ಕರ್ನಾಟಕ

karnataka

ETV Bharat / state

ಸ್ನೇಹಿತನಿಗೆ ಹಣ ವಂಚನೆ ಆರೋಪ: ಮುತ್ತಪ್ಪ ರೈ ವಿರುದ್ಧ ಸಿಸಿಬಿಯಲ್ಲಿ ದೂರು - ಬೆಂಗಳೂರು ಸುದ್ದಿ

ಹಣ ವಂಚನೆ ಮಾಡಿರುವುದಾಗಿ ಆರೋಪಿಸಿ ಜಯ ಕರ್ನಾಟಕ ಸಂಘಟನೆ‌ ಸಂಸ್ಥಾಪಕ‌ ಮುತ್ತಪ್ಪ ರೈ ವಿರುದ್ಧ ರಾಕೇಶ್ ಮಲ್ಲಿ ಎಂಬುವವರು ಸಿಸಿಬಿಗೆ ದೂರು ನೀಡಿದ್ದಾರೆ.

complaint-against-muthappa-rai-at-ccb
ವcomplaint-against-muthappa-rai-at-ccb

By

Published : Feb 27, 2020, 4:21 PM IST

ಬೆಂಗಳೂರು: ಹಣ ವಂಚನೆ ಮಾಡಿರುವುದಾಗಿ ಆರೋಪಿಸಿ ಜಯ ಕರ್ನಾಟಕ ಸಂಘಟನೆ‌ ಸಂಸ್ಥಾಪಕ‌ ಮುತ್ತಪ್ಪ ರೈ ವಿರುದ್ಧ ರಾಕೇಶ್ ಮಲ್ಲಿ ಎಂಬುವರು ಸಿಸಿಬಿಗೆ ದೂರು ನೀಡಿದ್ದಾರೆ.

ಕಾಂಗ್ರೆಸ್ ಲೇಬರ್ ಯೂನಿಯನ್ ಮಾಜಿ ಅಧ್ಯಕ್ಷರಾಗಿರುವ ರಾಕೇಶ್ ಮಲ್ಲಿ ಅವರು ಮುತ್ತಪ್ಪ ರೈ ಅವರೊಂದಿಗೆ ಹಲವು ವರ್ಷಗಳಿಂದ‌ ನಂಟು ಹೊಂದಿದ್ದರು. ಕಳೆದ ಹತ್ತು ವರ್ಷಗಳ ಹಿಂದೆ ಬಂಟ್ವಾಳದಲ್ಲಿ‌ ಇಬ್ಬರು ಜೊತೆಗೂಡಿ 17.5 ಎಕರೆ ಜಮೀನು ಖರೀದಿಸಿ ನಿವೇಶನಗಳಾಗಿ ಪರಿವರ್ತಿಸಿದ್ದರು. 180 ಸೈಟುಗಳ ಪೈಕಿ ಸುಮಾರು 70 ನಿವೇಶನ ಮಾರಾಟವಾಗಿದೆ. ಹೀಗಿದ್ದರೂ ಇದುವರೆಗೂ ನನಗೆ ಮುತ್ತಪ್ಪ ರೈ ಅವರು ಹಣ ಕೊಟ್ಟಿಲ್ಲ ಎಂದು ಮಲ್ಲಿ ಆರೋಪಿಸಿದ್ದಾರೆ.

ಹಣದ ವಿಚಾರಕ್ಕಾಗಿ ಪ್ರಶ್ನಿಸಿದರೆ ಮುತ್ತಪ್ಪ ರೈ ಬೆಂಬಲಿಗರು ಮತ್ತು ಸಂಬಂಧಿಕರಿಂದ ಜೀವ ಬೆದರಿಕೆ ಹಾಕಿದ್ದಾರೆ. ಹೀಗಾಗಿ ನನಗೆ ನ್ಯಾಯ ಕೊಡಿಸುವಂತೆ ಸಿಸಿಬಿ ಅಧಿಕಾರಿಗಳಿಗೆ ದೂರು ನೀಡಿದ್ದೇನೆ ಎಂದು ಹೇಳಿದರು. ಸದ್ಯ‌‌ ಮುತ್ತಪ್ಪ ರೈ ಅನಾರೋಗ್ಯದಿಂದ ಬಳಲುತ್ತಿದ್ದು. ತಮ್ಮ ಹೆಸರಿನಲ್ಲಿರುವ ಆಸ್ತಿಯನ್ನು ತಮ್ಮ‌ ಕುಟುಂಬ ಸದಸ್ಯರಿಗೆ ವಿಲ್ ಮಾಡಿಸಿದ್ದಾರೆ.

ABOUT THE AUTHOR

...view details