ಬೆಂಗಳೂರು : ಬಿಬಿಎಂಪಿ ವ್ಯಾಪ್ತಿಯ ಚುನಾಯಿತ ಪಾಲಿಕೆ ಸದಸ್ಯರ ಅವಧಿ ಮುಗಿದಿರುವುದರಿಂದ, 198 ವಾರ್ಡ್ಗಳಿಗೂ ನೋಡಲ್ ಅಧಿಕಾರಿಗಳನ್ನ ನೇಮಿಸಲಾಗಿದೆ. ವಾರ್ಡ್ನಲ್ಲಿ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದನೆ, ವಾರ್ಡ್ ಮೂಲಸೌಕರ್ಯಗಳ ಅಭಿವೃದ್ಧಿ ಕೈಗೊಳ್ಳುವ ಬಗ್ಗೆ ಆಯುಕ್ತರಾದ ಮಂಜುನಾಥ್ ಪ್ರಸಾದ್ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದರು. ಈ ವೇಳೆ ವಿಶೇಷ ಆಯುಕ್ತ(ಆಡಳಿತ) ಅನ್ಬುಕುಮಾರ್ ಹಾಗೂ ಇತರೆ ಅಧಿಕಾರಿಗಳು ಭಾಗಿಯಾಗಿದ್ದರು.
ತಿಂಗಳಿಗೆರಡು ಬಾರಿ ವಾರ್ಡ್ ಸಭೆಗೆ ಸೂಚನೆ ನೀಡಿದ ಆಯುಕ್ತರು - ಬೆಂಗಳೂರು ಸುದ್ದಿ
ವಾರ್ಡ್ ಸಮಿತಿ ಮಾಡಿಕೊಂಡು ತಿಂಗಳಿಗೆ ಮೊದಲನೇ ಮತ್ತು ಮೂರನೇ ಶನಿವಾರ ವಾರ್ಡ್ ಸಮಿತಿ ಸಭೆ ನಡೆಸಿ ವಾರ್ಡ್‌ನ ಕುಂದುಕೊರತೆಗಳ ಬಗ್ಗೆ ಚರ್ಚಿಸಬೇಕು..
ವಾರಕ್ಕೆ ಎರಡು ಬಾರಿ ಬೆಳಗಿನ ಜಾವ 6.30ಕ್ಕೆ ವಾರ್ಡ್ ಪರಿವೀಕ್ಷಣೆ ನಡೆಸಬೇಕು. ಪೌರಕಾರ್ಮಿಕರು, ಆಟೋ ಟಿಪ್ಪರ್, ಕಾಂಪ್ಯಾಕ್ಟರ್ಗಳ ಬಗ್ಗೆ ಮಾಹಿತಿ ಪಡೆಯಬೇಕು. ವಾರ್ಡ್ನಲ್ಲಿ ರಸ್ತೆ ದುರಸ್ಥಿ, ರಸ್ತೆ ಗುಂಡಿ ಮುಚ್ಚುವುದು, ಪಾದಚಾರಿ ಮಾರ್ಗ ದುರಸ್ಥಿಗೊಳಿಸುವುದು, ಪಾದಚಾರಿ ಮಾರ್ಗದಲ್ಲಿ ಅನಧಿಕೃತ ವ್ಯಾಪಾರ ಮಾಡುತ್ತಿರುವವರನ್ನು ತೆರವುಗೊಳಿಸುವುದು, ಮೋರಿ/ಚರಂಡಿಗಳಲ್ಲಿ ಹೂಳೆತ್ತುವ ಕಾರ್ಯ, ಬೀದಿ ದೀಪ ದುರಸ್ಥಿ, ಬ್ಲಾಕ್ ಸ್ಪಾಟ್(ಕಸ ಸುರಿಯುವ ಸ್ಥಳ)ಗಳ ತೆರವು, ಉದ್ಯಾನವನ ನಿರ್ವಹಣೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳ ಪರಿಶೀಲನೆ ಸೇರಿ ಇನ್ನಿತರೆ ಕಾರ್ಯಗಳ ಬಗ್ಗೆ ಮೇಲ್ವಿಚಾರಣೆ ನಡೆಸಬೇಕು ಎಂದರು.
ವಾರ್ಡ್ ಸಮಿತಿ ಮಾಡಿಕೊಂಡು ತಿಂಗಳಿಗೆ ಮೊದಲನೇ ಮತ್ತು ಮೂರನೇ ಶನಿವಾರ ವಾರ್ಡ್ ಸಮಿತಿ ಸಭೆ ನಡೆಸಿ ವಾರ್ಡ್‌ನ ಕುಂದುಕೊರತೆಗಳ ಬಗ್ಗೆ ಚರ್ಚಿಸಬೇಕು ಎಂದು ಸೂಚನೆ ನೀಡಿದರು.