ಬೆಂಗಳೂರು: ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ವಿರುದ್ಧ ದಾಖಲಾಗಿದ್ದ ದೂರಿನ ಸಂಬಂಧ ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಬಿ ರಿಪೋರ್ಟ್ ಹಾಕುವಂತೆ ಒತ್ತಡ ಹೇರಿದ್ದಾರೆ ಎಂದು ಆರೋಪಿಸಿ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ವಿರುದ್ದ ದೂರು ದಾಖಲಾಗಿದೆ.
ಈ ಸಂಬಂಧ ಸಿಎಂ, ಗೃಹ ಸಚಿವರು, ಡಿಜಿ ಐಜಿಪಿ ಪ್ರವೀಣ್ ಸೂದ್, ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹಾಗೂ ಶಿವಮೊಗ್ಗ ಎಸ್ಪಿ ಅವರಿಗೆ ವಕೀಲರೊಬ್ಬರು ದೂರು ನೀಡಿದ್ದಾರೆ.
ಪ್ರಧಾನಿ ಅವರು ಪಿಎಂ ಕೇರ್ಸ್ ಫಂಡ್ ದುರ್ಬಳಕೆ ಮಾಡಿದ್ದಾರೆ ಹಾಗೂ ವಂಚನೆ ಮಾಡಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಟ್ವೀಟರ್ನಲ್ಲಿ ಈ ಮಾಹಿತಿ ಹರಿದಾಡಿತ್ತು. ಈ ಹಿನ್ನೆಲೆ ಪ್ರಧಾನಿಯನ್ನು ಅವಹೇಳ ಮಾಡಲಾಗಿದೆ ಎಂದು ಶಿವಮೊಗ್ಗ ಸಾಗರ ಪೊಲೀಸ್ ಠಾಣೆಯಲ್ಲಿ ಸೋನಿಯಾ ಗಾಂಧಿ ವಿರುದ್ದ ದೂರು ದಾಖಲು ಮಾಡಲಾಗಿತ್ತು. ಇದರ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಬಿ ರಿಪೋರ್ಟ್ ಹಾಕುವಂತೆ ಡಿಕೆಶಿ ಒತ್ತಡ ಹೇರಿದ್ದಾರೆ ಎನ್ನಲಾಗಿದೆ.
ಪೊಲೀಸರನ್ನ ತನಿಖೆ ನಡೆಸಲು ಬಿಡಬೇಕು, ಹೀಗೆ ಮಾಡಿದರೆ ಕಾನೂನಿನ ಮೇಲಿನ ಗೌರವ ಹಾಳಾಗುತ್ತದೆ. ಡಿಕಿಶಿ ವಿರುದ್ದ ಕ್ರಮ ಕೈಗೊಳ್ಳಿ ಎಂದು ವಕೀಲರಾದ ಯೋಗೇಂದ್ರ ಹೊಡಘಟ್ಟ, ಹಾಗೂ ನರೇಂದ್ರ ಪಿ.ಆರ್ ದೂರು ನೀಡಿದ್ದಾರೆ.