ಬೆಂಗಳೂರು:ಹಿಂದೂ ದೇವತೆಗಳ ವಿರುದ್ಧ ಅವಹೇಳನಕಾರಿ ಬರವಣಿಗೆಯನ್ನು ವಾಟ್ಸ್ಆ್ಯಪ್‌ನಲ್ಲಿ ಹರಿಬಿಟ್ಟಿರುವ ಶಾಸಕ ಮುರುಗೇಶ್ ನಿರಾಣಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಸಾಮಾಜಿಕ ಕಾರ್ಯಕರ್ತರೊಬ್ಬರು ಡಿಜಿಪಿಗೆ ದೂರು ಕೊಟ್ಟಿದ್ದಾರೆ.
ಹಿಂದೂ ದೇವತೆಗಳ ವಿರುದ್ಧ ಅವಹೇಳನಕಾರಿ ಪೋಸ್ಟ್ : ಮುರುಗೇಶ್ ನಿರಾಣಿ ವಿರುದ್ಧ ಡಿಜಿಪಿಗೆ ದೂರು - Mla Murugesh Nirani whats app post
ಶಾಸಕ ಮುರುಗೇಶ್ ನಿರಾಣಿ ಅವರು ಜು.21ರಂದು ವಾಟ್ಸ್ಆ್ಯಪ್ ಗ್ರೂಪ್ನಲ್ಲಿ, ಹಿಂದೂ ದೇವರ ಕುರಿತು ಅವಹೇಳನಕಾರಿ, ನಿಂದನೆಯ ಪೋಸ್ಟ್‌ನ್ನು ಫಾರ್ವರ್ಡ್ ಮಾಡಿದ್ದರು, ಈ ಕುರಿತು ಡಿಜಿಪಿಗೆ ದೂರು ನೀಡಲಾಗಿದೆ.
ಮುರುಗೇಶ್ ನಿರಾಣಿ
ಶಾಸಕ ಮುರುಗೇಶ್ ನಿರಾಣಿ ಅವರು ಜು.21ರಂದು ವಾಟ್ಸ್ಆ್ಯಪ್ ಗ್ರೂಪ್ನಲ್ಲಿ, ಹಿಂದೂ ಧರ್ಮದ ಆರಾಧ್ಯ ದೇವತೆಗಳಾದ ರಾಮ, ಕೃಷ್ಣ ಸೇರಿ ಮುಂತಾದ ದೇವರ ಕುರಿತು ಅವಹೇಳನಕಾರಿ , ನಿಂದನೆಯ ಪೋಸ್ಟ್ ಫಾರ್ವರ್ಡ್ ಮಾಡಿದ್ದರು. ಇದರಿಂದ ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಕೆಲಸವಾಗಿದೆ. ಈ ಕುರಿತು ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸಾಮಾಜಿಕ ಕಾರ್ಯಕರ್ತ ಕಾಮಾಕ್ಷಿಪಾಳ್ಯ ನಿವಾಸಿ ಹನುಮೇಗೌಡ ಎಂಬುವರು ದೂರು ನೀಡಿದ್ದಾರೆ.