ಕರ್ನಾಟಕ

karnataka

ETV Bharat / state

ರಿಪೇರಿಗೆ ಬಿಟ್ಟ ಮಾಜಿ ಮೇಯರ್​ ಕಾರಿನಲ್ಲಿ ಸಿಬ್ಬಂದಿಯಿಂದ ಜಾಲಿರೈಡ್​: ಷೋರೂಂ ವಿರುದ್ಧ ದೂರು

ಮಾಜಿ ಮೇಯರ್ ಹಾಗೂ ಕಾಂಗ್ರೆಸ್ ಪಕ್ಷದ ಎಂಎಲ್​ಸಿ ಆಗಿದ್ದ ಪಿ. ಆರ್ ರಮೇಶ್​ ಅವರ ಪತ್ನಿ ಸರಸ್ವತಿ ತಮ್ಮ ಇನ್ನೋವಾ ಕಾರನ್ನು ರಿಪೇರಿಗೆ ಎಂದು ಸೆಪ್ಟೆಂಬರ್​ 7 ರಂದು ಬೆಂಗಳೂರಿನ ರಾಜಾಜಿನಗರದ ರವೀಂದು ಟೋಯೋಟ ಸರ್ವಿಸ್ ಸೆಂಟರ್​ನಲ್ಲಿ ಬಿಟ್ಟಿದ್ದರು.

ಶೋರೂಂ ವಿರುದ್ಧ  ಎಫ್.ಐ.ಆರ್ ದಾಖಲು
ಶೋರೂಂ ವಿರುದ್ಧ ಎಫ್.ಐ.ಆರ್ ದಾಖಲು

By

Published : Sep 17, 2021, 4:02 AM IST

ಬೆಂಗಳೂರು: ಸರ್ವೀಸ್​ಗೆಂದು ಬಿಟ್ಟಿದ್ದ ಮಾಜಿ ಮೇಯರ್ ಪಿ. ಆರ್ ರಮೇಶ್ ಕಾರಿನಲ್ಲಿ ಸಿಬ್ಬಂದಿ ದುರ್ಬಳಕೆ ಮಾಡಿಕೊಂಡು ಊರಿಂದೂರಿಗೆ ಜಾಲಿ ರೈಡ್ ಮಾಡಿದ್ದು. ತಮ್ಮ ಕಾರುನ್ನು ದುರ್ಬಳಕೆ ಮಾಡಿಕೊಂಡ ಶೋರೂಂ ವಿರುದ್ಧ ರಮೇಶ್​​ ದೂರು ನೀಡಿದ್ದಾರೆ.

ಮಾಜಿ ಮೇಯರ್ ಹಾಗೂ ಕಾಂಗ್ರೆಸ್ ಪಕ್ಷದ ಎಂಎಲ್​ಸಿಯಾಗಿದ್ದ ರಮೇಶ್​ ಅವರ ಪತ್ನಿ ಸರಸ್ವತಿ ತಮ್ಮ ಇನ್ನೋವಾ ಕಾರನ್ನು ರಿಪೇರಿಗೆ ಎಂದು ಸೆಪ್ಟೆಂಬರ್​ 7 ರಂದು ಬೆಂಗಳೂರಿನ ರಾಜಾಜಿನಗರದ ರವೀಂದು ಟೋಯೋಟ ಸರ್ವಿಸ್ ಸೆಂಟರ್​ನಲ್ಲಿ ಬಿಟ್ಟಿದ್ದರು.

ಆದರೆ ಸೆಪ್ಟೆಂಬರ್​ 11 ರಂದು ಮಧ್ಯರಾತ್ರಿ ಕಾರು ಚಿತ್ರದುರ್ಗ ಟೋಲ್​ಗಳನ್ನು ದಾಟಿ 200 ಕಿಲೋಮೀಟರ್ ದೂರಕ್ಕೆ ಹೋಗಿದೆ. ರಿಪೇರಿಗೆ ಬಿಟ್ಟಿದ್ದ ಕಾರಿನಲ್ಲಿ ರಾಜಧಾನಿ ಬಿಟ್ಟು ತೆರಳಿರುವುದು ತಿಳಿದು ಬಂದಿದೆ.

ಮಾಜಿ ಮೇಯರ್​ ರಮೇಶ್ ನೀಡಿರುವ ದೂರು

ಟೋಲ್​ಗಳಲ್ಲಿ ಕಾರು ಪಾಸ್ ಆಗಿ ಫಾಸ್ಟ್​ಟ್ಯಾಗ್ ಮೂಲಕ ಹಣ ಕಡಿತವಾಗಿದೆ. ರಿಪೇರಿಗೆ ಬಿಟ್ಟಿದ್ದ ಕಾರು ಟೋಲ್​ಗಳನ್ನು ದಾಟಿದ ಮೆಸೇಜ್​ ಮಾಲೀಕರಿಗೆ ಬಂದಿತ್ತು. ಫಾಸ್ಟ್​ ಟ್ಯಾಗ್​ನಲ್ಲಿ ಹಣ ಏಕಾಏಕಿ ಹಣ ಕಡಿತವಾಗಿದ್ದು ನೋಡಿ ಗಾಬರಿಯಾಗಿದ್ದ ರಮೇಶ್ ದಂಪತಿ ಷೋ ರೂಂಗೆ ಹೋಗಿ ವಿಚಾರಿಸಿದ್ದಾರೆ.

ಆದರೆ ಅಲ್ಲಿ ಸಮಂಜಸ ಉತ್ತರ ಬಾರದಿದ್ದಾಗ. ಕಾರಿನ ದುರ್ಬಳಕೆ, ನಂಬಿಕೆ ದ್ರೋಹ ಹಾಗೂ ವಂಚನೆಯಡಿ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ನಗರದ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಐಪಿಸಿ 406, 420 ಅಡಿ ಎಫ್.ಐ.ಆರ್ ದಾಖಲಾಗಿದ್ದು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಇದನ್ನು ಓದಿ:ಡೇಟಿಂಗ್ ವೆಬ್‌ಸೈಟ್​ನಲ್ಲಿ ಕಾಲ್‌ಗರ್ಲ್​​ಗೆ ಕರೆ ಮಾಡಿ 19 ಸಾವಿರ ರೂ. ಕಳೆದುಕೊಂಡ ಚಾಲಕ

ABOUT THE AUTHOR

...view details