ಬೆಂಗಳೂರು:ಲೋಕಾಯುಕ್ತದಲ್ಲಿ ನನ್ನ ವಿರುದ್ಧ ದೂರುದಾಖಲಾಗಿರುವ ವಿಚಾರ ಬಹಳ ಸಂತೋಷ. ಈ ಮೂಲಕವಾದ್ರೂ ರಾಜ್ಯದ ಜನತೆಗೆ ಸತ್ಯ ಗೊತ್ತಾಗಲಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಹೇಳಿದ್ದಾರೆ.
ಮಾಜಿ ಶಾಸಕ ಸಾರ್ವಭೌಮ ಬಗಲಿ ಲೋಕಾಯುಕ್ತದಲ್ಲಿ ವೈದ್ಯಕೀಯ ಉಪಕರಣಗಳ ಖರೀದಿ ಅವ್ಯವಹಾರ ಆರೋಪ ಸಂಬಂಧ ಲೋಕಯುಕ್ತಕ್ಕೆ ದೂರು ನೀಡಿರುವುದಕ್ಕೆ ಸದಾಶಿವ ನಗರ ನಿವಾಸದಲ್ಲಿ ಪ್ರತಿಕ್ರಿಯೆ ನೀಡಿದ ಸಚಿವರು, ಉಪಕರಣಗಳ ಖರೀದಿಯಲ್ಲಿ ಅವ್ಯವಹಾರ ಆಗಿಲ್. ವೈದ್ಯಕೀಯ ಇಲಾಖೆ ಯಾವುದೇ ಉಪಕರಣ ಖರದಿ ಮಾಡಿಲ್ಲ. ಟಾಸ್ಕ್‌ಫೋರ್ಸ್ ಸಮಿತಿಯಲ್ಲಿ ನಿರ್ಧರಿಸಿಯೇ ಉಪಕರಣಗಳ ಖರೀದಿ ಮಾಡಿದೆ ಎಂದರು.