು ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಉತ್ತರ ಭಾರತ ಮೂಲದ ಬಾಲಕಿಯ ಕುಟುಂಬ ನಗರದಲ್ಲಿ ವಾಸವಾಗಿತ್ತು. ಯುವತಿ 6ನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು. ಕೊರೊನಾ ಬಿಕ್ಕಟ್ಟಿನಿಂದ ಶಾಲೆ ಆರಂಭವಾಗದ ಹಿನ್ನೆಲೆಯಲ್ಲಿ ಪೋಷಕರ ಸೂಚನೆ ಮೇರೆಗೆ ಮಹದೇವಪುರದ ಅನುಗ್ರಹ ಅಪಾರ್ಟ್ಮೆಂಟ್ನ ಅಮಿತ್ ಸಿಂಗ್ ಎಂಬುವರ ಮನೆಯಲ್ಲಿ ಹಲವು ತಿಂಗಳಿಂದ ಬಾಲಕಿ ಮನೆಗೆಲಸ ಮಾಡುತ್ತಿದ್ದಳು.