ಕರ್ನಾಟಕ

karnataka

ETV Bharat / state

ಪತಿಗೆ ಮಗನ ಭೇಟಿ ನಿರಾಕರಣೆ; ಐಪಿಎಸ್ ವರ್ತಿಕಾ ವಿರುದ್ಧ ಡಿಜಿಪಿಗೆ‌‌‌ ದೂರು - ರಾಷ್ಟ್ರೀಯ ಮಕ್ಕಳ ರಕ್ಷಣಾ ಅಯೋಗ

ಐಪಿಎಸ್ ಅಧಿಕಾರಿ ವರ್ತಿಕಾ ಕಟಿಯಾರ್ ವಿರುದ್ಧ ರಾಷ್ಟ್ರೀಯ ಮಕ್ಕಳ ರಕ್ಷಣಾ ಅಯೋಗ ಡಿಜಿ-ಐಜಿಪಿ ಪ್ರವೀಣ್ ಸೂದ್​ಗೆ ದೂರು ನೀಡಿದ್ದು, ತನ್ನ ಗಂಡನಿಗೆ ಮಗು ನೋಡಲು ಬಿಡದೆ ಕಾನೂನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಲಾಗಿದೆ.

ips-officer
ips-officer

By

Published : Jun 3, 2021, 3:14 PM IST

ಬೆಂಗಳೂರು:ಅಧಿಕಾರ ಬಳಸಿ ತನ್ನ ಗಂಡನಿಗೆ ಮಗು ನೋಡಲು ಬಿಡದೆ ಕಾನೂನು ಉಲ್ಲಂಘಿಸಿರುವ ಐಪಿಎಸ್ ಅಧಿಕಾರಿ ವರ್ತಿಕಾ ಕಟಿಯಾರ್ ವಿರುದ್ಧ ರಾಷ್ಟ್ರೀಯ ಮಕ್ಕಳ ರಕ್ಷಣಾ ಅಯೋಗ ಡಿಜಿ-ಐಜಿಪಿ ಪ್ರವೀಣ್ ಸೂದ್​ಗೆ ದೂರು ನೀಡಿದೆ.

ತನ್ನ ಅಧಿಕಾರ ಹಾಗೂ ಪ್ರಭಾವ ಬೆಳೆಸಿಕೊಂಡು ಮಗನನ್ನು ನೋಡಲು ಬಿಡುತ್ತಿಲ್ಲ ಎಂದು ದೂರಿ ಭಾರತೀಯ ವಿದೇಶಾಂಗ ಇಲಾಖೆ (ಐಎಫ್ಎಸ್) ಅಧಿಕಾರಿ ನಿತೀನ್ ಶುಭಾಶ್ ಎಂಬುವರು ರಾಷ್ಟ್ರೀಯ ಮಕ್ಕಳ ರಕ್ಷಣಾ ಆಯೋಗ‌ದ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ ಆಯೋಗ, ಐಪಿಎಸ್ ಅಧಿಕಾರಿ ವರ್ತಿಕಾ ಕಟಿಯಾರ್ ವಿರುದ್ಧ ಕ್ರಮ ಜರುಗಿಸುವಂತೆ ಪ್ರವೀಣ್ ಸೂದ್​ಗೆ ದೂರು ನೀಡಿದೆ

ಕಳೆದ‌ ಫೆಬ್ರವರಿಯಲ್ಲಿ ವರ್ತಿಕಾ ಕಟಿಯಾರ್, ತಮ್ಮ ಪತಿ ನಿತೀನ್ ಸುಭಾಶ್ ಹಾಗೂ ಅವರ ಕುಟುಂಬಸ್ಥರು ಸೇರಿದಂತೆ ಒಟ್ಟು ಏಳು ಮಂದಿ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ದೂರು ನೀಡಿದ್ದರು.

ತನ್ನ ಪತಿ ಕುಡಿಯುವ‌‌ ಮತ್ತು ಧೂಮಪಾನ ಮಾಡುವ ಅತಿಯಾದ ಚಟ ಬೆಳೆಸಿಕೊಂಡಿದ್ದ. ಇದನ್ನು ತ್ಯಜಿಸುವಂತೆ ಹಲವು ಬಾರಿ ಹೇಳಿದಾಗಲೂ ಜಗಳ ಮಾಡಿ ಹಲ್ಲೆ ಮಾಡಿದ್ದರು. 2016ರಲ್ಲಿ ಇದೇ ವಿಚಾರಕ್ಕೆ ಹಲ್ಲೆ ಮಾಡಿದಾಗ ಕೈ ಮುರಿದು ಹೋಗಿತ್ತು. ದೀಪಾವಳಿಗೆ ಉಡುಗೊರೆ ನೀಡಲಿಲ್ಲ ಎಂದು ವಿಚ್ಚೇದನ ನೀಡುವುದಾಗಿ ಬೆದರಿಕೆ ಹಾಕಿದ್ದರು. ಮದುವೆಯ ಸಂದರ್ಭದಲ್ಲಿ ಚಿನ್ನಾಭರಣ ಪಡೆದುಕೊಂಡಿದ್ದರು. ಅಲ್ಲದೇ ಹಣಕ್ಕಾಗಿ ಪದೇ ಪದೆ ಪೀಡಿಸುತ್ತಿರುವುದಾಗಿ ಆರೋಪಿಸಿದ್ದರು.

ತನ್ನ ಅಜ್ಜಿಯ ಬಳಿ ಪತಿ ಐದು ಲಕ್ಷದ ಚೆಕ್ ಪಡೆದಿದ್ದರು. ಅಲ್ಲದೇ ಮನೆ ಮಾಡುವಾಗ 35 ಲಕ್ಷ ಹಣ ಪಡೆದಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದರು. ಈ ಸಂಬಂಧ ವರದಕ್ಷಿಣೆ, ಹಲ್ಲೆ, ಜೀವ ಬೆದರಿಕೆ ಆರೋಪದಡಿ ಕಬ್ಬನ್ ಪಾರ್ಕ್ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದರು.‌ ಕೃತ್ಯದ ಆಧಾರದ‌ ಮೇಲೆ ದೆಹಲಿ ಪೊಲೀಸರಿಗೆ ಪ್ರಕರಣ ಹಸ್ತಾಂತರವಾಗಿತ್ತು.‌ ಇದೀಗ ಪತ್ನಿ ವರ್ತಿಕಾ ತನ್ನ ಮಗನನ್ನು ನೋಡಲು ಬಿಡುತ್ತಿಲ್ಲ ಎಂದು ರಾಷ್ಟ್ರೀಯ ಮಕ್ಕಳ‌ ರಕ್ಷಣಾ ಆಯೋಗಕ್ಕೆ ಪತಿ ದೂರು ನೀಡಿದ್ದರು.

ABOUT THE AUTHOR

...view details