ಕರ್ನಾಟಕ

karnataka

ETV Bharat / state

ಕ್ವಾರಂಟೈನ್​ಗೆ ರೂಮ್​ ನೀಡಲು ನಿರಾಕರಣೆ: ಬೆಂಗಳೂರಿನಲ್ಲಿ 69 ಹೋಟೆಲ್​ ಮಾಲೀಕರ ವಿರುದ್ಧ ದೂರು

ಕೆಲ ಹೋಟೆಲ್ ಮಾಲೀಕರು ಕೊರೊನಾ ಶಂಕಿತರ ಕ್ವಾರಂಟೈನ್​ಗಾಗಿ ಹೋಟೆಲ್ ರೂಂ ನೀಡಲು ನಿರಾಕರಿಸಿದ್ದಾರೆ. ಹೀಗಾಗಿ ನಗರದ 69 ಹೋಟೆಲ್ ಮಾಲೀಕರ ವಿರುದ್ಧ ಪಶ್ಚಿಮ ವಿಭಾಗ ಡಿಸಿಪಿ ರಮೇಶ್ ಬಾನೋರ್​ಗೆ ಬಿಬಿಎಂಪಿ ಜಂಟಿ‌ ಆಯುಕ್ತರು ದೂರು ನೀಡಿದ್ದಾರೆ.

By

Published : Apr 24, 2020, 2:23 PM IST

sddd
ಬೆಂಗಳೂರಿನಲ್ಲಿ 69 ಹೊಟೇಲ್ ಮಾಲೀಕರ ವಿರುದ್ದ ದೂರು

ಬೆಂಗಳೂರು: ಕೊರೊನಾ ಸೋಂಕಿತರ ಜೊತೆ ಸಂಪರ್ಕ ಹೊಂದಿದ್ದವರನ್ನು ಕ್ವಾರಂಟೈನ್​ನಲ್ಲಿ ಇಡಲು ಹೋಟೆಲ್​ ನೀಡದ ಮಾಲೀಕರ ವಿರುದ್ಧ ದೂರು ದಾಖಲಾಗಿದೆ.

ಶಂಕಿತರನ್ನು ಗುರುತಿಸಿ ನಗರದ ಹೋಟೆಲ್​, ಮದುವೆ ಮಂಟಪಗಳಲ್ಲಿ ಇರಿಸಿ ಕಣ್ಣಿಡಲಾಗಿದೆ. ಆದರೆ ಕ್ವಾರಂಟೈನ್​ಗಾಗಿ ಹೋಟೆಲ್ ರೂಮ್​ ನೀಡಲು ನಿರಾಕರಿಸಿದ ಮಾಲೀಕರ ವಿರುದ್ಧ ಪಶ್ಚಿಮ ವಿಭಾಗ ಡಿಸಿಪಿ ರಮೇಶ್ ಬಾನೋರ್​ಗೆ ಬಿಬಿಎಂಪಿ ಜಂಟಿ‌ ಆಯುಕ್ತರು ದೂರು ನೀಡಿದ್ದಾರೆ. ಹೋಟೆಲ್​ ನೀಡದ ಮಾಲೀಕರ ವಿರುದ್ಧದ ದೂರಿನಲ್ಲಿ, ನಗರದಲ್ಲಿ ಕೊರೊನಾ ಸೊಂಕು ಹೆಚ್ಚಾಗ್ತಿದೆ. ಸೋಂಕಿತರ ಜೊತೆ ಪ್ರೈಮರಿ ಹಾಗೂ ಸೆಕೆಂಡರಿ ಕಾಂಟ್ಯಾಕ್ಟ್ ಹೊಂದಿದ್ದವರ ಸಂಖ್ಯೆ ಏರಿಕೆಯಾಗಿದೆ. ಹೀಗಾಗಿ ಬಿಬಿಎಂಪಿ ನಗರದ ಹೋಟೆಲ್​ಗಳನ್ನು ವಶಕ್ಕೆ ಪಡೆದು ಶಂಕಿತರನ್ನ ಕ್ವಾರಂಟೈನ್ ಮಾಡ್ತಿದೆ. ಹಾಗೆಯೇ ಕೆಲ ಹೋಟೆಲ್​ಗಳಿಗೆ ಬಾಡಿಗೆ ನೀಡಲಾಗುತ್ತಿದೆ. ಆದರೆ ಕೆಲ ಮಾಲೀಕರು ಕ್ವಾರಂಟೈನ್​ಗೆ ಹೋಟೆಲ್ ನೀಡಲು ಹಿಂದೆಟು ಹಾಕುತ್ತಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಮನವಿ ಮಾಡಿದ್ದಾರೆ.

ಆದರೆ ಸದ್ಯ ಹೋಟೆಲ್​ಗಳ​ ಬಾಗಿಲು ಹಾಕಿದ್ದು, ವ್ಯಾಪಾರ ಸ್ಥಗಿತವಾಗಿದೆ. ಈ ಸಮಯದಲ್ಲಿ ಹೋಟೆಲ್​ಗಳನ್ನು ಕ್ವಾರಂಟೈನ್​ಗೆ ನೀಡಿದರೆ ಮುಂದೆ ಯಾರೂ ಹೋಟೆಲ್​ಗೆ ಬರಲ್ಲ ಎಂದು ಮಾಲೀಕರು ಆಕ್ರೋಶ ಹೊರ ಹಾಕಿದ್ದಾರೆ.

ABOUT THE AUTHOR

...view details